ವರ್ಮಾ ಮಾಡಿದ ಆ ಚಿತ್ರದಿಂದಲೇ ಸಿಎಂ ಸ್ಥಾನ ಕಳೆದುಕೊಂಡ್ರಂತೆ ಚಂದ್ರಬಾಬು.!

ಆಂಧ್ರಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಂದ್ರ ಬಾಬು ನಾಯ್ದು ಸಾರಥ್ಯದ ಟಿಡಿಪಿ ಸರ್ಕಾರ ನೆಲಕಚ್ಚಿದ್ದು, ಜಗಮೋಹನ್ ರೆಡ್ಡಿ ಸಾರಥ್ಯದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆದುಕೊಂಡಿದೆ.

ಕಳೆದ ಐದು ವರ್ಷ ಮುಖ್ಯಮಂತ್ರಿ ಆಗಿದ್ದ ಚಂದ್ರಬಾಬು ನಾಯ್ಡು ದಿಢೀರ್ ಅಂತ ಈ ಸ್ಥಿತಿ ತಲುಪಲು ಕಾರಣವೇನು ಎಂದು ಹುಡುಕುತ್ತಾ ಹೋದರೆ, ಕೆಲವರ ಬೆರಳು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಕಡೆ ತೋರಿಸುತ್ತಿದ್ದಾರೆ.

ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಸೋಲಿನಲ್ಲಿ ವರ್ಮಾ ಅವರ ಶ್ರಮ ಕೂಡ ಎಂದು ಸಾಮಾಜಿಕ ಜಾಲಾತಾಣದಲ್ಲಿ ಟ್ರೋಲ್ ಆಗ್ತಿದ್ದಾರೆ ಆರ್.ಜಿ.ವಿ. ಸ್ವತಃ ವರ್ಮಾ ಕೂಡ ಇದನ್ನೆ ಹೇಳಿಕೊಂಡು ಮಾಜಿ ಸಿಎಂ ಬಾಬು ಅವರನ್ನ ಟ್ರೋಲ್ ಮಾಡ್ತಿದ್ದಾರೆ.

ಹೌದು, ರಾಮ್ ಗೋಪಾಲ್ ವರ್ಮಾ ಮಾಡಿದ್ದ ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರದಲ್ಲಿ ಚಂದ್ರಬಾಬು ನಾಯ್ಡು ಅವರ ಇನ್ನೊಂದು ಮುಖವನ್ನ ಪರಿಚಯ ಮಾಡಿದ್ದರು. ಎನ್.ಟಿ.ಆರ್ ಗೆ ನಂಬಿಕೆ ದ್ರೋಹ ಮಾಡಿದ್ರು. ಅವರ ಬ್ನೆನಿಗೆ ಚಾಕು ಹಾಕಿದರು. ಎನ್.ಟಿ.ಆರ್ ಗೆ ಮಾನಸಿಕ ಹಿಂಸೆ ನೀಡಿದ್ರು ಎಂಬಂತೆ ಸಿನಿಮಾ ಮಾಡಲಾಗಿತ್ತು. ಇದರ ಪರಿಣಾಮ ಈಗ ಚಂದ್ರಬಾಬು ನಾಯ್ಡುಗೆ ಗೇಟ್ ಪಾಸ್ ಸಿಕ್ಕಿದೆಯಂತೆ.

Ram gopal varma troll on chandrababu naidu

ಸದ್ಯ ವೈಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿರುವ ಎನ್.ಟಿ.ಆರ್ ಪತ್ನಿ ಲಕ್ಷ್ಮಿ ಅವರ ದೃಷ್ಟಿಕೋನದಲ್ಲಿ ಎನ್.ಟಿ.ಆರ್ ಅವರ ಕೊನೆಯ ಹಂತದ ಜೀವನ ಹೇಗಿತ್ತು ಎಂದು ಈ ಚಿತ್ರದಲ್ಲಿ ತೋರಿಸಿದ್ದರು. ಈ ಚಿತ್ರವನ್ನ ಆಂಧ್ರಪ್ರದೇಶದಲ್ಲಿ ಬಿಡುಗಡೆ ಮಾಡಲು ಚಂದ್ರಬಾಬು ನಾಯ್ಡು ಬಿಟ್ಟಿರಲಿಲ್ಲ.

ಬೇರೆ ರಾಜ್ಯಗಳಲ್ಲಿ ತೆರೆಕಂಡಿದ್ದ ಸಿನಿಮಾ ನಂತರ ಆಂಧ್ರಪ್ರದೇಶದಲ್ಲಿ ಬಿಡುಗಡೆಯಾಗಿತ್ತು. ಈಗ ಆಂಧ್ರದಲ್ಲಿ ಸರ್ಕಾರವೇ ಬದಲಾಗಿದೆ. ಅಧಿಕಾರದಲ್ಲಿದ್ದ ಟಿಡಿಪಿಗೆ ಭಾರಿ ಮುಖಭಂಗವಾಗಿದೆ. ಈ ಖುಷಿಯನ್ನ ಆರ್.ಜಿ.ವಿ ಕೂಡ ಸೆಲೆಬ್ರೆಟ್ ಮಾಡ್ತಿದ್ದಾರೆ.

More from Filmibeat

English summary
Director Ram gopal varma blast on chandrababu naidu after YSRCP win in andhra pradesh assembly elections 2019. ವರ್ಮಾ ಮಾಡಿದ ಆ ಚಿತ್ರದಿಂದಲೇ ಸಿಎಂ ಸ್ಥಾನ ಕಳೆದುಕೊಂಡ್ರಂತೆ ಚಂದ್ರಬಾಬು.!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X