twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಮಂದಿರಕ್ಕೆ ಅನುಮತಿ: ಲಾಕ್‌ಡೌನ್ ಬಳಿಕ ಥಿಯೇಟರ್‌ಗೆ ಬರ್ತಿದೆ ಮೊದಲ ಚಿತ್ರ

    |

    ಅಂತಿಮವಾಗಿ ಚಿತ್ರಮಂದಿರಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಸುಮಾರು 200 ದಿನಗಳ ನಂತರ ಸಿನಿಮಾ ಇಂಡಸ್ಟ್ರಿಗೆ ಖುಷಿಯ ಸಮಾಚಾರ ಸಿಕ್ಕಿದೆ. ಅಕ್ಟೋಬರ್ 15 ರಿಂದ ಶೇಕಡಾ 50 ರಷ್ಟು ಜನರನ್ನು ಒಳಗೊಂಡಂತೆ ಚಿತ್ರಮಂದಿರಗಳು ತೆರೆಯಬಹುದು ಎಂದು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.

    ಥಿಯೇಟರ್‌ ತೆರೆಯಲು ಅನುಮತಿ ದೊರೆಯುತ್ತಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಹೊಸ ಸಿನಿಮಾದ ರಿಲೀಸ್ ದಿನಾಂಕ ಘೋಷಿಸಿದ್ದಾರೆ.

    ಅನ್‌ಲಾಕ್ 5.0: ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು ಓಪನ್ಅನ್‌ಲಾಕ್ 5.0: ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು ಓಪನ್

    ಲಾಕ್‌ಡೌನ್‌ ಬಳಿಕ ಯಾವ ಚಿತ್ರ ಮೊದಲು ತೆರೆಕಾಣಲಿದೆ ಎಂಬ ಕುತೂಹಲ, ಕಾತುರು ಕಾಡುತ್ತಿದೆ. ಜನರು ಸಹ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಲು ಹಾತೊರೆಯುತ್ತಿದ್ದಾರೆ. ಹೀಗಾಗಿ, ಮೊದಲ ಸಿನಿಮಾ ಯಾವುದಾಗಬಹುದು ಎಂಬ ಚರ್ಚೆಯೂ ಜೋರಾಗಿದೆ.

    Ram gopal varma will release first film after lockdown

    ಈ ಮಧ್ಯೆ ರಾಮ್ ಗೋಪಾಲ್ ವರ್ಮಾ 'ಕೊರೊನಾ ವೈರಸ್' ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಲಾಕ್‌ಡೌನ್ ಬಳಿಕ ಬಿಡುಗಡೆಯಾಗುವ ಮೊದಲ ಸಿನಿಮಾ ಎಂದು ಟ್ವೀಟ್ ಮಾಡಿದ್ದಾರೆ. ನಿಖರವಾಗಿ ಬಿಡುಗಡೆ ದಿನಾಂಕ ಹೇಳಿಲ್ಲ ಆದರೂ ಲಾಕ್‌ಡೌನ್ ಬಳಿಕ ಮೊದಲ ಸಿನಿಮಾ ಎಂದು ಹೇಳಿರುವ ಹಿನ್ನೆಲೆ ಅಕ್ಟೋಬರ್ 15 ರಂದೇ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ.

    Recommended Video

    ಧಾರವಾಹಿ, ಸಿನಿಮಾಗೂ ಬರೋಕೆ ಮುಂಚೆ ಯಶ್ ಇವರ ಶಿಷ್ಯ ಆಗಿದ್ರು | Filmibeat Kannada

    ಅಗಸ್ತ್ಯ ಮಂಜು ಈ ಚಿತ್ರ ನಿರ್ದೇಶನ ಮಾಡಿದ್ದು, ಡಿ ಕಂಪನಿಯಡಿ ವರ್ಮಾ ನಿರ್ಮಾಣ ಮಾಡಿದ್ದಾರೆ.

    English summary
    Finally theatres are open from October 15th RGV to announce that CORONAVIRUS will be the first film to release after lockdown.
    Thursday, October 1, 2020, 9:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X