GST ಯಶಸ್ಸಿನ ನಂತರ GST-2 ಮಾಡಲು ಮುಂದಾದ ವರ್ಮಾ

By Bharath Kumar

ಅಮೆರಿಕನ್ ಪೋರ್ನ್ ನಟಿ ಮಿಯಾ ಮಲ್ಕೋವಾ ಜೊತೆ 'ಗಾಡ್ ಸೆಕ್ಸ್ ಅಂಡ್ ಟ್ರೂತ್' (GST) ಚಿತ್ರವನ್ನ ಮಾಡಿ ದೇಶದಲ್ಲೆಡೆ ಟೀಕೆಗೆ ಗುರಿಯಾಗಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮ, ಈಗ ಇನ್ನು ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.

'ಗಾಡ್ ಸೆಕ್ಸ್ ಅಂಡ್ ಟ್ರೂತ್' ಚಿತ್ರದ ಮುಂದುವರೆದ ಭಾಗ ಮಾಡಲು ನಿರ್ಧರಿಸಿದ್ದು, ಈ ವಿಷ್ಯವನ್ನ ಖುದ್ದು ಆರ್.ಜಿ.ವಿ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ.

ಕ್ರಾಂತಿಕಾರಿ ಲೈಂಗಿಕತೆ ಕುರಿತು ಈ ಸಿನಿಮಾ ಮಾಡಿದ್ದು, ಮಹಿಳೆಯೊಬ್ಬಳ ಲೈಂಗಿಕ ಆಸಕ್ತಿ ಮತ್ತು ಪ್ರಭಾವದ ಕುರಿತು ಕಥೆ ಮಾಡಿದ್ದಾರೆ. 20 ನಿಮಿಷಗಳ ಈ ಕಿರುಚಿತ್ರದಲ್ಲಿ ಮಿಯಾ ಮಲ್ಕೋವಾ ನಗ್ನವಾಗಿ ಅಭಿನಯಿಸಿದ್ದಾರೆ.

Ram gopal varma starting GST2

ಸದ್ಯ, 'ಪದ್ಮಾವತ್', 'ಟೈಗರ್ ಜಿಂದಾ ಹೈ' ಚಿತ್ರಗಳನ್ನ ಹಿಂದಿಕ್ಕಿರುವ 'ಗಾಡ್ ಸೆಕ್ಸ್ ಅಂಡ್ ಟ್ರೂತ್' ಟ್ರೆಂಡಿಂಗ್ ನಲ್ಲಿ ಟಾಪ್ ನಲ್ಲಿದೆ. ಇದೇ ಸಂತಸದಲ್ಲಿರುವ ಆರ್.ಜಿ.ವಿ ಮತ್ತೊಂದು ಭಾಗವನ್ನ ರಿಲೀಸ್ ಮಾಡಲು ಸಿದ್ದವಾಗುತ್ತಿದ್ದಾರೆ.

Ram gopal varma starting GST2

ಈ ಬಗ್ಗೆ ಹೆಚ್ಚೇನೂ ಬಿಟ್ಟುಕೊಡದ ರಾಮ್ ಗೋಪಾಲ್ ವರ್ಮಾ, ಎರಡನೇ ಭಾಗವನ್ನ ಮಾಡುವುದಾಗಿ ತಿಳಿಸಿದ್ದಾರೆ ಅಷ್ಟೇ. ಬಹುಶಃ ಮಿಯಾ ಮಲ್ಕೋವಾ ಜೊತೆಯಲ್ಲಿ ಈ ಭಾಗವೂ ಮುಂದುವರೆಯಬಹುದು. ಇನ್ನುಳಿದಂತೆ ಯಾವಾಗ ಬಿಡುಗಡೆ ಮಾಡ್ತಾರೆ ಎಂಬುದು ಕಾದುನೋಡಬೇಕಿದೆ.

More from Filmibeat

English summary
''Owing to the fantastically awesome response to God Sex Truth I am starting GST2 very soon'' says Director Ram gopal varma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X