ರಕ್ಷಿತ್ ಶೆಟ್ಟಿ ಚಿತ್ರಕ್ಕೆ ತೆಲುಗಿನ ಸ್ಟಾರ್ ರೈಟರ್ ಲಿರಿಕ್ಸ್
Recommended Video
ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರಿ ಸಾಕಷ್ಟು ಸಿನಿಮಾಗಳಿಗೆ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಇದೀಗ 'ಅವನೇ ಶ್ರೀಮನ್ನಾರಾಯಣ' ತೆಲುಗು ಅವತರಣಿಕೆಗೆ ಗೀತರಚನೆಯ ಜವಾಬ್ದಾರಿ ತೆಗೆದುಕೊಂಡಿದ್ದಾರೆ.
ಇತ್ತೀಚಿಗೆ ಪ್ಯಾನ್ ಇಂಡಿಯಾ ಚಿತ್ರಗಳಾದ 'ಕೆಜಿಎಫ್' ಹಾಗೂ 'ಪೈಲ್ವಾನ್' ಚಿತ್ರಗಳಿಗೂ ರಾಮ ಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆದಿದ್ದರು. ಇದೀಗ ರಕ್ಷಿತ್ ನಟನೆಯ 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ ಪೆನ್ ಹಿಡಿದಿದ್ದಾರೆ. ಸಿನಿಮಾ ಪಂಚಭಾಷೆಯಲ್ಲಿ ಸಿದ್ದವಾಗ್ತಿದ್ದು, ಈ ಚಿತ್ರದ ತೆಲುಗು ವರ್ಷನ್ ಗೆ ರಾಮ ಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆಯುತ್ತಿದ್ದಾರೆ.
ರಾಮಜೋಗಯ್ಯ ಶಾಸ್ತ್ರಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು. ತೆಲುಗಿನ ಅನೇಕ ಸ್ಟಾರ್ ಸಿನಿಮಾಗಳಲ್ಲಿ ಶಾಸ್ತ್ರಿಯವರ ಸಾಹಿತ್ಯದ ಸೊಬಗು ಮೇಳೈಸಿದೆ. ಇದೀಗ, 'ಅವನೇ ಶ್ರೀಮನ್ನಾರಾಯಣ' ಚಿತ್ರದ ಕಥಾವಸ್ತು ಹಾಗೂ ಮೇಕಿಂಗ್ ನೋಡಿ ಥ್ರಿಲ್ ಆಗಿರೋ ಅವ್ರು ತುಂಬ ಖುಷಿಯಿಂದ ಕೆಲಸ ಶುರುಮಾಡಿದ್ದಾರಂತೆ. ಈ ಕುರಿತು ರಾಮಜೋಗಯ್ಯ ಶಾಸ್ತ್ರಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

'ಅವನೇ ಶ್ರೀಮನ್ನಾರಾಯಣ' ಅಜನೀಶ್ ಲೋಕನಾಥ್ ಹಾಗೂ ಚರಣ್ ರಾಜ್ ಸಂಗೀತ ನೀಡುತ್ತಿದ್ದಾರೆ. ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್ ಪ್ರಾರಂಭದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರದ ನಿರ್ಮಾಣ ಮಾಡಿದ್ದು, ಸಚಿನ್ ರವಿ ನಿರ್ದೇಶನ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ , ಬಾಲಾಜಿ ಮೋಹನ್ ನಟಿಸಿದ್ದಾರೆ.


Click it and Unblock the Notifications











