For Quick Alerts
  ALLOW NOTIFICATIONS  
  For Daily Alerts

  ಮತ್ತೊಮ್ಮೆ ಕನ್ನಡದ ನಟಿಗೆ ಬೋಲ್ಡ್ ಆದ ರಾಮ್ ಗೋಪಾಲ್ ವರ್ಮ

  |

  ರಾಮ್ ಗೋಪಾಲ್ ವರ್ಮ ಕನ್ನಡದ ನಟಿಯರ ಮೇಲೆ ಒಂದು ಕಣ್ಣು ಇಟ್ಟಿರುತ್ತಾರೆ. ಕನ್ನಡದ ಕೆಲವು ಹೀರೋಯಿನ್ ನಟನೆ ಅಂದರೆ ಅವರಿಗೆ ಬಹಳ ಇಷ್ಟ. ಆಗಾಗ ಕನ್ನಡದ ನಟಿಯರ ಬಗ್ಗೆ ಟ್ವಿಟ್ಟರ್ ನಲ್ಲಿ ಹೊಗಳುತ್ತಿರುತ್ತಾರೆ.

  ಇದೀಗ ವರ್ಮ ನಟಿ ನಭಾ ನಟೇಶ್ ಗೆ ಬೋಲ್ಡ್ ಆಗಿದ್ದಾರೆ. 'ಇಸ್ಮಾರ್ಟ್ ಶಂಕರ್' ತೆಲುಗು ಸಿನಿಮಾದಲ್ಲಿ ನಭಾ ನಟೇಶ್ ನಾಯಕಿಯಾಗಿದ್ದಾರೆ. ಈ ಸಿನಿಮಾವನ್ನು ಪೂರಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ. ತಮ್ಮ ಗೆಳೆಯನ ನಿರ್ದೇಶನದ ಈ ಚಿತ್ರವನ್ನು ರಾಮ್ ಗೋಪಾಲ್ ವರ್ಮ ವೀಕ್ಷಿಸಿದ್ದಾರೆ.

  ನಭಾ ನಟೇಶ್ ಮೈಮೇಲೆ ಬಿಯರ್ ಚೆಲ್ಲಿ ಸಂಭ್ರಮಿಸಿದ ವರ್ಮಾ ನಭಾ ನಟೇಶ್ ಮೈಮೇಲೆ ಬಿಯರ್ ಚೆಲ್ಲಿ ಸಂಭ್ರಮಿಸಿದ ವರ್ಮಾ

  'ಇಸ್ಮಾರ್ಟ್ ಶಂಕರ್' ಸಿನಿಮಾಗೆ ದೊಡ್ಡ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರತಂಡ ಸಕ್ಸಸ್ ಪಾರ್ಟಿ ಮಾಡಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವರ್ಮ, ನಭಾ ಜೊತೆಗೆ ಫೋಟೋ ತೆಗೆದುಕೊಂಡು ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

  ನಭಾರನ್ನು 'ಇಲಿಯಾನ 2.O' ಎಂದ ವರ್ಮ

  ನಭಾರನ್ನು 'ಇಲಿಯಾನ 2.O' ಎಂದ ವರ್ಮ

  'ಇಸ್ಮಾರ್ಟ್ ಶಂಕರ್' ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇದ್ದು, ಕನ್ನಡ ನಭಾ ನಟೇಶ್ ಕೂಡ ಒಬ್ಬರಾಗಿದ್ದಾರೆ. ಚಿತ್ರದಲ್ಲಿ ಗ್ಲಾಮರ್ ಲುಕ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ನೋಡಿರುವ ರಾಮ್ ಗೋಪಾಲ್ ವರ್ಮ ನಭಾ ನಟನೆಗೆ ಬೋಲ್ಡ್ ಆಗಿದ್ದಾರೆ. ನಭಾ ಬಗ್ಗೆ ಟ್ವೀಟ್ ಮಾಡಿರುವ ಅವರು 'ಇಲಿಯಾನ 2.O' ಎಂದು ವರ್ಣಿಸಿದ್ದಾರೆ.

  ನಭಾ ಮೇಲೆ ಬಿಯರ್ ಅಭಿಷೇಕ

  ನಭಾ ಮೇಲೆ ಬಿಯರ್ ಅಭಿಷೇಕ

  ಈ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ರಾಮ್ ಗೋಪಾಲ್ ವರ್ಮ ಭಾಗಿಯಾಗಿದ್ದು, ಬಿಯರ್ ಬಾಟಲ್ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ. ಇದೇ ವೇಳೆ ನಟಿ ನಭಾ ನಟೇಶ್ ಅವರ ಮೈಮೇಲೆಯಲ್ಲೆ ಬಿಯರ್ ಚೆಲ್ಲಿ ಸಂಭ್ರಮಿಸಿದ್ದಾರೆ. ನಟಿ ಚಾರ್ಮಿರನ್ನು ತಬ್ಬಿಕೊಂಡಿದ್ದಾರೆ. ಈ ವಿಡಿಯೋವನ್ನ ಸ್ವತಃ ಆರ್.ಜಿ.ವಿ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

  ಮಾನ್ವಿತಾ ನಟನೆ ಮೆಚ್ಚಿದ ಆರ್ ಜಿ ವಿ

  ಮಾನ್ವಿತಾ ನಟನೆ ಮೆಚ್ಚಿದ ಆರ್ ಜಿ ವಿ

  ಈ ಹಿಂದೆ ನಿರ್ದೇಶಕ ಸೂರಿ ತಮ್ಮ 'ಟಗರು' ಸಿನಿಮಾವನ್ನು ರಾಮ್ ಗೋಪಾಲ್ ವರ್ಮರಿಗೆ ತೋರಿಸಿದ್ದರು. ಸಿನಿಮಾ ನೋಡಿದ ಮೇಲೆ ಮಾನ್ವಿತಾಗೆ ವರ್ಮ ಫಿದಾ ಆಗಿದ್ದರು. ಮಾನ್ವಿತಾ ಬಗ್ಗೆ ಟ್ವೀಟ್ ಮಾಡಿ ಗುಣಗಾನ ಮಾಡಿದ್ದರು. ದೊಡ್ಡ ಸಂಭಾವನೆಯ ಜೊತೆಗೆ ಅವರಿಗೆ ಒಂದು ಒಳ್ಳೆಯ ಅವಕಾಶ ನೀಡುವುದಾಗಿ ತಿಳಿಸಿದ್ದರು.

  ವರ್ಮ ಸಿನಿಮಾಗಳಲ್ಲಿ ಯಜ್ಞ ಶೆಟ್ಟಿ

  ವರ್ಮ ಸಿನಿಮಾಗಳಲ್ಲಿ ಯಜ್ಞ ಶೆಟ್ಟಿ

  ರಾಮ್ ಗೋಪಾಲ್ ವರ್ಮ ಇಷ್ಟ ಪಟ್ಟ ಮತ್ತೊಬ್ಬ ಕನ್ನಡದ ನಟಿ ಯಜ್ಞ ಶೆಟ್ಟಿ. ಮೊದಲು ತಮ್ಮ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದಲ್ಲಿ ಯಜ್ಞಗೆ ಒಂದು ಪ್ರಮುಖ ಪಾತ್ರವನ್ನು ಆಫರ್ ನೀಡಿದ್ದರು. ಬಳಿಕ 'ಎನ್ ಟಿ ಆರ್' ಬಯೋಪಿಕ್ ನಲ್ಲಿ ಎನ್ ಟಿ ಆರ್ ಪತ್ನಿಯ ಪಾತ್ರವನ್ನು ನೀಡಿದ್ದರು. ಈ ರೀತಿ ಆರ್ ಜಿ ವಿ ಗೆ ಕನ್ನಡದ ನಟಿಯರ ಪ್ರತಿಭೆ ಮೇಲೆ ಒಲವು ಮುಂದುವರೆಯುತ್ತಲೇ ಇದೆ.

  English summary
  Director Ram gopal varma has give success party for ISmart Shankar movie team. RGV tweets about actress Nabha Natesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X