Don't Miss!
- News Gold & Silver Price: ಮತ್ತೆ ಏರಿದ ಚಿನ್ನದ ದರ, ಇಂದಿನ ಬೆಳ್ಳಿ-ಬಂಗಾರದ ಬೆಲೆ ವಿವರ ತಿಳಿಯಿರಿ
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
6 ದಿನಗಳ ಕಾಲ ನಡೆಯಲಿದೆ ರಮಣನ ಕಲ್ಯಾಣ
Recommended Video
ರಾಧ ರಮಣ ಧಾರಾವಾಹಿ ಖ್ಯಾತಿಯ ನಟ ಸ್ಕಂದ ಅಶೋಕ್ ಇದೇ ತಿಂಗಳ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹು ದಿನದ ಗೆಳತಿ ಶಿಕಾ ಪ್ರಸಾದ್ ಜೊತೆಯಲ್ಲಿ ರಮಣ್ ವಿವಾಹವಾಗುತ್ತಿರುವ ವಿಚಾರ ಎಲ್ಲರಿಗೂ ಈಗಾಗಲೇ ತಿಳಿದಿದೆ.
ಧಾರಾವಾಹಿಗೂ ಮುನ್ನವೇ ಸ್ಕಂದ ಅಶೋಕ್ ಸಾಕಷ್ಟು ಸಿನಿಮಾಗಳಲ್ಲಿಯೂ ಅಭಿನಯ ಮಾಡಿದ್ದಾರೆ. ತಮಿಳು, ತೆಲುಗು ಸೇರಿದಂತೆ ಮಲೆಯಾಳಂ ಚಿತ್ರಗಳಲ್ಲಿಯೂ ಸ್ಕಂದ ಅವರ ಅಭಿನಯವಿದೆ. ಕನ್ನಡದ 'ಚಾರುಲತಾ' ಚಿತ್ರದಲ್ಲಿಯೂ ನಾಯಕನಾಗಿ ಕಾಣಿಸಿಕೊಂಡಿದ್ದರು.
'ರಾಧಾ ರಮಣ' ಧಾರಾವಾಹಿಯ ನಟನಿಗೆ ಕೂಡಿ ಬಂತು ಕಂಕಣಭಾಗ್ಯ
ಇತ್ತೀಚಿಗಷ್ಟೆ ಸ್ಕಂದ ಹಾಗೂ ಶಿಕಾ ಪ್ರಸಾದ್ ಇಬ್ಬರ ನಿಶ್ಚಿತಾರ್ಥ ನಡೆದಿದ್ದು ಇದೇ ತಿಂಗಳ 31 ರಂದು ಗುರು ಹಿರಿಯರ ಸಮ್ಮುಖದಲ್ಲಿ ವಿವಾಹ ಆಗಲಿದ್ದಾರೆ. ಸಾವಿರಾರು ಹುಡುಗಿಯರ ಮನಸ್ಸು ಕದ್ದಿರುವ ನಾಯಕನ ಮದುವೆ ಆರು ದಿನಗಳು ನಡೆಯಲಿದೆ. ಹಾಗಾದರೆ ಹೇಗೆ ನಡೆಯಲಿದೆ ಮದುವೆ ಅಂತೀರಾ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ
ಆರು ದಿನ ನಡೆಯಲಿದೆ ರಮಣನ ಮದುವೆ
ಬೆಳ್ಳಿ ತೆರೆ ಹಾಗೂ ಕಿರುತೆರೆಯಿಂದಲೇ ಪ್ರಖ್ಯಾತಿ ಗಳಿಸಿರುವ ನಟ ಸ್ಕಂದ ಅಶೋಕ್ ಮದುವೆ ಆರು ದಿನಗಳ ಕಾಲ ನಡೆಯಲಿದೆ. ಒಂದೊಂದು ಶಾಸ್ತ್ರ ಸಮಾರಂಭ ಒಂದೊಂದು ಕಡೆಯಲ್ಲಿ ಜರುಗಲಿದೆ.
ಮೇ 25ರಿಂದ ಶುರುವಾಗಲಿದೆ ಸಂಭ್ರಮ
ಮೇ 30 ರಂದು ಸ್ಕಂದ ಹಾಗೂ ಶಿಕಾ ಮದುವೆ ಸಮಾರಂಭ ಜರುಗಲಿದ್ದು ಅದಕ್ಕೂ ಮುನ್ನವಾಗಿ ಅಂದರೆ ಮೇ 25 ರಂದು ಬಸವನಗುಡಿಯಲ್ಲಿರುವ ಗಂಜಂ ಕಲ್ಯಾಣ ಮಂಟಪದಲ್ಲಿ ಹಳದಿ ಶಾಸ್ತ್ರ ನಡೆಯಲಿದೆ.
28 ರಂದು ಮೆಹೆಂದಿ ಸಂಭ್ರಮ
ಅರಿಶಿನ ಶಾಸ್ತ್ರದ ನಂತರ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಮೆಹೆಂದಿ ಸಮಾರಂಭವನ್ನು ಆಯೋಜಿಸಲಾಗಿದೆ. ಮೇ 28 ರಂದು ಮೆಹೆಂದಿ ಶಾಸ್ತ್ರ ಜರುಗಲಿದೆ.
ಸಂಗೀತ್ ಕಾರ್ಯಕ್ರಮದಲ್ಲಿ ಸಿನಿಮಾ ಸ್ಟಾರ್
ಮೆಹೆಂದಿ ನಡೆದ ನಂತರ ಸಂಜೆ ತಾಜ್ ವೆಸ್ಟ್ ಎಂಡ್ ನಲ್ಲಿ ಸಂಗೀತ್ ಕಾರ್ಯಕ್ರಮ ಜರುಗಲಿದೆ. ರಮಣ್ ಮತ್ತು ಶಿಕಾ ಅವರ ಸಂಗೀತ್ ಕಾರ್ಯಕ್ರಮದಲ್ಲಿ ಸಾಕಷ್ಟು ಸಿನಿಮಾ ತಾರೆಯರು ಹಾಗೂ ಕಿರುತೆರೆಯ ಕಲಾವಿದರು ಭಾಗಿ ಆಗಲಿದ್ದಾರೆ.
ಅದ್ದೂರಿಯಾಗಿರಲಿದೆ ವರ ಪೂಜೆ
ಮೇ 29 ರಂದು ವರಪೂಜೆ ನಡೆಯಲಿದ್ದು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ ನಲ್ಲಿ ವರಪೂಜೆ ಸಮಾರಂಭ ಜರುಗಲಿದೆ. ಅದರ ಜೊತೆಯಲ್ಲಿ ಬಳೆ ಶಾಸ್ತ್ರ ಕೂಡ ಅಲ್ಲಿಯೇ ನಡೆಯಲಿದೆ. ಸ್ಕಂದ ಅಶೋಕ್ ಹಾಗೂ ಶಿಕಾ ಪ್ರಸಾದ್ ಮನೆಯ ಹಿರಿಯರೆಲ್ಲರೂ ವರ ಪೂಜೆಯಲ್ಲಿ ಭಾಗಿ ಆಗಲಿದ್ದಾರೆ.
ಅರಮನೆಯಲ್ಲಿ ವಿವಾಹ ಸಮಾರಂಭ
ನಾಲ್ಕು ದಿನಗಳು ಈ ಶಾಸ್ತ್ರಗಳೆಲ್ಲವನ್ನು ಮುಗಿಸಿದ ನಂತರ ಮೇ 30 ರಂದು ಬೆಂಗಳೂರು ಅರಮನೆಯಲ್ಲಿ ಆರತಕ್ಷತೆ ನಡೆಯಲಿದೆ. 31 ರಂದು ವಿವಾಹವೂ ಅರಮನೆಯಲ್ಲೇ ನಡೆಯುತ್ತದೆ.
ಹಲವಾರು ವಿಶೇಷತೆಗಳಿಂದ ಕೂಡಿರುವ ವಿವಾಹ
ಸ್ಕಂದ ಅಶೋಕ್ ಹಾಗೂ ಶಿಕಾ ಪ್ರಸಾದ್ ಮದುವೆ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ರಾಜಕೀಯ ಗಣ್ಯರು ಹಾಗೂ ಸಿನಿಮಾ ಸ್ಟಾರ್ ಗಳು ಭಾಗಿ ಆಗಲಿದ್ದಾರೆ. ಡಾ ರಾಜ್ ಕುಮಾರ್, ದೇವಗೌಡ, ರಾಕಿಂಗ್ ಸ್ಟಾರ್ ಯಶ್ ಹೀಗೆ ಸಾಕಷ್ಟು ಗಣ್ಯರ ಕುಟುಂಬದ ಮದುವೆಗಳನ್ನ ಮಾಡಿಸಿದ ಕ್ಲೋವರ್ ಮ್ಯಾನ್ಷನ್ ಹಾಗೂ ಅಫಿಷಿಯಲ್ ಬೆಂಗಳೂರು ಫ್ಯಾಲೆಸ್ ವೆಡ್ಡಿಂಗ್ ಪ್ಲಾನರ್ ನ ಧ್ರುವ ಅವರೇ ಈ ಮದುವೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.