»   » ಗಾಸಿಪ್ ಗಳಿಗೆ ತೆರೆ ಎಳೆದ ನಟ 'ಸತೀಶ್ ನೀನಾಸಂ'

ಗಾಸಿಪ್ ಗಳಿಗೆ ತೆರೆ ಎಳೆದ ನಟ 'ಸತೀಶ್ ನೀನಾಸಂ'

Posted By:
Subscribe to Filmibeat Kannada

ಸತೀಶ್ ನೀನಾಸಂ.... ವಿಭಿನ್ನ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ನಟ. 'ಟೈಗರ್ ಗಲ್ಲಿ' ಚಿತ್ರದ ನಂತರ 'ಗೋದ್ರಾ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ನಟ. ಇತ್ತೀಚೆಗಷ್ಟೇ ಸತೀಶ್ ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ 'ನಾಟಿ ಫ್ಯಾಕ್ಟರಿ ಟೀಂ' ಜೊತೆಯಲ್ಲಿ 'ರಾಮನು ಕಾಡಿಗೆ ಹೋದನು' ಅನ್ನೋ ಟೈಟಲ್ ನಲ್ಲಿ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು.

ಇನ್ನೇನು ಈ ಸಿನಿಮಾ ಸೆಟ್ಟೇರುತ್ತೆ ಅನ್ನೋ ಸಮಯದಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಕಿರಿಕ್ ಆಗಿ ಸಿನಿಮಾ ನಿಂತು ಹೋಗಿದೆ ಅನ್ನೋ ಗಾಸಿಪ್ ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಹರಿದಾಡೋದಕ್ಕೆ ಶುರುವಾಗಿದೆ.

 ramanu kaadige hodanu film has not stopped

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸತೀಶ್ ನೀನಾಸಂ "ಗೋದ್ರಾ ಹಾಡುಗಳ ಚಿತ್ರೀಕರಣ ಬಾಕಿ ಇದೆ. ಅಯೋಗ್ಯ ಚಿತ್ರೀಕರಣ ಶುರುವಾಗಿದೆ. ಜನವರಿಯಿಂದ ತಮಿಳು ಚಿತ್ರ, ಏಪ್ರಿಲ್ ನಲ್ಲಿ ಗಣೇಶ್ ಮೆಡಿಕಲ್ಸ್. ಹಾಗಾಗಿ ಗಡ್ಡದ ಕಂಟಿನ್ಯೂಟಿ ಮಾಡೋದು ಕಷ್ಟ ಇದರಿಂದ 'ರಾಮನು ಕಾಡಿಗೆ ಹೋದನು' ಆರು ತಿಂಗಳ ಕಾಲ ಮುಂದೂಡಿದ್ದೇವೆ ಅಷ್ಟೇ ಅನಗತ್ಯ ಗೊಂದಲಗಳು ಸೃಷ್ಟಿ ಮಾಡಬೇಡಿ" ಎಂದಿದ್ದಾರೆ.

ಮತ್ತೊಂದು ಕಡೆ ಬೆಂಕಿ ಇಲ್ಲದೆ ಹೊಗೆ ಬರೋದಿಲ್ಲ ಸುಮ್ಮನೆ ಯಾಕೆ ಗಾಸಿಪ್ ಆಗುತ್ತೆ ಅನ್ನೋ ಮಾತುಗಳು ಕೂಡ ಕೇಳಿ ಬರ್ತಿವೆ. ಒಟ್ಟಾರೆ 'ನಾಟಿ ಫ್ಯಾಕ್ಟರಿ ಟೀಂ' ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ಕೊಡದೆ ಸೈಲೆಂಟ್ ಆಗಿ ಇದ್ದಾರೆ. ವರ್ಷಗಳು ಕಳೆಯಲೇ ಬೇಕು ಸಿನಿಮಾ ಕೂಡ ರಿಲೀಸ್ ಆಗಲೇಬೇಕು ಸಮಯ ಎಲ್ಲದಕ್ಕೂ ಉತ್ತರ ನೀಡಲಿ ಅನ್ನೋ ಸತೀಶ್ ಮಾತಿನ ಮೇಲೆ ನಂಬಿಕೆ ಇಟ್ಟು ಸುಮ್ಮನಿದ್ದಾರೆ ಅಭಿಮಾನಿಗಳು.

English summary
'Ramanu Kadige Hodanu' to start after six months says Kannada Actor Sathish Ninasam.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada