For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಕೊಟ್ಟ ರಾಮ್‌ ಗೋಮಾಲ್ ವರ್ಮಾ

  |

  ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಉಪ್ಪಿಯ ಬರ್ತಡೇ ಡೈರೆಕ್ಷನ್ ಸಿನಿಮಾ ಘೋಷಣೆ ಮಾಡಬಹುದು ಅಥವಾ ಪೋಸ್ಟರ್ ಏನಾದರೂ ರಿಲೀಸ್ ಮಾಡಬಹುದು ಎಂಬ ಕುತೂಹಲ ಹುಟ್ಟಿಕೊಂಡಿದೆ. ಎಲ್ಲರ ದೃಷ್ಟಿ ಉಪ್ಪಿ ಡೈರೆಕ್ಷನ್ ಚಿತ್ರದ ಕಡೆ ಇರುವಾಗಲೇ ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಭರ್ಜರಿ ಸುದ್ದಿ ನೀಡಿದ್ದಾರೆ.

  ಸೂಪರ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಶುಭಕೋರಿರುವ ಆರ್‌ಜಿವಿ ಉಪ್ಪಿ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಸುದ್ದಿ ಕೊಟ್ಟಿದ್ದಾರೆ. ಈ ಸುದ್ದಿ ಕೇಳಿ ಇಡೀ ಸೌತ್ ಇಂಡಸ್ಟ್ರಿ ಅಚ್ಚರಿಯಿಂದ ನೋಡುತ್ತಿದೆ. ಅಷ್ಟಕ್ಕೂ, ವಿವಾದಾತ್ಮಕ ನಿರ್ದೇಶಕ ಕೊಟ್ಟ ಸರ್ಪ್ರೈಸ್ ಏನು? ಉಪೇಂದ್ರ ಹುಟ್ಟುಹಬ್ಬದಂದು ಆರ್‌ಜಿವಿ ಮಾಡಿದ ಟ್ವೀಟ್‌ನಲ್ಲಿ ಏನಿದೆ? ಮುಂದೆ ಓದಿ...

  ವೈರಲ್ ಪೋಸ್ಟರ್ ಬಗ್ಗೆ ಕೊನೆಗೂ ಮೌನಮುರಿದ ಉಪೇಂದ್ರ ವೈರಲ್ ಪೋಸ್ಟರ್ ಬಗ್ಗೆ ಕೊನೆಗೂ ಮೌನಮುರಿದ ಉಪೇಂದ್ರ

  ಉಪ್ಪಿ ಜೊತೆ ಸಿನಿಮಾ ಘೋಷಣೆ

  ಉಪ್ಪಿ ಜೊತೆ ಸಿನಿಮಾ ಘೋಷಣೆ

  ರಿಯಲ್ ಸ್ಟಾರ್ ಉಪೇಂದ್ರ ಜೊತೆ ರಾಮ್ ಗೋಪಾಲ್ ವರ್ಮಾ ಸಿನಿಮಾ ಘೋಷಿಸಿದ್ದಾರೆ. ಉಪೇಂದ್ರ ಜೊತೆ ನಾನು ಆಕ್ಷನ್ ಚಿತ್ರ ಮಾಡುತ್ತಿದ್ದೇನೆ, ಶೀಘ್ರದಲ್ಲೇ ಈ ಪ್ರಾಜೆಕ್ಟ್ ಶುರು ಮಾಡ್ತೇವೆ ಎಂದು ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ. ಇದೇ ವೇಳೆ ಉಪೇಂದ್ರ ಅವರ ಬರ್ತಡೇಗೆ ಶುಭಕೋರಿದ್ದಾರೆ.

  ಉಪೇಂದ್ರ ಹುಟ್ಟುಹಬ್ಬಕ್ಕೆ 'ರಿಯಲ್ ಸರ್ಪ್ರೈಸ್' ಕೊಡಲು ಸಜ್ಜಾದ ಆರ್ ಚಂದ್ರುಉಪೇಂದ್ರ ಹುಟ್ಟುಹಬ್ಬಕ್ಕೆ 'ರಿಯಲ್ ಸರ್ಪ್ರೈಸ್' ಕೊಡಲು ಸಜ್ಜಾದ ಆರ್ ಚಂದ್ರು

  ಕ್ರೇಜ್ ಹೆಚ್ಚಿಸಿದ ಕಾಂಬಿನೇಷನ್

  ಕ್ರೇಜ್ ಹೆಚ್ಚಿಸಿದ ಕಾಂಬಿನೇಷನ್

  ಭಾರತೀಯ ಅತ್ಯುತ್ತಮ ನಿರ್ದೇಶಕರ ಪೈಕಿ ಉಪೇಂದ್ರ ಮೊದಲ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. ಅದೇ ರೀತಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಚಿತ್ರಗಳು ಅಂದ್ರೆ ಅಷ್ಟೇ ದೊಡ್ಡ ಕ್ರೇಜ್ ಇದೆ. ಡೈರೆಕ್ಷನ್ ವಿಭಾಗದಲ್ಲಿ ಇಷ್ಟು ದೊಡ್ಡ ಹೆಸರು ಮಾಡಿರುವ ಇಬ್ಬರು ಸೇರಿ ಸಿನಿಮಾವೊಂದು ಮಾಡ್ತಿದ್ದಾರೆ ಅಂದ್ರೆ ಅದರ ಕ್ರೇಜ್ ಎಷ್ಟಿರಬಹುದು ಊಹಿಸಿ.

  ಕಬ್ಜ ಚಿತ್ರ ಮೆಚ್ಚಿದ ವರ್ಮಾ

  ಕಬ್ಜ ಚಿತ್ರ ಮೆಚ್ಚಿದ ವರ್ಮಾ

  ಆರ್ ಚಂದ್ರು ನಿರ್ದೇಶನದಲ್ಲಿ ತಯಾರಾಗುತ್ತಿರುವ ಕಬ್ಜ ಸಿನಿಮಾದ ಬಗ್ಗೆ ರಾಮ್ ಗೋಪಾಲ್ ವರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ಯಾನ್ ಇಂಡಿಯಾ ಭಾಷೆಯಲ್ಲಿ ತಯಾರಾಗುತ್ತಿರುವ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದರು ಆರ್ ಜಿ ವಿ. ವರ್ಮಾ ಮತ್ತು ಉಪೇಂದ್ರ ಸಿನಿಮಾ ಮಾಡಿದ್ರೆ ಹೇಗಿರುತ್ತೆ ಎಂದು ಅನೇಕರು ಕಾಯುತ್ತಿದ್ದರು. ಇದೀಗ, ಈ ನಿರೀಕ್ಷೆ ನಿಜವಾಗ್ತಿದೆ. ಇಬ್ಬರು ಮಾಸ್ಟರ್ ಕ್ಲಾಸ್ ಸಿನಿಮಾ ಮೇಕರ್ಸ್ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ.

  ಕಿಲ್ಲಿಂಗ್ ವೀರಪ್ಪನ್

  ಕಿಲ್ಲಿಂಗ್ ವೀರಪ್ಪನ್

  2016ರಲ್ಲಿ ಶಿವರಾಜ್ ಕುಮಾರ್ ಜೊತೆ ರಾಮ್ ಗೋಪಾಲ್ ವರ್ಮಾ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಮಾಡಿದ್ದರು. ಚಿತ್ರದ ತಕ್ಕ ಮಟ್ಟಿಗೆ ಸಕ್ಸಸ್ ಕಂಡಿತ್ತು. ಅದಾದ ಮೇಲೆ ಧನಂಜಯ್ ಜೊತೆ ಭೈರವಗೀತಾ ಚಿತ್ರ ಮಾಡಿದರು. ತೆಲುಗಿನಲ್ಲಿ ತಯಾರಾದ ಈ ಚಿತ್ರ ಕನ್ನಡದಲ್ಲೂ ರಿಲೀಸ್ ಆಗಿತ್ತು. ಈಗ ಮತ್ತೆ ಕನ್ನಡದಲ್ಲಿ ಸಿನಿಮಾ ಮಾಡಲು ವರ್ಮಾ ಮುಂದಾಗಿದ್ದಾರೆ. ಈ ಸಲ ರಿಯಲ್ ಸ್ಟಾರ್ ಉಪೇಂದ್ರರನ್ನು ನಾಯಕನನ್ನಾಗಿಸಿ ಆಕ್ಷನ್ ಚಿತ್ರ ಮಾಡುವುದಾಗಿ ಹೇಳಿದ್ದಾರೆ.

  ಉಪ್ಪಿ ಡೈರೆಕ್ಷನ್ ಚಿತ್ರ

  ಉಪ್ಪಿ ಡೈರೆಕ್ಷನ್ ಚಿತ್ರ

  ಕೊರೊನಾ ಪರಿಸ್ಥಿತಿ ನೋಡಿಕೊಂಡು ಡೈರೆಕ್ಷನ್ ಸಿನಿಮಾ ಘೋಷಣೆ ಮಾಡಲು ಉಪೇಂದ್ರ ನಿರ್ಧರಿಸಿದ್ದಾರೆ. ಅದಕ್ಕಾಗಿ ಸಿದ್ಧತೆ ನಡೆಯುತ್ತಿದ್ದು, ಸ್ಕ್ರಿಪ್ಟ್ ಮುಗಿದಿದೆಯಂತೆ. ಸದ್ಯಕ್ಕೆ ಒಪ್ಪಿಕೊಂಡಿರುವ ಕಮಿಟ್‌ಮೆಂಟ್‌ಗಳನ್ನು ಮುಗಿಸಿ ತಮ್ಮ ಸ್ವಂತ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿರುವ ಚಿತ್ರಕ್ಕೆ ಹೈ ಹಾಕಬೇಕಿದೆ. ಬಹುಶಃ ಹುಟ್ಟುಹಬ್ಬದ ದಿನ ಈ ಚಿತ್ರದ ಬಗ್ಗೆ ಏನಾದರೂ ಮಾಹಿತಿ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದಾರೆ ಫ್ಯಾನ್ಸ್. ಹುಟ್ಟುಹಬ್ಬದ ಪ್ರಯುಕ್ತ, ಹೊಸ ಸಿನಿಮಾದ ಹೆಸರು ಎನ್ನಲಾದ ಸ್ಟೈಲ್‌ನ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

  English summary
  Sensational Director Ram gopal varma starting action film with real star Upendra. announcement will soon.
  Saturday, September 18, 2021, 11:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X