»   » 16 ವರ್ಷದ ಸಂಭ್ರಮದಲ್ಲಿ ಮತ್ತೆ ಒಂದಾಯ್ತು 'ಮೆಜೆಸ್ಟಿಕ್' ಜೋಡಿ

16 ವರ್ಷದ ಸಂಭ್ರಮದಲ್ಲಿ ಮತ್ತೆ ಒಂದಾಯ್ತು 'ಮೆಜೆಸ್ಟಿಕ್' ಜೋಡಿ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾರಂಗಕ್ಕೆ ನಾಯಕನಾಗಿ ಪರಿಚಯಿಸಿದ ಸಿನಿಮಾ ಮೆಜೆಸ್ಟಿಕ್. ಅಭಿನಯಿಸಿದ ಮೊದಲ ಚಿತ್ರದಲ್ಲೇ ಮಾಸ್ ಹೀರೋ ಆಗಿ ಫೇಮಸ್ ಆದ ದರ್ಶನ್ ಇಂದಿಗೂ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರನ್ನ ಮರೆತಿಲ್ಲ.

ನಾಯಕನಾಗಿ ಅಭಿನಯಿಸಲು ಅವಕಾಶ ಕೊಟ್ಟ ಚಿತ್ರತಂಡವನ್ನ ಇಂದಿಗೂ ದರ್ಶನ್ ತುಂಬಾ ಪ್ರೀತಿಯಿಂದಲೇ ನೋಡಿಕೊಳ್ಳುತ್ತಾರೆ. ಇತ್ತೀಚಿಗಷ್ಟೇ ಸಿನಿಮಾತಂಡದ ಜೊತೆ ಸೇರಿ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.

2017ರ ಅತ್ಯುತ್ತಮ ಕಮರ್ಷಿಯಲ್ ಸಿನಿಮಾ 'ತಾರಕ್'

ಇದೇ ಸಂದರ್ಭದಲ್ಲಿ ದರ್ಶನ್ ಮತ್ತು ಮೆಜೆಸ್ಟಿಕ್ ಸಿನಿಮಾ ನಿರ್ಮಾಪಕರಾದ ರಾಮಮೂರ್ತಿ ಒಟ್ಟಿಗೆ ಸೇರಿ ಮತ್ತೊಂದು ಸಿನಿಮಾ ಮಾಡುವುದಾಗಿ ನಿರ್ಧರಿಸಿದ್ದು ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದಂದು ಚಿತ್ರದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತಂತೆ. ಹಾಗಾದ್ರೆ ದರ್ಶನ್ ಯಾವ ಚಿತ್ರವನ್ನ ರಾಮಮೂರ್ತಿ ನಿರ್ಮಾಣ ಮಾಡಲಿದ್ದಾರೆ?. ಚಿತ್ರ ಸೆಟ್ಟೇರುವುದು ಯಾವಾಗ? ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಮತ್ತೆ ಒಂದಾಯ್ತು ಮೆಜೆಸ್ಟಿಕ್ ಜೋಡಿ

ದರ್ಶನ್ ಅಭಿನಯದ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕರು ರಾಮಮೂರ್ತಿ ದರ್ಶನ್ ಅವರಿಗಾಗಿ ಮತ್ತೊಂದು ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಕೂಡ ಚಿತ್ರದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಪ್ರೀತಿಯಿಂದ ಶುರುವಾಗಲಿದೆ ಸಿನಿಮಾ

ರಾಮಮೂರ್ತಿ ನಿರ್ಮಾಣದ ಚಿತ್ರದಲ್ಲಿ ದರ್ಶನ್ ಅಭಿನಯಿಸುವುದು ಖಚಿತವಾಗಿದೆ. ಆದರೆ ಸಿನಿಮಾ ನಿರ್ದೇಶನ ಮಾಡುವುದು ಯಾರು ಎನ್ನುವುದನ್ನ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಚಿತ್ರಕ್ಕೆ 'ಡಿ ಕಂಪನಿ' ಎನ್ನುವ ಶೀರ್ಷಿಕೆ ಇಡುವ ಸಾಧ್ಯತೆಗಳಿದೆ.

ಹುಟ್ಟುಹಬ್ಬದ ವಿಶೇಷ

ನಿರ್ಮಾಪಕ ರಾಮಮೂರ್ತಿ ದರ್ಶನ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಅಭಿಮಾನಿಗಳು ಚಿತ್ರದ ಪೋಸ್ಟರ್ ಗಳನ್ನ ಡಿಸೈನ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.

ದರ್ಶನ್ 53 ಚಿತ್ರನೇ ನಿರ್ಮಾಣ

'ಮೆಜೆಸ್ಟಿಕ್' ಸಿನಿಮಾದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆದಿದ್ದು ದರ್ಶನ್ ಅಭಿನಯದ 53ನೇ ಸಿನಿಮಾದ ಡೇಟ್ಸ್ ಅನ್ನು ನಿರ್ಮಾಪಕ ರಾಮಮೂರ್ತಿ ಅವರಿಗೆ ನೀಡಲಾಗಿದೆಯಂತೆ.

ಚಿತ್ರರಂಗದಲ್ಲಿ 16 ವರ್ಷ ಪೂರೈಸಿದ ಡಿ ಬಾಸ್

ಡಿ ಬಾಸ್ ಚಿತ್ರರಂಗಕ್ಕೆ ಬಂದು 16 ವರ್ಷ ಪೂರೈಸಿದ್ದಾರೆ. ಈ ಖುಷಿಯ ಸಂಧರ್ಭವನ್ನ ದರ್ಶನ್ ಅಭಿಮಾನಿಗಳು ಮತ್ತು ಸ್ನೇಹಿತರು ಕೇಕ್ ಕತ್ತರಿಸಿ ಖುಷಿಯಿಂದ ಆಚರಣೆ ಮಾಡಿದ್ದಾರೆ.

English summary
Kannada Producer Ramakrishna is producing Challenging Star Darshan's 53rd movie. Ramamurthy Majestic film producer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada