Ram Gopal Varma: ಅಪ್ಪಟ ನಾಸ್ತಿಕನ ಕೈಲಿ ಕೈ ಮುಗಿಸಿಕೊಂಡ ಅಪ್ಪು

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಪ್ಪಟ ನಾಸ್ತಿಕ. ಕೇವಲ ನಾಸ್ತಿಕ ಮಾತ್ರವಲ್ಲ, ಮಾನವ ಸಂಬಂಧಗಳು, ಪ್ರೀತಿ, ಸೌಹಾರ್ಧ ಇತರೆಗಳ ಬಗ್ಗೆ ವರ್ಮಾರದ್ದು ಭಿನ್ನ ನಿಲವು. ಇಂಥಹಾ ವಿಕ್ಷಿಪ್ತ ವ್ಯಕ್ತಿ ಸಹ ಇಂದು ಅಪ್ಪು ಸಮಾಧಿಗೆ ತಲೆ ಬಾಗಿ ನಮಸ್ಕರಿಸಿದ್ದಾರೆ.

ರಾಮ್ ಗೋಪಾಲ್ ವರ್ಮಾ ಇಂದು ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡಿದ್ದರು. ಅಪ್ಪು ಸಮಾಧಿಗೆ ಕೈ ಮುಗಿದು, ಅಪ್ಪು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ್ದಾರೆ.

ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಾಮ್ ಗೋಪಾಲ್ ವರ್ಮಾ, ''ಡಾ ರಾಜ್‌ಕುಮಾರ್ ಕುಟುಂಬದ ಜೊತೆಗೆ ನನ್ನದು ಹಳೆಯ ನಂಟು. ನಾನು ಶಿವರಾಜ್ ಕುಮಾರ್ ಜೊತೆಗೆ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಮಾಡಿದ್ದೇನೆ. ಸಿನಿಮಾದ ಮೇಕಿಂಗ್ ಸಮಯದಲ್ಲಿ ನಾನು ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದೆ'' ಎಂದು ನೆನಪು ಮಾಡಿಕೊಂಡಿದ್ದಾರೆ.

ಇಂದು ನನಗೆ ಭಿನ್ನ ಅನುಭೂತಿಯಾಯಿತು: ವರ್ಮಾ

ಇಂದು ನನಗೆ ಭಿನ್ನ ಅನುಭೂತಿಯಾಯಿತು: ವರ್ಮಾ

''ಈಗಲೂ ಸಹ ನನಗೆ ಪುನೀತ್ ಇಲ್ಲ ಎಂಬುದು ನಂಬಲು ಸಾಧ್ಯವಾಗುತ್ತಿಲ್ಲ. ಪುನೀತ್ ಅನ್ನು ಈ ಸ್ಥಿತಿಯಲ್ಲಿ ನೋಡಲು ನನಗೆ ಕಷ್ಟವಾಗುತ್ತಿದೆ. ಇಂದು ಇಲ್ಲಿಗೆ ಬಂದು ನನಗೆ ಭಿನ್ನ ಅನುಭೂತಿಯಾಯಿತು. ಆಧ್ಯಾತ್ಮಿಕ ಲೋಕಕ್ಕೆ ಬಂದಂತೆ ಭಾಸವಾಯಿತು. ಒಳ್ಳೆಯ ವಿಷಯವೆಂದರೆ ಪುನೀತ್ ಸದಾ ಕಾಲ ಕರ್ನಾಟಕ ಜನರ ಹೃದಯದಲ್ಲಿ ಇರಲಿದ್ದಾರೆ'' ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ. ಇವರ ಬಾಯಿಯಿಂದ ಈ ರೀತಿಯ ಮಾತುಗಳು ಹಿಂದೆಂದೂ ಬಂದಿರಲಿಲ್ಲ.

ಅಪ್ಪು ಅಭಿಮಾನಿಗಳಿಗೆ ದೊಡ್ಡ ನಷ್ಟವಾಗಿದೆ: ವರ್ಮಾ

ಅಪ್ಪು ಅಭಿಮಾನಿಗಳಿಗೆ ದೊಡ್ಡ ನಷ್ಟವಾಗಿದೆ: ವರ್ಮಾ

''ಅಪ್ಪು ಅಭಿಮಾನಿಗಳು, ಕುಟುಂಬಕ್ಕೆ ಆಗಿರುವ ನಷ್ಟದ ಬಗ್ಗೆ ನನಗೆ ದುಃಖವಿದೆ. ಆದರೆ ದೇವರಿಗೆ ಬೇರೆಯ ಯೋಜನೆಗಳಿದ್ದವು ಎನಿಸುತ್ತದೆ. ಈ ಮುಂದೆ ಅವರು ಇದ್ದಿದ್ದಕ್ಕಿಂತಲೂ ಒಳ್ಳೆಯ, ಘನವಾದ ಜಾಗದಲ್ಲಿ ಈಗ ಇದ್ದಾರೆ ಎಂಬ ನಂಬಿಕೆ ಇದೆ'' ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.

ಪುನೀತ್ ದೊಡ್ಡ ಸ್ಟಾರ್ ನಟ: ವರ್ಮಾ

ಪುನೀತ್ ದೊಡ್ಡ ಸ್ಟಾರ್ ನಟ: ವರ್ಮಾ

''ಪುನೀತ್ ಎಂಥಹಾ ಒಳ್ಳೆಯ ನಟರಾಗಿದ್ದರು ಎಂಬುದನ್ನು ನಾನು ಮತ್ತೆ ಹೇಳುವ ಅವಶ್ಯಕತೆ ಇಲ್ಲ. ತಾವೆಂತ ದೊಡ್ಡ ಸ್ಟಾರ್ ಎಂಬುದನ್ನು ಅವರು ಈಗಾಗಲೇ ಹಲವು ಬಾರಿ ಪ್ರೂವ್ ಮಾಡಿದ್ದಾರೆ. ಅವರು ನಿಧನರಾದ ಬಳಿಕವೂ 'ಜೇಮ್ಸ್' ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ವಿಶೇಷ ಇಂಟ್ರೊಡಕ್ಷನ್‌ಗಳು ಬೇಕಾಗದ ರೀತಿಯ ನಟ ಹಾಗೂ ವ್ಯಕ್ತಿ ಪುನೀತ್ ರಾಜ್‌ಕುಮಾರ್'' ಎಂದು ಹೊಗಳಿದರು ರಾಮ್ ಗೋಪಾಲ್ ವರ್ಮಾ. ವಿಕ್ಷಿಪ್ತ ವ್ಯಕ್ತಿ ಎಂದೇ ಕರೆಯಲಾಗುವ ರಾಮ್ ಗೋಪಾಲ್ ವರ್ಮಾ ಯಾವುದೇ ವ್ಯಕ್ತಿಯನ್ನು ಹೊಗಳುವುದು ಬಹಳವೇ ಅಪರೂಪ ಆದರೆ ವರ್ಮಾ ಇಂದು ಅಪ್ಪು ಬಗ್ಗೆ ಆಡಿರುವ ಮಾತುಗಳು ಅಪ್ಪು ವ್ಯಕ್ತಿತ್ವ ಎಂಥಹುದಿತ್ತು ಎಂಬುದಕ್ಕೆ ಉದಾಹರಣೆ.

ಅಪ್ಸರಾ ರಾಣಿ ಜೊತೆ ಬಂದಿದ್ದ ವರ್ಮಾ

ಅಪ್ಸರಾ ರಾಣಿ ಜೊತೆ ಬಂದಿದ್ದ ವರ್ಮಾ

ರಾಮ್ ಗೋಪಾಲ್ ವರ್ಮಾ, ತಮ್ಮ ಮೆಚ್ಚಿನ ನಟಿ ಅಪ್ಸರಾ ರಾಣಿ ಜೊತೆ ಅಪ್ಪು ಸಮಾಧಿಗೆ ಭೇಟಿ ನೀಡಿದ್ದರು. ವರ್ಮಾ ಇದೀಗ ಮುತ್ತಪ್ಪ ರೈ ಜೀವನ ಕತೆಯನ್ನು ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಉಪೇಂದ್ರ, ಮುತ್ತಪ್ಪ ರೈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಈ ಹಿಂದೆ ರಾಮ್ ಗೋಪಾಲ್ ವರ್ಮಾ, ಶಿವರಾಜ್ ಕುಮಾರ್ ನಟನೆಯ 'ಕಿಲ್ಲಿಂಗ್ ವೀರಪ್ಪನ್' ಕನ್ನಡ ಸಿನಿಮಾ ಮಾಡಿದ್ದರು.

More from Filmibeat

English summary
Director Ram Gopal Varma visited Puneeth Rajkumar's samadhi and did pooja. He said he still can't believe that Puneeth is no more with us.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X