'ರಾಮ್ ಫೋನ್ ಮಾಡಿಲ್ಲ, ಎಲ್ಲಾ ಸುಳ್ಳು' ಎಂದ ನಟಿ ಶ್ರುತಿ ಹರಿಹರನ್
ಇಂದು ಬೆಳಗ್ಗೆಯಷ್ಟೇ ಕನ್ನಡ ನಟ ಅರ್ಜುನ್ ಸರ್ಜಾ ಅವರ ಆಪ್ತ, ಉದ್ಯಮಿ ಪ್ರಶಾಂತ್ ಸಂಬರ್ಗಿ ಒಂದು ಬಾಂಬ್ ಸಿಡಿಸಿದರು. ಅದೇನೆಂದರೆ, ನಿನ್ನೆ ಸಂಜೆ ಪ್ರಶಾಂತ್ ಸಂಬರ್ಗಿ ಅವರಿಗೆ ಒಂದು ಫೋನ್ ಕಾಲ್ ಬಂದಿತ್ತಂತೆ. ಶ್ರುತಿ ಹರಿಹರನ್ ಗೆ ಬೇಕಾಗಿರುವ ರಾಮ್ ಎಂಬಾತ ಫೋನ್ ಮಾಡಿ ''ರಾಜಿ ಸಂಧಾನ'' ಮಾಡಿಕೊಳ್ಳುವಂತೆ ಪ್ರಶಾಂತ್ ಸಂಬರ್ಗಿಗೆ ಹೇಳಿದ್ದನಂತೆ.
ಇದೇ ವಿಚಾರದ ಕುರಿತು ಸದ್ಯದಲ್ಲೇ ಉದ್ಯಮಿ ಪ್ರಶಾಂತ್ ಸಂಬರ್ಗಿ ಪ್ರೆಸ್ ಮೀಟ್ ನಡೆಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಹಲವು ಸತ್ಯಗಳನ್ನು ಬಯಲು ಮಾಡುವುದಾಗಿ ಉದ್ಯಮಿ ಪ್ರಶಾಂತ್ ಸಂಬರ್ಗಿ ತಿಳಿಸಿದ್ದಾರೆ.
ಹೀಗಿರುವಾಗಲೇ, ''ಇವೆಲ್ಲ ಸುಳ್ಳು ಸುದ್ದಿ. ರಾಮ್ ಫೋನ್ ಮಾಡಿಲ್ಲ'' ಅಂತ ನಟಿ ಶ್ರುತಿ ಹರಿಹರನ್ ಸ್ಪಷ್ಟ ಪಡಿಸಿದ್ದಾರೆ. ಅಲ್ಲದೇ, ''ರಾಮ್ ನನ್ನ ಸಪೋರ್ಟ್ ನಲ್ಲಿ ಇದ್ದಾರೆ'' ಎಂದೂ ಶ್ರುತಿ ಹರಿಹರನ್ ಹೇಳಿದ್ದಾರೆ. ಮುಂದೆ ಓದಿರಿ...

ಎಲ್ಲಾ ಸುಳ್ಳು ಸುದ್ದಿ
''ನನಗೆ ಈ ಸುದ್ದಿ ಗೊತ್ತಿಲ್ಲ. ಇದು ತುಂಬಾ ದೊಡ್ಡ ಸರ್ಪ್ರೈಸ್ ನನಗೆ. ರಾಮ್ ಖಂಡಿತ ಕಾಲ್ ಮಾಡಿಲ್ಲ. ಅವರಿಗೆ ಯಾರೂ ಗೊತ್ತಿಲ್ಲ. ಅವರು ನನ್ನ ಸಪೋರ್ಟ್ ನಲ್ಲಿ ಇದ್ದಾರೆ. ಇದೆಲ್ಲ ಸುಳ್ಳು.. ಕಂಪ್ಲೀಟ್ ಸುಳ್ಳು ಸುದ್ದಿ. ರಾಮ್ ಫೋನ್ ಮಾಡಿಲ್ಲ'' ಎಂದಿದ್ದಾರೆ ನಟಿ ಶ್ರುತಿ ಹರಿಹರನ್.

ಸಭೆಗೆ ಹಾಜರ್ ಆಗಲಿರುವ ಶ್ರುತಿ ಹರಿಹರನ್
ಇಂದು ಸಂಜೆ ನಾಲ್ಕು ಗಂಟೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆಯಲಿರುವ ಸಭೆಯಲ್ಲಿ ನಟಿ ಶ್ರುತಿ ಹರಿಹರನ್ ಕೂಡ ಭಾಗವಹಿಸಲಿದ್ದಾರೆ. ಅಂಬರೀಶ್ ನೇತೃತ್ವದಲ್ಲಿ ಇಂದು ಫಿಲ್ಮ್ ಚೇಂಬರ್ ನಲ್ಲಿ ಸಭೆ ನಡೆಯಲಿದೆ.

ಪ್ರಶಾಂತ್ ಸಂಬರ್ಗಿ ಹೇಳಿದ್ದೇನು.?
''ನಿನ್ನೆ ಸಂಜೆ ಲ್ಯಾಂಡ್ ಲೈನ್ ಇಂದ ನನಗೊಂದು ಕರೆ ಬಂತು. ರಾಮ್ ಅಂತ ಪರಿಚಯಿಸಿಕೊಂಡ ಆತ ''ನಾನು ಶ್ರುತಿ ಹರಿಹರನ್ ಗೆ ತುಂಬಾ ಬೇಕಾಗಿರುವ ವ್ಯಕ್ತಿ'' ಎಂದು ಹೇಳಿದ. ''ದಯವಿಟ್ಟು ಈ ಕೇಸ್ ನ ರಾಜಿ ಮಾಡಿಕೊಳ್ಳಿ. ಫಿಲ್ಮ್ ಚೇಂಬರ್ ನಲ್ಲಿ ನಡೆಯುವ ಸಭೆಗೆ ರಾಜಿ ಮನಃಸ್ಥಿತಿಯಿಂದ ಬನ್ನಿ. ಇದನ್ನು ಹೀಗೇ ಮುಂದುವರೆಸಿದರೆ, ಯಾರಿಗೂ ಅನುಕೂಲ ಇಲ್ಲ'' ಅಂತ ಹೇಳಿದ'' - ಪ್ರಶಾಂತ್ ಸಂಬರ್ಗಿ, ಉದ್ಯಮಿ, ಅರ್ಜುನ್ ಸರ್ಜಾ ಸ್ನೇಹಿತ

ಪೀಠಿಕೆ ಹಾಕಿದ ದೂರವಾಣಿ ಕರೆ ಅದು
''ಅರ್ಜುನ್ ಸರ್ಜಾ ಹೆಸರಿಗೆ ಮಸಿ ಬಳಿದು, ಅವರ ಮನೆಯಲ್ಲಿ ಅಶಾಂತಿ ಉಂಟು ಮಾಡಿದ ಈ ಪ್ರಕರಣ ರಾಜಿ ಮಾಡಿದರೆ ನಮ್ಮ ಮನಃಸ್ಥಿತಿ ನೆಮ್ಮದಿ ಆಗಿರುವುದಿಲ್ಲ ಅಂತ ಈ ಪ್ರಸ್ತಾಪ ಬೇಡ ಎಂದು ಹೇಳಿದೆ. ''ಮಾಧ್ಯಮಗಳ ಮುಂದೆ ಕ್ಷಮೆ ಕೇಳಿ'' ಎಂದು ನಾನು ಅವರಿಗೆ ಹೇಳಿದಾಗ ''ಹಾಗೆಲ್ಲ ಮಾಡಬೇಡಿ. ರಾತ್ರಿ ಶ್ರುತಿ ಹರಿಹರನ್ ಅವರು ಚಿನ್ನೇಗೌಡರನ್ನು ಭೇಟಿ ಆಗುತ್ತಾರೆ. ನೀವೂ ಅಂಬರೀಶ್ ರನ್ನ ಭೇಟಿ ಮಾಡಿ'' ಎಂದು ಆತ ಹೇಳಿದ. ಇಂದು ನಡೆಯುವ ಸಭೆಗೆ ಪೀಠಿಕೆ ಹಾಕಿದ ದೂರವಾಣಿ ಕರೆ ಅದು'' - ಪ್ರಶಾಂತ್ ಸಂಬರ್ಗಿ, ಉದ್ಯಮಿ, ಅರ್ಜುನ್ ಸರ್ಜಾ ಸ್ನೇಹಿತ


Click it and Unblock the Notifications











