For Quick Alerts
  ALLOW NOTIFICATIONS  
  For Daily Alerts

  ಎರಡನೇ ಬಾರಿ ತಂದೆಯಾದ ಸಂತಸದಲ್ಲಿ ಕಾಮಿಡಿ ನಟ ಧರ್ಮಣ್ಣ

  |

  'ರಾಮಾ ರಾಮಾ ರೇ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟ ಧರ್ಮಣ್ಣ. ಮೊದಲ ಸಿನಿಮಾದಲ್ಲೇ ಚಿತ್ರಾಭಿಮಾನಿಗಳ ಗಮನ ಸೆಳೆದ ಧರ್ಮಣ್ಣನಿಗೆ ಈ ಸಿನಿಮಾ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆಯೂ ಹೆಚ್ಚಾಯಿತು. ಇದೀಗ ಧರ್ಮಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರ ಜೊತೆಯೂ ತೆರೆಹಂಚಿಕೊಳ್ಳುತ್ತಿದ್ದಾರೆ.

  ಸದ್ಯ ಧರ್ಮಣ್ಣ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಧರ್ಮಣ್ಣ ಎರಡನೇ ಬಾರಿ ತಂದೆಯಾದ ಸಂತಸದಲ್ಲಿದ್ದಾರೆ. ಹೌದು, ಧರ್ಮಣ್ಣ ಪತ್ನಿ ಕಾವ್ಯ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣುಮಗು ಜನಿಸಿದ್ದು, ಮನೆಗೆ ಮಹಾಲಕ್ಷ್ಮಿ ಬಂದ ಸಂತಸವನ್ನು ಸಂಭ್ರಮಿಸುತ್ತಿದ್ದಾರೆ.

  ಯಾರ ಪ್ರತಿಭೆಯನ್ನು ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ: ನಟ ಧರ್ಮಣ್ಣ

  ಧರ್ಮಣ್ಣ ಮತ್ತು ಕಾವ್ಯ ದಂಪತಿಗೆ ಶಶಾಂಕ್ ಎನ್ನುವ ಮಗನಿದ್ದಾರೆ. ಇದೀಗ ಹೆಣ್ಣು ಮಗು ಜನಿಸಿರುವುದು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಟ ಧರ್ಮಣ್ಣ 2014ರಲ್ಲಿ ಕಾವ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮಣ್ಣ ಅವರದ್ದು ಅರೇಂಜ್ ಮ್ಯಾರೇಜ್, ಕುಟುಂಬದವರು ನೋಡಿದ ಹುಡುಗಿಯನ್ನೇ ಮದುವೆ ಸಂತಸದ ಜೀವನ ನಡೆಸುತ್ತಿದ್ದಾರೆ.

  ಮೂಲತಃ ಕಡೂರಿನವರಾದ ಧರ್ಮಣ್ಣ ಕೃಷಿಕರು. ರಂಗಭೂಮಿಯಲ್ಲಿ ಸಕ್ರೀಯರಾಗಿದ್ದ ಧರ್ಮಣ್ಣ ರಾಮಾ ರಾಮಾ ರೇ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಇದೀಗ ಬರವಸೆಯ ನಟನಾಗಿ ಗುರುತಿಸಿಕೊಂಡಿದ್ದಾರೆ.

  ಗುಲಾಬಿ ಕೆಳಗೆ ಇರೋದನ್ನ ನೋಡಿ ಗಾಬರಿಯಾದ ರಚಿತಾ ರಾಮ್ | Filmibeat Kannada

  ಕೈತುಂಬ ಸಿನಿಮಾಗಳನ್ನಿಟ್ಟುಕೊಂಡಿರುವ ಧರ್ಮಣ್ಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದಲ್ಲೂ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಸದ್ಯ ಈ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಮಾರ್ಚ್ 11ರಂದು ರಾಬರ್ಟ್ ಸಿನಿಮಾ ರಿಲೀಸ್ ಆಗುತ್ತಿದೆ.

  English summary
  Rama Rama Re fame Actor Dharmanna and his wife Kavya welcomed a baby girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X