ಇವರು ಸ್ಯಾಂಡಲ್ ವುಡ್ ನ ರಣವೀರ್ ಸಿಂಗ್

By Pavithra

ಕನ್ನಡ ಸಿನಿಮಾರಂಗದಲ್ಲಿ ಒಬ್ಬರು ರಣವೀರ್ ಸಿಂಗ್ ಇದ್ದಾರೆ. ಇವರ ಲುಕ್ ನೋಡಿದ್ರೆ ಅರೆ ಬಾಲಿವುಡ್ ರಣವೀರ್ ಸಿಂಗ್ ರಂತೆ ಕಾಣುತ್ತಾರಲ್ಲ ಅಂತ ಅನ್ನಿಸುತ್ತೆ. ನಾವು ನಿಮಗೆ ಹೇಳುತ್ತಿರುವುದು ಕನ್ನಡ ಚಿತ್ರರಂಗದ ಅಣ್ಣಾವ್ರ ಮೊಮ್ಮಗನ ಬಗ್ಗೆ.

ನಟ ರಾಮ್ ಕುಮಾರ್ ಅವರ ಪುತ್ರ ಧೀರೆನ್ ರಾಮ್ ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ದರಾಗಿದ್ದಾರೆ. ಇದಕ್ಕಾಗಿ ಈಗಾಗಲೇ ಫೋಟೋ ಶೂಟ್ ಕೂಡ ಮಾಡಿಸಿದ್ದರು. ಫೋಟೋದಲ್ಲಿ ಧೀರೆನ್ ಲುಕ್ ನೋಡಿ ಅಪ್ಪನಂತೆ ಮಗ ಕೂಡ ಹ್ಯಾಂಡ್ ಸಮ್ ಆಗಿದ್ದಾನೆ ಅನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿಬಂದಿತ್ತು.

Ram Kumar's son Dheeren making his debut in Kannada film industry

ಈಗ ಧೀರೆನ್ ಮತ್ತೊಂದು ಸ್ಟೈಲ್ ನಲ್ಲಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಇದಕ್ಕಾಗಿ ಸಾಕಷ್ಟು ದಿನಗಳು ಗಡ್ಡಬಿಟ್ಟು ಲುಕ್ ಟೆಸ್ಟ್ ಮಾಡಿಸಿದ್ದಾರೆ. ಧೀರೆನ್ ಹೊಸ ಲುಕ್ ನೋಡಿದ್ರೆ ಒಮ್ಮೆ ಅರೆ ಇವರು ಯಾರು ರಣವೀರ್ ಸಿಂಗ್ ತರ ಇದ್ದಾರಲ್ಲ ಅಂತ ನಿಮಗೆ ಅನ್ನಿಸಿಬಿಡುತ್ತೆ ಹಾಗಿದೆ ಧೀರೆನ್ ಲುಕ್.

ಸೆಲೆಬ್ರೆಟಿ ಫೋಟೋಗ್ರಾಫರ್ ಚಂದನ್ ಗೌಡ ಕ್ಯಾಮೆರಾ ಕಣ್ಣಲ್ಲಿ ಧೀರೆನ್ ನ್ಯೂಲುಕ್ ಕ್ಯಾಪ್ಚರ್ ಆಗಿದೆ. ಧೀರೆನ್ ಸಹೋದರಿ ಧನ್ಯಾ ರಾಮ್ ಕುಮಾರ್ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದಾರೆ.

Ram Kumar's son Dheeren making his debut in Kannada film industry

ಸದ್ಯ ಕಥೆ ಕೇಳಿ ಸಿನಿಮಾದಲ್ಲಿ ಅಭಿನಯಿಸಲು ಧೀರೆನ್ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಲಹೆಯಂತೆ ಧೀರೆನ್ ಚಿತ್ರರಂಗದಲ್ಲಿ ಕೆಲವೇ ದಿನಗಳಲ್ಲಿ ಎಂಟ್ರಿ ಪಡೆದುಕೊಳ್ಳಲಿದ್ದಾರೆ.

More from Filmibeat

English summary
Kannada Actor Ram Kumar's son Dheeren Ramkumar will be making his debut in Kannada film industry. Dheeren has shot a new photo shoot
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X