twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಕೃಪೆ: ಮತ್ತೆ ರಾಮಾಯಣ, ಮಹಾಭಾರತ

    |

    ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ, ಮಹಾಭಾರತ ಧಾರವಾಹಿಗಳು ಹೆಚ್ಚು ಜನಕ್ಕೆ ನೆನಪೇ ಇದ್ದಂತಿಲ್ಲ.

    ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಈ ಎರಡು ಧಾರವಾಹಿಗಳು ಕೋಟ್ಯಂತರ ಜನರ ಮನಸೋರೆಗೊಳಿಸಿದ್ದವು. ಟಿಆರ್‌ಪಿ ಲೆಕ್ಕಾಚಾರ ಆ ಕಾಲದಲ್ಲಿ ಇದ್ದಿದ್ದರೆ ಇವುಗಳು ಟಾಪ್ ಧಾರವಾಹಿಗಳು ಆಗಿರುತ್ತಿದ್ದವು.

    ಕೊರೊನಾ ಕೃಪೆಯಿಂದ ಈಗ ಮತ್ತೆ ಗತವೈಭವ ಮತ್ತೆ ತಿರುಗಿ ಬರುತ್ತಿದೆ. ರಾಮಾಯಣ, ಮಹಾಭಾರತ ಧಾರವಾಹಿಗಳು ಮತ್ತೆ ಪ್ರಸಾರವಾಗಲಿವೆ.

    Ramayan Mahabarath Serial Re Telicasting On Dordarshan

    ಹೌದು, ದೂರದರ್ಶನದಲ್ಲಿ ರಾಮಾಯಣ ಮತ್ತು ಮಹಾಭಾರತ ಧಾರವಾಹಿಗಳು ಮತ್ತೊಮ್ಮೆ ಪ್ರಸಾರವಾಗಲಿವೆ. 1990, 2000 ದಶಕದಲ್ಲಿ ಈ ಧಾರವಾಹಿಗಳನ್ನು ನೋಡಿದವರು, ತಮ್ಮ ಮಕ್ಕಳಿಗೆ ಈಗ ಮತ್ತೊಮ್ಮೆ ಈ ಧಾರವಾಹಿಗಳನ್ನು ಈಗ ತೋರಿಸಬಹುದಾಗಿದೆ.

    ಪ್ರಸಾರ ಭಾರತಿಯ ಕಾರ್ಯನಿರವಾಹಕ ಶಶಿ ಶೇಖರ್ ಇಂದು ಟ್ವೀಟ್ ಮಾಡಿದ್ದು, ರಾಮಾಯಣ ಮತ್ತು ಮಹಾಭಾರತವನ್ನು ಮತ್ತೆ ಪ್ರಸಾರ ಮಾಡುವುದಾಗಿ ಹೇಳಿದ್ದಾರೆ. ಯಾವ ಸಮಯಕ್ಕೆ ಪ್ರಸಾರ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

    ರಾಮಾಯಣ ಮತ್ತು ಮಹಾಭಾರತ ಧಾರವಾಹಿಗಳು 2000 ಆರಂಭದಲ್ಲಿ ಬಹು ಖ್ಯಾತ ಧಾರವಾಹಿಗಳಾಗಿದ್ದವು. ಕುಟುಂಬವೆಲ್ಲಾ ಒಟ್ಟಿಗೆ ಕುಳಿತು ಈ ಧಾರವಾಹಿಗಳನ್ನು ನೋಡುತ್ತಿದ್ದರು.

    English summary
    Ramayan and Mahabharath serials will be telecasting on Durdarshan soon on coronavirus scare days.
    Thursday, March 26, 2020, 21:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X