ನೆಚ್ಚಿನ ನಟನ ಸಿನಿಮಾ ನೋಡಲು ಬೆಂಗಳೂರಿಗೆ ಬರ್ತಿದ್ದಾರೆ ವರ್ಮಾ

Recommended Video

Bhairava Geetha Movie : ನೆಚ್ಚಿನ ನಟನ ಸಿನಿಮಾ ನೋಡಲು ಬೆಂಗಳೂರಿಗೆ ಬಂದಿದ್ರು ವರ್ಮಾ..! | FILMIBEAT KANNADA

ಭಾರತದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಾಳೆ (ಡಿಸೆಂಬರ್ 7) ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಸಿನಿಮಾ ಬಿಡುಗಡೆಯಾಗುತ್ತಿದ್ದು, ನಟನ ಅಭಿಮಾನಿಗಳನ್ನ ನೋಡಲು ಬೆಂಗಳೂರಿನ ಚಿತ್ರಮಂದಿರಕ್ಕೆ ಬರ್ತಿದ್ದಾರೆ.

ಹೀಗಂತ, ಸ್ವತಃ ರಾಮ್ ಗೋಪಾಲ್ ವರ್ಮಾ ಅವರೇ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ, ವರ್ಮಾ ಅವರ ನೆಚ್ಚಿನ ನಟ ಬೆಂಗಳೂರಿನಲ್ಲಿ ಯಾರಿದ್ದಾರೆ ಎಂಬ ಕುತೂಹಲ ಕಾಡ್ತಿದ್ಯಾ?

'ಟಗರು' ಖ್ಯಾತಿ ಡಾಲಿ ಧನಂಜಯ್ ಗೆ, ಆರ್.ಜಿ.ವಿ ಫ್ಯಾನ್ ಆಗಿದ್ದಾರೆ. ಡಾಲಿ ಪಾತ್ರ ನೋಡಿ ಫಿದಾ ಆಗಿದ್ದ ವರ್ಮಾ, ಧನಂಜಯ್ ಜೊತೆ ಸಿನಿಮಾ ಕೂಡ ಮಾಡಿದ್ದಾರೆ. ಆ ಸಿನಿಮಾ ಈ ವಾರ ತೆರೆಕಾಣ್ತಿದೆ.

Ram gopal varma will watch Bhairava Geetha at Santosh theater

ಹೌದು, ಧನಂಜಯ್ ಅಭಿನಯದ 'ಭೈರವಗೀತಾ' ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗ್ತಿದ್ದು, ಕನ್ನಡದಲ್ಲಿ ಈ ವಾರ (ಡಿಸೆಂಬರ್ 7) ಥಿಯೇಟರ್ ಗೆ ಲಗ್ಗೆಯಿಡ್ತಿದೆ. ತೆಲುಗಿನಲ್ಲಿ ಮುಂದಿನ ವಾರ (ಡಿಸೆಂಬರ್ 14) ಬಿಡುಗಡೆಯಾಗ್ತಿದೆ.

Ram gopal varma will watch Bhairava Geetha at Santosh theater

ಈ ಚಿತ್ರಕ್ಕೆ ಸಿದ್ಧಾರ್ಥ್ ಎಂಬ ಯುವ ನಿರ್ದೇಶಕ ಆಕ್ಷನ್ ಕಟ್ ಹೇಳಿದ್ದು, ರಾಮ್ ಗೋಪಾಲ್ ವರ್ಮಾ ನಿರ್ಮಾಣ ಮಾಡಿದ್ದಾರೆ. ಐರಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ 'ಭೈರವಗೀತಾ' ಬರ್ತಿದ್ದು, ಸಂತೋಷ್ ಚಿತ್ರಮಂದಿರಕ್ಕೆ ನಟ ಧನಂಜಯ್ ಜೊತೆ ಆರ್.ಜಿ.ವಿ ಬೆಳಿಗ್ಗೆ 10.30 ಗಂಟೆಗೆ ಸಿನಿಮಾ ನೋಡಲಿದ್ದಾರೆ.

More from Filmibeat

English summary
Ram gopal varma will watch Bhairava Geetha movie along with Dhananjaya and director siddharth at Santosh theater, Gandhinagar, tomorrow 10 30 am show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X