ಸ್ಯಾಂಡಲ್‌ವುಡ್‌ನಲ್ಲಿ ಸಿನಿ ಟ್ರಾಫಿಕ್; ಮೇ 10ಕ್ಕೆ ಸಾಲು ಸಾಲು ಚಿತ್ರಗಳು ರಿಲೀಸ್

ಕಳೆದೊಂದು ತಿಂಗಳಿಂದ ಸ್ಯಾಂಡಲ್‌ವುಡ್‌ ಸೈಲೆಂಟ್ ಆಗಿದೆ. ಯಾವುದೇ ಸಿನಿಮಾ ಬಿಡುಗಡೆ ಆಗಲು ಹಿಂದು ಮುಂದು ನೋಡುವಂತಾಗಿದೆ. ಒಂದ್ಕಡೆ ಲೋಕಸಭೆ ಎಲೆಕ್ಷನ್ ಭರಾಟೆ. ಮತ್ತೊಂದು ಕಡೆ ಐಪಿಎಲ್ ಫೀವರ್. ಕರ್ನಾಟಕದಲ್ಲಿ ಮೇ 7ರಂದು 2ನೇ ಹಂತದ ಮತದಾನ ನಡಯಲಿದೆ. ಬಳಿಕ ಮೇ 10ಕ್ಕೆ ಸಾಲು ಸಾಲು ಸಿನಿಮಾಗಳು ತೆರೆಗಪ್ಪಳಿಸುತ್ತಿವೆ.

ಹೌದು. ಮೇ 10ರಂದು ಸ್ಯಾಂಡಲ್‌ವುಡ್‌ನಲ್ಲಿ ಸಿನಿಸುಗ್ಗಿ. ಒಂದಷ್ಟು ಬಹುನಿರೀಕ್ಷಿತ ಸಿನಿಮಾಗಳ ಜೊತೆಗೆ ಪುನೀತ್ ರಾಜ್‌ಕುಮಾರ್ ನಟನೆಯ ಎರಡು ಸಿನಿಮಾ ರೀ ರಿಲೀಸ್ ಆಗುತ್ತಿವೆ. ಕಾಮಿಡಿ, ಹಾರರ್, ಥ್ರಿಲ್ಲರ್, ಆಕ್ಷನ್ ಹೀಗೆ ಎಲ್ಲಾ ಜಾನರ್ ಸಿನಿಮಾಗಳು ಲಿಸ್ಟ್‌ನಲ್ಲಿವೆ. ಹಾಗಾದರೆ ಯಾವೆಲ್ಲಾ ಸಿನಿಮಾಗಳು ಮುಂದಿನ ವಾರ ತೆರೆಗೆ ಬರ್ತಿವೆ ಮುಂದೆ ಓದಿ.

Ramanana Avatara to Power 5 kannada movies releasing in theatres on may 10th

1. ಛೂ ಮಂತರ್

ಕಳೆದ ತಿಂಗಳಷ್ಟೆ ಶರಣ್ ನಟನೆಯ 'ಅವತಾರ ಪುರುಷ-2' ಸಿನಿಮಾ ತೆರೆಗೆ ಬಂದಿತ್ತು. ಸದ್ಯ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇದರ ಬೆನ್ನಲ್ಲೇ ಶರಣ್ ನಟನೆಯ 'ಛೂ ಮಂತರ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೇ 10ಕ್ಕೆ ಸಿನಿಮಾ ತೆರೆಗೆ ಬರಲಿದೆ. 'ಕರ್ವ' ಸಿನಿಮಾ ಖ್ಯಾತಿಯ ನವ್‌ನೀತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮೇಘನಾ ಗಾಂವ್ಕರ್, ಚಿಕ್ಕಣ್ಣ, ಅದಿತಿ ಪ್ರಭುದೇವ ತಾರಾಗಣದಲ್ಲಿದ್ದಾರೆ.

2. ರಾಮನ ಅವತಾರ

ರಿಷಿ, ಪ್ರಣೀತಾ ಸುಭಾಷ್, ಶುಭ್ರ ಅಯ್ಯಪ್ಪ ನಟನೆಯ 'ರಾಮನ ಅವತಾರ' ಸಿನಿಮಾ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು. ವಿಕಾಸ್ ಪಂಪಾಪತಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಪಕ್ಕಾ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಇದು ಎನ್ನುವುದು ಗೊತ್ತಾಗುತ್ತಿದೆ. ಮೇ 10ಕ್ಕೆ 'ರಾಮನ ಅವತಾರ' ತೆರೆಮೇಲೆ ಅನಾವರಣ ಆಗಲಿದೆ.

3. ಗ್ರೇ ಗೇಮ್ಸ್‌​​​​

ಗಂಗಾಧರ್ ಸಾಲಿಮಠ ನಿರ್ದೇಶನದ 'ಗ್ರೇ ಗೇಮ್ಸ್‌' ಸಿನಿಮಾ ಕೂಡ ಮೇ 10ಕ್ಕೆ ತೆರೆಗೆ ಬರಲಿದೆ. ಆನ್‌ಲೈನ್‌ ಗೇಮಿಂಗ್‌ ಹಿಂದಿನ ಕರಾಳ ಕಥೆ ಚಿತ್ರದಲ್ಲಿದ್ದು ವಿಜಯ್ ರಾಘವೇಂದ್ರ ಭಾವನಾ ರಾವ್‌, ಶ್ರುತಿ ಪ್ರಕಾಶ್‌, ಅಪರ್ಣಾ ವಸ್ತ್ರೇಯ, ರವಿ ಭಟ್‌ ತಾರಾಗಣದಲ್ಲಿದ್ದಾರೆ. ಗೋವಾದಲ್ಲಿ ನಡೆದ 54ನೇ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಈ ಸಿನಿಮಾ ಸ್ಕ್ರೀನಿಂಗ್ ಆಗಿತ್ತು. ಶೀಘ್ರದಲ್ಲೇ ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ.

Ramanana Avatara to Power 5 kannada movies releasing in theatres on may 10th

4. ಅಂಜನಿಪುತ್ರ

ಪುನೀತ್ ರಾಜ್‌ಕುಮಾರ್ ನಟನೆಯ 'ಅಂಜನಿಪುತ್ರ' ಸಿನಿಮಾ ರೀ-ರಿಲೀಸ್ ಆಗುತ್ತಿದೆ. ರಾಜ್ಯದಲ್ಲಿ ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ಮುಗಿದ ಬೆನ್ನಲ್ಲೇ ಸಾಲು ಸಾಲಾಗಿ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿದೆ. ಈ ಲಿಸ್ಟ್‌ನಲ್ಲಿ ಎ. ಹರ್ಷ ನಿರ್ದೇಶನದ 'ಅಂಜನಿಪುತ್ರ' ಸಿನಿಮಾ ಕೂಡ ಇದೆ. 50ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.

5. ಪವರ್

'ಅಂಜನಿಪುತ್ರ' ಮಾತ್ರವಲ್ಲ ಪುನೀತ್ ರಾಜ್‌ಕುಮಾರ್ ನಟನೆಯ 'ಪವರ್' ಚಿತ್ರವನ್ನು ರೀ-ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಒಮ್ಮೆಲೆ ಅಪ್ಪು ನಟನೆಯ 2 ಸಿನಿಮಾ ಮರು ಬಿಡುಗಡೆ ಆಗುತ್ತಿರುವುದು ವಿಶೇಷ. 10 ವರ್ಷಗಳ ಹಿಂದೆ ಬಂದಿದ್ದ ಈ ಚಿತ್ರಕ್ಕೆ ಕೆ. ಮಾದೇಶ್ ಆಕ್ಷನ್ ಕಟ್ ಹೇಳಿದ್ದರು. ತೆಲುಗಿನ 'ದೂಕುಡು' ಸಿನಿಮಾ ರೀಮೆಕ್ ಇದು. ಇತ್ತೀಚೆಗೆ ಪುನೀತ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಜಾಕಿ' ಸಿನಿಮಾ ರೀ-ರಿಲೀಸ್ ಆಗಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು.

More from Filmibeat

English summary
Kannada Movies Coming to Theaters Next Week;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X