'ರಾಮಾ ರಾಮಾ ರೇ' ಸಿನಿಮಾದ ಮೇಕಿಂಗ್ ಹಾಗೂ ಚಿತ್ರಕಥೆಯ ಬಗ್ಗೆ ಪುಸ್ತಕ ಬರುತ್ತಿದೆ
'ರಾಮಾ ರಾಮಾ ರೇ' ಚಿತ್ರ ಕನ್ನಡ ಸಿನಿಮಾ ರಂಗದಲ್ಲಿ ಒಂದು ವಿಭಿನ್ನ ಸಿನಿಮಾವಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿತ್ತು. ಆದರೆ ಈಗ ಈ ಸಿನಿಮಾದ ಬಗ್ಗೆ ಪುಸ್ತಕವೊಂದು ಬರ್ತಿದೆ.
'ರಾಮಾ ರಾಮಾ ರೇ' ಸಿನಿಮಾ ಬಿಡುಗಡೆಯಾಗಿ ಈಗ ಒಂದು ವರ್ಷ ಆಗಿದೆ. ಈ ಸಂತಸದಲ್ಲಿರುವ ಚಿತ್ರತಂಡ ಸಿನಿಮಾದ ಬಗ್ಗೆ ಒಂದು ಪುಸ್ತಕವನ್ನು ಬಿಡುಗಡೆ ಮಾಡುವ ತಯಾರಿ ನಡೆಸಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ಚಿತ್ರದ ನಿರ್ದೇಶಕರಾದ ಸತ್ಯ ಪ್ರಕಾಶ್ ನಿಮ್ಮ 'ಫಿಲ್ಮಿ ಬೀಟ್ ಕನ್ನಡ'ದೊಂದಿಗೆ ಮಾತನಾಡಿದ್ದಾರೆ.

''ಈ ಪುಸ್ತಕವನ್ನು ಸಿನಿಮಾ ಮಾಡಲು ಮನಸ್ಸಿರುವ ಯುವಕರಿಗಾಗಿ ಹೊರ ತರುತ್ತಿದ್ದೇವೆ. ತುಂಬ ಜನ ಯುವ ನಿರ್ದೇಶಕರು ನಿರ್ಮಾಪಕರು ಇಲ್ಲದೆ ಒದ್ದಾಡುತ್ತಾರೆ. ಸಿನಿಮಾ ಮಾಡುವುದು ಹೇಗೆ ಎನ್ನುವುದನ್ನ ತಿಳಿಸುವ ಯೋಚನೆ ಇದು. ನಮ್ಮ ಚಿತ್ರದಿಂದ ಕೆಲವರಿಗೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಈ ಪುಸ್ತಕ ಮಾಡುತ್ತಿದ್ದೇವೆ'' ಎಂದು ನಿರ್ದೇಶಕ ಸತ್ಯ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
ಇನ್ನು ಈ ಪುಸ್ತಕದಲ್ಲಿ ಚಿತ್ರದ ಮೇಕಿಂಗ್ ವಿವರ ಮತ್ತು ಚಿತ್ರಕಥೆಯ ಜೊತೆಗೆ ಸಿನಿಮಾ ಶುರುವಿನಿಂದ ರಿಲೀಸ್ ವರೆಗಿನ ಸಾಕಷ್ಟು ಮಾಹಿತಿಗಳು ಇರಲಿದೆಯಂತೆ. ಈಗಾಗಲೇ 'ರಾಮಾ ರಾಮಾ ರೇ' ಪುಸ್ತಕದ ತಯಾರಿ ಶುರುವಾಗಿದ್ದು, ಮುಂದಿನ ತಿಂಗಳು ಪುಸ್ತಕ ಬಿಡುಗಡೆ ಆಗಲಿದೆಯಂತೆ. ಚಿತ್ರದ ಸಂಭಾಷಣೆಯನ್ನು ಬರೆದಿದ್ದ ಸಿದ್ದಲಿಂಗಯ್ಯ ಕಂಬಾಳು ಅವರೇ ಈ ಪುಸ್ತಕವನ್ನು ಬರೆಯುತ್ತಿದ್ದಾರೆ.


Click it and Unblock the Notifications











