For Quick Alerts
  ALLOW NOTIFICATIONS  
  For Daily Alerts

  ನಟಿ ಸವಿ ಮಾದಪ್ಪ ಆತ್ಮಹತ್ಯೆ ಪ್ರಕರಣ: ಪೊಲೀಸರ ಕೈ ಸೇರಿದ ಮರಣೋತ್ತರ ಪರೀಕ್ಷೆ ವರದಿ

  By ರಾಮನಗರ ಪ್ರತಿನಿಧಿ
  |

  ಕನ್ನಡ ಕಿರುತೆರೆ ನಟಿ ಸವಿ ಮಾದಪ್ಪ ಅಲಿಯಾಸ್ ಸೌಜನ್ಯ ಕೆಲವು ದಿನಗಳ ಹಿಂದೆ ಬೆಂಗಳೂರಿನ ಹೊರವಲಯದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ನಟಿಯ ಆತ್ಮಹತ್ಯೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು.

  ಸವಿ ಮಾದಪ್ಪ ಸಾವಿನ ಬಳಿಕ ಅವರ ಪೋಷಕರು, ಸವಿ ಮಾದಪ್ಪ ಬಾಯ್‌ಫ್ರೆಂಡ್ ವಿವೇಕ್ ಹಾಗೂ ಪಿಎ ಮಹೇಶ್ ಅವರುಗಳ ವಿರುದ್ಧ ಆರೋಪಗಳನ್ನು ಮಾಡಿ, ಅವರಿಂದಲೇ ಮಗಳು ಸಾವಿಗೆ ಈಡಾಗಿದ್ದಾಳೆ ಎಂದು ದೂರು ನೀಡಿದ್ದರು. ಹೀಗಾಗಿ ಪ್ರಕರಣ ಹೆಚ್ಚು ಕುತೂಹಲಕಾರಿಯಾಗಿ ಪರಿಣಮಿಸಿತ್ತು.

  ಪ್ರಕರಣವನ್ನು ಕುಂಬಳಗೋಡು ಪೊಲೀಸರು ತನಿಖೆ ನಡೆಸುತ್ತಿದ್ದು, ನಟಿಯ ಮರಣೋತ್ತರ ಪರೀಕ್ಷಾ ವರದಿ ಇದೀಗ ಬಂದಿದೆ.

  ಸವಿ ಮಾದಪ್ಪ ಮರಣೋತ್ತರ ಪರೀಕ್ಷಾ ವರದಿ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಾಮನಗರ ಎಸ್‌ಪಿ, ತಾತ್ಕಾಲಿಕ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ನಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಹೇಳುತ್ತಿದೆ. ಆದರೆ ಇದು ಪೂರ್ಣವಾದ ವರದಿಯಲ್ಲ. ನಟಿಯ ದೇಹದ ಒಳಗೆ ಇನ್ನಾವುದೇ ವಿಷಕಾರಿ ಅಂಶಗಳು ಸೇರಿವೆಯೇ ಎಂಬುದನ್ನು ಎಫ್‌ಎಸ್‌ಎಲ್‌ ವರದಿ ಮುಖಾಂತರ ಖಚಿತಪಡಿಸಿಕೊಳ್ಳಬೇಕಾಗಿದ್ದು, ನಟಿಯ ಮೃತ ದೇಹದ ಕೆಲವು ಭಾಗಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಇನ್ನಷ್ಟು ವಿಷಯ ಖಾತ್ರಿಯಾಗಲಿವೆ. ಎಫ್‌ಎಸ್‌ಎಲ್ ವರದಿ ಬರಲು ಇನ್ನೂ ಎರಡು ತಿಂಗಳಾಗಬಹುದು ಎಂದಿದ್ದಾರೆ.

  ನಟಿ ಬರೆದಿದ್ದಾರೆ ಎನ್ನಲಾದ ಎರಡು ಪುಟಗಳ ಡೆತ್ ನೋಟ್ ಮೃತ ದೇಹದ ಬಳಿ ದೊರಕಿತ್ತು, ಅದನ್ನೂ ಸಹ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಟಿಯ ಇತರೆ ಹಸ್ತಾಕ್ಷರಗಳ ಮಾದರಿ ಸಂಗ್ರಹಿಸಿ ತಜ್ಞರು ಹೋಲಿಸಿ ನೋಡುತ್ತಿದ್ದಾರೆ. ಅದರ ಹೊರತಾಗಿ ಇನ್ನೂ ಕೆಲವು ಹಾದಿಗಳಲ್ಲಿ ವಿಚಾರಣೆ ನಡೆಯುತ್ತಿದೆ. ಈ ವರೆಗೆ ನಮ್ಮ ತನಿಖೆಯಲ್ಲಿ ಯಾರನ್ನೂ ಆರೋಪಿತರನ್ನಾಗಿ ಗುರುತಿಸಲಾಗಿಲ್ಲ'' ಎಂದಿದ್ದಾರೆ ಗಿರೀಶ್.

  ಸವಿ ಮಾದಪ್ಪ ಅಲಿಯಾಸ್ ಸೌಜನ್ಯ, ಸೆಪ್ಟೆಂಬರ್ 30 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಬಾಯ್‌ಫ್ರೆಂಡ್‌ ಜೊತೆಗೆ ಅಪಾರ್ಟ್‌ಮೆಂಟ್ ಒಂದರಲ್ಲಿ ಸವಿ ಮಾದಪ್ಪ ವಾಸವಿದ್ದರು ಎನ್ನಲಾಗುತ್ತಿದ್ದು, ಬಾಯ್‌ಫ್ರೆಂಡ್ ಬೆಳಗಿನ ಉಪಹಾರ ತರಲು ಹೊರಗೆ ಹೋದಾಗ ನಟಿ ನೇಣು ಬಿಗಿದುಕೊಂಡಿದ್ದರು. ಜೊತೆಗೆ ಎರಡು ಪುಟದ ಡೆತ್‌ನೋಟ್ ನಟಿಯ ಬಳಿ ಪತ್ತೆಯಾಗಿದ್ದು ತನ್ನ ಸಾವಿಗೆ ತಾನೇ ಕಾರಣವೆಂದು, ತಾನು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೆಂದು ಇನ್ನೂ ಹಲವು ಅಂಶಗಳನ್ನು ಬರೆದಿದ್ದಾರೆ.

  ನಟಿಯ ಸಾವಿನ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ನಟಿಯ ತಂದೆ ಪ್ರಭು ಮಾದಪ್ಪ, ವಿವೇಕ್ ಹಲವು ವರ್ಷಗಳಿಂದ ಸವಿ ಮಾದಪ್ಪ ಅನ್ನು ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದ ಎಂದು ಆರೋಪಿಸಿದ್ದರು. ಮಗಳ ಸಾವಿಗೆ ವಿವೇಕ್ ಹಾಗೂ ಮಗಳ ಪಿಎ ಆಗಿದ್ದ ಮಹೇಶ್ ಕಾರಣ ಎಂದು ಆರೋಪಿಸಿ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿವೇಕ್ ಹಾಗೂ ಮಹೇಶ್ ಇಬ್ಬರನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ.

  English summary
  Ramanagara police Superintendent S Girish talks about actress Savi Madappa's case. He said initial postmortem report arrived but waiting for FSL report to come.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X