For Quick Alerts
  ALLOW NOTIFICATIONS  
  For Daily Alerts

  ಪುನೀತ್ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡಿದ ಅಂಬಾಡಹಳ್ಳಿ ಜನತೆ

  By ರಾಮನಗರ ಪ್ರತಿನಿಧಿ
  |

  ಕನ್ನಡ ಚಿತ್ರರಂಗದ ಮೇರು ನಟ ಪವರ್ ಸ್ಟಾರ್‌ ನಮ್ಮಗಲಿ ಒಂದು ತಿಂಗಳಾಗಿದೆ. ಪುನೀತ್ ನೆನಪಿನಲ್ಲಿ ರಾಜ್ಯಾದ್ಯಂತ ವಯಸ್ಸಿನ ಬೇಧವಿಲ್ಲದೆ ಭಾವ ಪೂರ್ಣ ನಮನ ಸಲ್ಲಿಸಿದ್ದಾರೆ. ರಾಜ್ಯದಾದ್ಯಂತ ಅಭಿಮಾನಿಗಳು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪುನೀತ್ ಅನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ರಾಮನಗರ ಅಂಬಾಡಹಳ್ಳಿ ಗ್ರಾಮದ ವೃತ್ತಕ್ಕೆ ಪುನೀತ್ ಹೆಸರಿಟ್ಟು ಪುನೀತ್ ನೆನಪನ್ನು ಚಿರಸ್ಥಾಯಿಯನ್ನಾಗಿಸಿದ್ದಾರೆ.

  ಅಂಬಾಡಹಳ್ಳಿ , ಬಡ ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಕುಗ್ರಾಮ. ಆದರೆ ಅಲ್ಲಿನ ಜನತೆಯ ಅಭಿಮಾನದಲ್ಲಿ ಮಾತ್ರ ಇನ್ನಿಲ್ಲದ ಶ್ರೀಮಂತಿಕೆ. ಅದು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಂಡಿತು. ನೆಚ್ಚಿನ ನಟ ಹೆಸರನ್ನು ವೃತ್ತಕ್ಕೆ ಇಡುವ ಮೂಲಕ ಹೃದಯ ಶ್ರೀಮಂತಿಕೆ ಮೇರದಿದ್ದಾರೆ ಅಂಬಾಡಳ್ಳಿ ಗ್ರಾಮಸ್ಥರು.

  ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಗಡಿ ಗ್ರಾಮದ ಅಂಬಾಡಹಳ್ಳಿಯಲ್ಲಿ ಪುನೀತ್ ಅಭಿಮಾನಿ ಬಳಗ ಮತ್ತು ಗ್ರಾಮಸ್ಥರು ಪುನೀತ್ ಸ್ಮರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದರು. ಹೊರಗಿನಿಂದ ಸಂಪನ್ಮೂಲ ಕ್ರೂಡೀಕರಿಸದೆ, ತಮ್ಮದೇ ಸ್ವಂತ ಹಣ ಬಳಸಿ ಚಿಕ್ಕದಾಗಿ ಆದರೆ ಚೊಕ್ಕವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು.

  ಅಂಬಾಡಹಳ್ಳಿ ಗ್ರಾಮದ ಹೊರ ಬಾಗಿಲನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಆರಂಭದಲ್ಲಿ ಬೆಳ್ಳಿ ರಥದಲ್ಲಿ ಅಗಲಿದ ನಟ ಪುನೀತರಾಜಕುಮಾರ್ ಭಾವಚಿತ್ರವನ್ನಿಟ್ಟು, ಡೊಳ್ಳುಕುಣಿದೊಂದಿಗೆ ಗ್ರಾಮದ ಬೀದಿಬೀದಿಗಳಲ್ಲಿ ಮೆರವಣಿಗೆ ನಡೆಸಿದ್ರು. ಇದಕ್ಕೆ ಆಟೋ ಚಾಲಕರು ಸಾಥ್ ನೀಡಿದರು.

  ನಂತರ ಗ್ರಾಮದ ವೃತಕ್ಕೆ ಪುನೀತ್ ರಾಜಕುಮಾರ್ ವೃತ್ತವೆಂದು ನಾಮಕರಣ ಮಾಡಿ, ನಾಮಫಲಕ ಅಳವಡಿಸಿ, ಕನ್ನಡ ಧ್ವಜರೋಹಣ ಮಾಡಿ, ರಾಜ್ಯೋತ್ಸವ ಆಚರಿಸಿ, ಪುನೀತ್ ಸವಿನೆನೆಪಿಗಾಗಿ ಸಾವಿರಾರು ಮಂದಿಗೆ ಅನ್ನ ಸಂತರ್ಪಣೆ ಮಾಡಿ ಜನ ಮೆಚ್ಚುಗೆಗೆ ಪಾತ್ರರಾದರು.

  ಪುನೀತ್ ಸ್ಮರಣೆ ಕಾರ್ಯಕ್ರಮಕ್ಕೆ ಯಾರಿಂದಲೂ ಹಣ ಪಡೆಯದೇ ಕಾರ್ಯಕ್ರಮಕ್ಕೆ ಯಾವುದೇ ರಾಜಕಾರಣಿಗಳು ಮತ್ತು ಗಣ್ಯರನ್ನು ಕರೆಯದೇ, ಸ್ವತಃ‌ ದಿನಗೂಲಿಯಲ್ಲಿ ದುಡಿದ ಹಣ ವ್ಯಯಿಸಿ ತಾವೇ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ಅಕ್ಕಪಕ್ಕದ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.

  ಗ್ರಾ.ಪಂ. ಸದಸ್ಯರಾದ ತಿಮ್ಮೇಗೌಡ, ಪುಟ್ಟಸ್ವಾಮಿ, ಬಸಮ್ಮಣ್ಣಿ, ಮುಖಂಡರಾದ ಶಿವಮುತ್ತು, ರಘುಮಾದೇಗೌಡ, ಪ್ರವೀಣ, ವೆಂಕಟರಾಮು, ಶ್ರೀನಿವಾಸ್, ಕಾಳಯ್ಯ, ಚಲುವರಾಜು, ಸ್ವಾಮಿ, ವೆಂಕಟರಾಮು ದಿನೇಶ್ ಮುಂತಾದವರಿದ್ದರು.

  ಪುನೀತ್ ರಾಜ್‌ಕುಮಾರ್ ಕಳೆದ ತಿಂಗಳು ಅಕ್ಟೋಬರ್ 29ರಂದು ಹೃದಯಾಘಾತದಿಂದ ಹಠಾತ್ತನೆ ನಿಧನ ಹೊಂದಿದರು. ಕಳೆದ ಒಂದು ತಿಂಗಳಿನಿಂದಲೂ ಪುನೀತ್ ಅಭಿಮಾನಿಗಳು ರಾಜ್ಯದಾದ್ಯಂತ ಹಲವು ಕಾರ್ಯಕ್ರಮಗಳನ್ನು ಅಪ್ಪು ನೆನಪಿನಲ್ಲಿ ಆಯೋಜನೆ ಮಾಡುತ್ತಲೇ ಇದ್ದಾರೆ. ಇಂದು ಸಹ ರಾಜ್ಯದಾದ್ಯಂತ ಹಲವು ಕಡೆ ರಕ್ತದಾನ ಶಿಬಿರ, ನೇತ್ರದಾನ ಶಿಬಿರ ಆಯೋಜಿತವಾಗಿವೆ. ಪುನೀತ್ ಕುಟುಂಬದವರು ಇಂದು ಅಪ್ಪು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

  English summary
  Ramanagara district Ambadalli villagers named their villages main circle in Puneeth Rajkumar's name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X