For Quick Alerts
  ALLOW NOTIFICATIONS  
  For Daily Alerts

  ಮಹಿಳೆಯರ ದೇಹದ ಬಗ್ಗೆ ಸೆಕ್ಸಿ ಕಾಮೆಂಟ್ ಮಾಡಿದ ವರ್ಮ

  By Bharath Kumar
  |

  ಅದ್ಯಾಕೋ, ನಿರ್ದೇಶಕ ರಾಮ್ ಗೋಪಾಲ್ ವರ್ಮಗೆ ಮಹಿಳೆಯರ ಬಗ್ಗೆ ಕಾಮೆಂಟ್ ಮಾಡಿಲ್ಲ ಅಂದ್ರೆ, ತಿಂದ ಊಟ ಜೀರ್ಣ ಆಗಲ್ಲ ಹಾಗೂ ಕಣ್ಣಿಗೆ ನಿದ್ದೆ ಬರಲ್ಲ ಅನ್ಸುತ್ತೆ. ಅದಕ್ಕೆ ಅನ್ಸುತ್ತೆ, ಪದೇ ಪದೇ ಇಂತಹದೊಂದು ಪ್ರಯೋಗಕ್ಕೆ ಮುಂದಾಗ್ತಾರೆ ಈ ವಿವಾದಾತ್ಮಕ ನಿರ್ದೇಶಕ.

  ಕಳೆದ ವರ್ಷ ವಿಶ್ವ ಮಹಿಳಾ ದಿನಾಚಾರಣೆ ದಿನದಂದು ಮಹಿಳೆಯರ ಬಗ್ಗೆ ಕೀಳಾಗಿ ಕಾಮೆಂಟ್ ಮಾಡಿದ್ದ ರಾಮ್ ಗೋಪಾಲ್ ವರ್ಮ, ಇದೀಗ ಮತ್ತೆ ಮಹಿಳೆಯರ ದೇಹದ ಬಗ್ಗೆ ಕಾಮೆಂಟ್ ಮಾಡಿ ಚರ್ಚೆಗೆ ಕಾರಣವಾಗಿದ್ದಾರೆ.

  'ಮಹಿಳಾ ದಿನ'ಕ್ಕೆ ವರ್ಮಾ ಕೀಳು ಶುಭಾಶಯ, ದೂರು ದಾಖಲು

  ''ಈ ಭೂಮಿ ಮೇಲೆ, ಮಹಿಳೆಯ ದೇಹಕ್ಕಿಂತ ಸುಂದರವಾದ ಸ್ಥಳ ಎಲ್ಲಿಯೂ ಎಲ್ಲ ಎಂದು ನಾನು ನಂಬುತ್ತೇನೆ'' ಎಂದು ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ ಆರ್.ಜಿ.ವಿ.

  ಸದ್ಯ, ರಾಮ್ ಗೋಪಾಲ್ ವರ್ಮ ಪೋರ್ನ್ ನಟಿ ಮಿಯಾ ಮಲ್ಕೋವಾ ಜೊತೆ 'ಗಾಡ್ ಸೆಕ್ಸ ಅಂಡ್ ಟ್ರೂತ್' ಎಂಬ ಹೊಸ ಸಿನಿಮಾ ಮಾಡಿದ್ದು, ಜನವರಿ 26 ರಂದು ರಿಲೀಸ್ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಪೋಸ್ಟರ್ ಮತ್ತು ಟ್ರೈಲರ್ ಬಿಡುಗಡೆಯಾಗಿದ್ದು, ಸೆಕ್ಸ್ ನಟಿಯ ಜೀವನದ ಬಗ್ಗೆ ಕಥೆ ಹೇಳಲು ಹೊರಟಿದ್ದಾರೆ ವರ್ಮ.

  ಹೀಗಾಗಿ, ಈ ಚಿತ್ರದ ಪ್ರಚಾರ ಮಾಡುತ್ತಿರುವ ಆರ್.ಜಿ.ವಿ ಮಹಿಳೆಯ ದೇಹದ ಬಗ್ಗೆ ಹೇಳಿಕೆ ನೀಡುವ ಮೂಲಕ ಮಹಿಳೆಯರ ಗಮನ ಸೆಳೆಯುತ್ತಿದ್ದಾರೆ.

  English summary
  Director Ram Gopal varma who recently launched the trailer of his upcoming film 'god sex and truth' has stirred another controversy with his sexist tweet about women.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X