ರಿಲೀಸ್‌ಗೂ ಮೊದಲೇ 'ವಿಕ್ರಾಂತ್ ರೋಣ' ಚಿತ್ರದ ಬಗ್ಗೆ ಭವಿಷ್ಯ ನುಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

ಇತ್ತೀಚಿಗೆ ದಕ್ಷಿಣ ಭಾರತದ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗ್ತಿವೆ. ಅದರಲ್ಲೂ 'ಕೆಜಿಎಫ್‌ ಚಾಪ್ಟರ್ 2' ಸಿನಿಮಾ ಬಂದ ಬಳಿಕ ಕನ್ನಡ ಸಿನಿಮಾಗಳು ಕೂಡ ಬಾಲಿವುಡ್‌ ಸಿನಿಮಾಗಳಿಗೆ ಟಕ್ಕರ್ ಕೊಡುತ್ತಿವೆ. ಈ ಮೂಲಕ ಕನ್ನಡ ಸಿನಿಮಾಗಳ ಮೇಲೆ ಇದ್ದ ಅಸಡ್ಡೆ ಕೊಂಚ ಕಡಿಮೆಯಾಗಿದೆ. ಆ ಮಟ್ಟಿಗೆ ಕನ್ನಡದ ಸಿನಿಮಾಗಳು ಇತ್ತೀಚಿಗೆ ರಾಷ್ಟ್ರ ಮಟ್ಟದಲ್ಲಿ ಶೈನ್ ಆಗುತ್ತಿವೆ.

ಕನ್ನಡ ಸಿನಿಮಾಗಳ ಮೇಲೆ ರಾಷ್ಟ್ರ ಮಟ್ಟದಲ್ಲೂ ಹೆಚ್ಚು ಮಾರ್ಕೆಟ್ ಓಪನ್ ಆಗಿರುವುದರಿಂದ ಮುಂಬರುವ ಬಿಗ್ ಬಜೆಟ್ ಸಿನಿಮಾಗಳಿಗೆ ಒಳ್ಳೆಯ ಹೈಪ್ ಕ್ರಿಯೆಟ್ ಆಗಿದೆ. ಈಗಾಗಲೇ ಕನ್ನಡದ ಪ್ಯಾನ್‌ ಇಂಡಿಯಾ ಸಿನಿಮಾಗಳು ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ.

ಈ ಪೈಕಿ ಆರು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ 'ವಿಕ್ರಾಂತ್ ರೋಣ' ಕೂಡ ಒಂದಾಗಿದೆ. ಅನೂಪ್ ಭಂಡಾರಿ ನಿರ್ದೇಶನ ಮಾಡಿರುವ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿದೆ. ಈಗಾಗಲೇ ಸಿನಿಮಾದ ಟೀಸರ್‌, ಪೋಸ್ಟರ್‌ಗಳ ಮೂಲಕವೇ ಸಿನಿ ಪ್ರೇಕ್ಷಕರನ್ನು ಸೆಳಯುವಲ್ಲಿ 'ವಿಕ್ರಾಂತ್ ರೋಣ' ಸಖತ್ ಟ್ರೆಂಡ್ ಸೃಷ್ಟಿಸಿದೆ. ಸದ್ಯ ಈ ಚಿತ್ರದ ಬಗ್ಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ವಿಕ್ರಾಂತ್ ರೋಣ' ಚಿತ್ರದ ಬಗ್ಗೆ ಭವಿಷ್ಯ ನುಡಿದ ವರ್ಮಾ

'ವಿಕ್ರಾಂತ್ ರೋಣ' ಸಿನಿಮಾ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. ಪಿವಿಆರ್ ಜೊತೆ 'ವಿಕ್ರಾಂತ್ ರೋಣ' ಸಿನಿಮಾ ಕೈ ಜೋಡಿಸಿರುವ ಸುದ್ದಿಯನ್ನು ಕೇಳಿ ಖುಷಿಯಾಯಿತು. ಈ ಚಿತ್ರದ ಕೆಲವು ದೃಶ್ಯಗಳನ್ನು ನಾನು ನೋಡಿದ್ದೇನೆ. ಇದು ಕನ್ನಡದಿಂದ ಮತ್ತೊಂದು ದೊಡ್ಡ ಸಿನಿಮಾ ಆಗಿ ಹೊರ ಹೊಮ್ಮಲಿದೆ. ಬ್ಲಾಕ್ ಬಸ್ಟರ್ ಸಿನಿಮಾ 'ರಂಗಿತರಂಗ' ಖ್ಯಾತಿಯ ಅನೂಪ್ ಭಂಡಾರಿ 'ವಿಕ್ರಾಂತ್ ರೋಣ' ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

 ಸಿನಿಮಾಗೆ ಸಕ್ಸಸ್‌ಗೆ ವಿಶ್‌ ಮಾಡಿದ್ದ ವರ್ಮಾ

ಸಿನಿಮಾಗೆ ಸಕ್ಸಸ್‌ಗೆ ವಿಶ್‌ ಮಾಡಿದ್ದ ವರ್ಮಾ

ಏಪ್ರಿಲ್ 24 ರಂದು ರಾಮ್‌ ಗೋಪಾಲ್‌ ವರ್ಮಾ 'ವಿಕ್ರಾಂತ್ ರೋಣ' ಚಿತ್ರದ ಟೀಸರ್ ಶೇರ್ ಮಾಡಿಕೊಂಡಿದ್ದರು. 'ವಿಕ್ರಾಂತ್ ರೋಣ' ಚಿತ್ರದ ಕೆಲವು 3ಡಿ ದೃಶ್ಯಗಳನ್ನು ನೋಡುವ ಅವಕಾಶ ನನಗೆ ಸಿಕ್ಕಿತು. ಇದು ನೆಕ್ಸ್ಟ್ ಲೆವೆಲ್‌ನಲ್ಲಿದ್ದು, ಅತ್ಯದ್ಬುತವಾಗಿದೆ. ಜುಲೈ 28 ರಂದು ಪೂರ್ತಿ ಸಿನಿಮಾ ನೋಡಲು ಕಾತುರ ಮೂಡಿದೆ ಎಂದು ಸಿನಿಮಾ ಬಗೆಗಿನ ತಮ್ಮ ಕುತೂಹಲವನ್ನು ವ್ಯಕ್ತಪಡಿಸಿದ್ದರು.

 ಹಿಂದಿಯಲ್ಲೂ 'ವಿಕ್ರಾಂತ್ ರೋಣ'ಗೆ ಕ್ರೇಜ್

ಹಿಂದಿಯಲ್ಲೂ 'ವಿಕ್ರಾಂತ್ ರೋಣ'ಗೆ ಕ್ರೇಜ್

'ವಿಕ್ರಾಂತ್ ರೋಣ' ಸಿನಿಮಾ 3ಡಿ ಅವತರಣಿಕೆಯೆಲ್ಲಿ ಮೂಡಿ ಬರುತ್ತಿದೆ. ಈಗಾಗಲೇ ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದಲ್ಲಿಯೇ ಹೈಪ್ ಕ್ರಿಯೇಟ್‌ ಆಗಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ತೆರೆ ಕಾಣಲಿದೆ. ಸದ್ಯ ಹಿಂದಿಯಲ್ಲಿ 'ವಿಕ್ರಾಂತ್ ರೋಣ' ಸಿನಿಮಾವನ್ನು ಬಿಡುಗಡೆ ಮಾಡುವ ಹಕ್ಕನ್ನು ಪಿವಿಆರ್ ಸಂಸ್ಥೆವಹಿಸಿಕೊಂಡಿದ್ದು, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ಸಿನಿಮಾ ಅದ್ಧೂರಿಯಾಗಿ ಯಶಸ್ಸು ಕಾಣುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

 ಜುಲೈ 28ಕ್ಕೆ ರಾರಾಜಿಸಲಿದೆ 'ವಿಕ್ರಾಂತ್ ರೋಣ' ಚಿತ್ರ

ಜುಲೈ 28ಕ್ಕೆ ರಾರಾಜಿಸಲಿದೆ 'ವಿಕ್ರಾಂತ್ ರೋಣ' ಚಿತ್ರ

ಕಿಚ್ಚ ಸುದೀಪ್ ಅಭಿನಯದ ಬಹುನೀರಿಕ್ಷಿತ ಸಿನಿಮಾ 'ವಿಕ್ರಾಂತ್ ರೋಣ' ಚಿತ್ರ ಜುಲೈ 28ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ಮೇಲೆ ಈಗಾಗಲೇ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಹೆಚ್ಚಾಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಕೂಡ ಸಿನಿಮಾ ಮೇಲೆ ನಿರೀಕ್ಷೆ ಇದೆ. ಸದ್ಯ ವಿದೇಶದಲ್ಲಿ ವಿತರಕರು 'ವಿಕ್ರಾಂತ್ ರೋಣ' ಚಿತ್ರದ ಹಕ್ಕುಗಳನ್ನು ಖರೀದಿಸುವಲ್ಲಿ ಹೆಚ್ಚಿನ ಉತ್ಸಾಹ ತೋರಿದ್ದಾರೆ. ಅದರ ಪರಿಣಾಮವಾಗಿಯೇ ರಿಲೀಸ್‌ಗೂ ಮೊದಲೇ ಸಿನಿಮಾ ಬರೋಬ್ಬರಿ 10 ಕೋಟಿ ರೂ ಡೀಲ್ ನಡೆಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಾರೆ. 'ವಿಕ್ರಾಂತ್ ರೋಣ' ಸಿನಿಮಾಗೆ ವಿದೇಶದಲ್ಲೂ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.

More from Filmibeat

English summary
Ram Gopal Varma Tweets About Kichcha Sudeep Vikrat Rona Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X