For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ 'ಮುತ್ತಿನ ಮಳೆ'ಗರೆದ ರಮಣೀತೋ

  By Rajendra
  |

  ಮುತ್ತು ಹಾಗೂ ಮಳೆ' ಎಂದೆದಿಗೂ ಅಜರಾಮರ. ಅದು ಪ್ರೀತಿ ಇದ್ದ ಹಾಗೆ ಚಿತ್ರರಂಗದವರ ಪಾಲಿಗೆ. ಮುತ್ತಿನ ಮಳೆ ಸುರಿಸುವವರು ಇದ್ದಾರೆ, ಮಳೆ ಕಾಲದಲ್ಲಿ ಮುತ್ತಿಗೆ ಸಮಯ ಮಾಡಿಕೊಳ್ಳುವವರು ಇದ್ದಾರೆ. ಬೆಚ್ಚನೆಯ ಮುತ್ತು ಮಳೆಗಾಲದ ಅವಿಭಾಜ್ಯ ಅಂಗವೂ ಹೌದು.

  ಸದ್ಯಕ್ಕೆ ಮಂಜುಸಾಗರ ಅವರ 'ಮುತ್ತಿನ ಮಳೆ' ಸಿನಿಮಾ ಮೊದಲ ಹಂತವನ್ನು 12 ದಿವಸಗಳಲ್ಲಿ ಚಿಕ್ಕಮಗಳೂರು ಸುತ್ತಮುತ್ತ ಮುಗಿಸಿ ಬಂದಿದೆ. ಒಂದು ಹಾಡು ಹಾಗೂ ಒಂದಷ್ಟು ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.

  ಮಂಜುಸಾಗರ್ ಅವರು ಪ್ರಪ್ರಥಮ ನಿರ್ದೇಶನದಲ್ಲಿ ತಾವೇ ನಿರ್ಮಾಪಕರಾಗಿ ಚಿತ್ರದ ನಾಯಕರೂ ಆಗಿ ಅಭಿನಯಿಸಿದ್ದಾರೆ. ಅವರು ಈ ಹಿಂದೆ ನಿರ್ದೇಶಕ ಪ್ರೇಮ್, ಕೋಡ್ಲು ರಾಮಕೃಷ್ಣ ಅವರ ಜೊತೆಯಲ್ಲಿ ಕೆಲವು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವ ಪಡೆದಿದ್ದಾರೆ.

  ಮಂಜುಸಾಗರ್ ಅವರು ಚಿತ್ರಕ್ಕೆ ಮತ್ತೊಂದು ಪ್ರಮುಖ ನಾಯಕನ ಹುಡುಕಾಟದಲ್ಲಿ ಇದ್ದಾರೆ. ಆ ಪಾತ್ರವನ್ನು ಪರಿಚಿತ ವ್ಯಕ್ತಿಯೇ ಮಾಡಬೇಕು. ಆ ಪಾತ್ರವು ಸಿನಿಮಾದ ಬಹುಮುಖ್ಯ ಅಂಗ ಸಹ ಎನ್ನುತ್ತಾರೆ ಅವರು.

  'ಮುತ್ತಿನ ಮಳೆ' ಚಿತ್ರದ ನಾಯಕಿ ಆಗಿ ರಮಣೀತು ಚೌಧರಿ ಮತ್ತೊಮ್ಮೆ ಆಗಮಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಅವಿನಾಷ್, ಡಾ.ಶ್ರೀನಾಥ್, ರಂಗಾಯಣ ರಘು, ವಿನಯಪ್ರಕಾಶ್, ಧರ್ಮ ಹಾಗೂ ಇನ್ನಿತರರು ಇದ್ದಾರೆ.

  ಯುವ ಸಂಗೀತ ನಿರ್ದೇಶಕ ಎ.ಟಿ. ರವೀಶ್ ಅವರು ಈಗಾಗಲೇ ಎಲ್ಲ ಹಾಡುಗಳನ್ನು ಸಿದ್ಧ ಮಾಡಿಕೊಂಡಿದ್ದಾರೆ. ಅದರಲ್ಲಿ ಒಂದು ಹಾಡು ಚಿತ್ರಿಕರಣವೂ ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಆಗಿದೆ. ಪ್ರದೀಪ್ ಗಾಂಧಿ ಅವರು ಈ ಚಿತ್ರದ ಛಾಯಾಗ್ರಾಹಕರು. (ಒನ್ಇಂಡಿಯಾ ಕನ್ನಡ)

  English summary
  Actress Ramanithu Chaudhary playing a lady lead role in Muttina Male. AT Ravish is Ravi Sharma from this film is trying his luck as music director. He has six songs for this film. Mohan is the cameraman of 'Muttina Male'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X