»   » ಮತ್ತೊಂದು ಮೈಲಿಗಲ್ಲು ಸೃಷ್ಟಿ ಮಾಡಲು ಸಜ್ಜಾದ 'ರಾಮಾ ರಾಮಾ ರೇ' ತಂಡ

ಮತ್ತೊಂದು ಮೈಲಿಗಲ್ಲು ಸೃಷ್ಟಿ ಮಾಡಲು ಸಜ್ಜಾದ 'ರಾಮಾ ರಾಮಾ ರೇ' ತಂಡ

Posted By:
Subscribe to Filmibeat Kannada

'ರಾಮಾ ರಾಮಾ ರೇ'... ಕನ್ನಡ ಸಿನಿಮಾ ರಂಗದಲ್ಲಿ ಹೊಸ ರೀತಿಯ ಮೈಲಿಗಲ್ಲು ಸೃಷ್ಟಿ ಮಾಡಿದ ಚಿತ್ರ. ಬಂಡವಾಳ ಇಲ್ಲದೇ ಕೇವಲ ಬುದ್ಧಿವಂತಿಕೆಯನ್ನ ಉಪಯೋಗಿಸಿಕೊಂಡು ಸಿನಿಮಾವನ್ನ ಮಾಡಬಹುದೆಂದು ತೋರಿಸಿಕೊಟ್ಟ ಈ ತಂಡ ಈಗ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ.

'ಹೆಬ್ಬುಲಿ' ಸಿನಿಮಾವನ್ನ ನಿರ್ಮಾಣ ಮಾಡಿದ್ದ ಉಮಾಪತಿ ಶ್ರೀನಿವಾಸ್ ಗೌಡ ಇದೀಗ 'ರಾಮಾ ರಾಮಾ ರೇ' ಚಿತ್ರತಂಡದ ಎರಡನೇ ಪ್ರಯತ್ನಕ್ಕೆ ಬಂಡವಾಳ ಹಾಕಲು ಮುಂದೆ ಬಂದಿದ್ದಾರೆ. ಈ ಬಾರಿಯೂ ಕತೆಯನ್ನೇ ನಾಯಕನಾಗಿ ಮಾಡಿಕೊಂಡಿರುವ ನಿರ್ದೇಶಕ ಸತ್ಯ ಪ್ರಕಾಶ್ ಸದ್ಯ ಚಿತ್ರಕ್ಕೆ ಬಾಲಪ್ರತಿಭೆಯ ಹುಡುಕಾಟದಲ್ಲಿದ್ದಾರೆ.

'Rama Rama Re' team has called Auditions for new film

ಸದ್ಯ ಸಿನಿಮಾ ತಂಡ ಬಾಲ ಕಲಾವಿದನ ಅನ್ವೇಷಣೆಯಲ್ಲಿದ್ದು, ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಯಲ್ಲಿರುವ ಮಕ್ಕಳಿಗೆ ಆಸಕ್ತಿ ಇದೆ ಎಂದು ತಿಳಿಸಿದ್ರೆ ಖುದ್ದು ಚಿತ್ರತಂಡವೇ ಶಾಲೆಗಳಿಗೆ ಹೋಗಿ ಆಡಿಷನ್ ಮಾಡಲು ನಿರ್ಧರಿಸಿದೆ. 'ರಾಮಾ ರಾಮಾ ರೇ' ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರೇ ಹೊಸ ಸಿನಿಮಾದಲ್ಲೂ ಕೆಲಸ ಮಾಡಲಿದ್ದಾರೆ.

ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಿದ್ದು ಲವಿತ್ ಕ್ಯಾಮೆರಾ ವರ್ಕ್ ಸಿನಿಮಾಗೆ ಇರಲಿದೆ. ಕಂಪ್ಲೀಟ್ ಪ್ರೀ ಪ್ರೊಡಕ್ಷನ್ ಕೆಲಸ ಮುಗಿಸಿರುವ ಸಿನಿಮಾ ತಂಡ ಸದ್ಯ ಆಡಿಷನ್ ಗಾಗಿ ವಿಡಿಯೋ ಮಾಡಿ ಎಲ್ಲರಿಗೂ ಮನವಿ ಮಾಡಿದ್ದಾರೆ. ಒಟ್ಟಾರೆ 'ರಾಮಾ ರಾಮಾ ರೇ' ಸಿನಿಮಾವನ್ನ ಎಂಜಾಯ್ ಮಾಡಿರುವ ಪ್ರೇಕ್ಷಕರಿಗೆ ಮತ್ತೊಂದು ರೀತಿಯ ಹೊಸ ಅನುಭವ ಆಗಲಿದೆ.

English summary
Rama Rama Re Director Sathya Prakash team up with 'Hebbuli' Producer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada