twitter
    For Quick Alerts
    ALLOW NOTIFICATIONS  
    For Daily Alerts

    ಮರು ಪ್ರಸಾರದಲ್ಲೂ ದಾಖಲೆಗಳು ಸೃಷ್ಟಿಸಿದ ರಾಮಾಯಣ

    |

    ಮೂರು ದಶಕದ ಹಿಂದೆ ಪ್ರಸಾರವಾಗಿ ದಾಖಲೆಗಳ ಮೇಲೆ ದಾಖಲೆಗಳು ಬರೆದಿದ್ದ 'ರಾಮಾಯಣ' ಧಾರವಾಹಿ ಲಾಕ್ ಡೌನ್ ಸಂದರ್ಭದಲ್ಲಿ ಮರು ಪ್ರಸಾರವಾಗುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಷಯವೇ.

    ಮುವತ್ತಮೂರು ವರ್ಷಗಳ ಹಿಂದೆ ರಾಮಾಯಣ ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರವಾಗುವಾಗ ಟಿವಿಗೆ, ತಿಲಕವಿಟ್ಟು, ಪೂಜೆಗಳನ್ನು ಮಾಡಿ ಜನ ಆ ಧಾರಾವಾಹಿ ನೋಡುತ್ತಿದ್ದರಂತೆ. ರಾಮಾಯಣ ಪ್ರಸಾರ ಆಗುವ ಸಮಯದಲ್ಲಿ ಬೇರೆ ಇಡೀಯ ಭಾರತವೇ ಸ್ಥಬ್ಧವಾಗುತ್ತಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಹಿರಿಯರು.

    ಈಗ ಕೊರೊನಾ ದಿಂದಾಗಿ ಭಾರತ 21 ದಿನ ಲಾಕ್‌ಡೌನ್ ಆಗಿರುವ ಕಾರಣ ದೂರದರ್ಶನವು ರಾಮಾಯಣವನ್ನು ಪುನಃ ಪ್ರಸಾರ ಮಾಡುತ್ತಿದ್ದು, ಪುನರ್‌ ಪ್ರಸಾರದಲ್ಲೂ ಸಹ ರಾಮಾಯಣ ದಾಖಲೆಗಳನ್ನೆಲ್ಲಾ ಪುಡಿಗಟ್ಟಿ ಹೊಸ ದಾಖಲೆಗಳನ್ನು ಬರೆದಿದೆ.

    ನಾಲ್ಕೇ ದಿನದಲ್ಲಿ 17 ಕೋಟಿಗೂ ಹೆಚ್ಚು ವೀಕ್ಷಕರು

    ನಾಲ್ಕೇ ದಿನದಲ್ಲಿ 17 ಕೋಟಿಗೂ ಹೆಚ್ಚು ವೀಕ್ಷಕರು

    ಮರುಪ್ರಸಾರವಾಗುತ್ತಿರುವ ರಾಮಾಯಣ ಪ್ರಸಾರವಾದ ನಾಲ್ಕೇ ದಿನದಲ್ಲಿ 17 ಕೋಟಿ ಜನರಿಂದ ವೀಕ್ಷಿಸಲ್ಪಟ್ಟಿದೆ. ಅತಿ ಹೆಚ್ಚು ಜನರಿಂದ ವೀಕ್ಷಣೆಗೆ ಒಳಗಾದ ಏಕೈಕ ಹಿಂದಿ ಧಾರವಾಹಿ ಇದೆಂಬ ದಾಖಲೆ ಬರೆದಿದೆ.

    ಬಾರ್ಕ್ ನೀಡಿರುವ ಮಾಹಿತಿ

    ಬಾರ್ಕ್ ನೀಡಿರುವ ಮಾಹಿತಿ

    ಬಾರ್ಕ್‌ (ಬಿಎಆರ್‌ಸಿ) ಈ ಮಾಹಿತಿ ಹೊರಗೆಡವಿದ್ದು, ಧಾರವಾಹಿ ಪ್ರಸಾರವಾಹಿ ಪ್ರಸಾರವಾದ ಮೊದಲ ದಿನದ ಮೊದಲ ಕಂತನ್ನೇ 3.40 ಕೋಟಿ ಮಂದಿ ವೀಕ್ಷಿಸಿದರಂತೆ. ಅದೇ ದಿನದ ಸಂಜೆಯ ಕಂತನ್ನು 4.50 ಕೋಟಿ ಮಂದಿ ವೀಕ್ಷಿಸಿದ್ದಾರೆ.

    ಒಂದೇ ದಿನ ಹತ್ತು ಕೋಟಿ ಮಂದಿ ವೀಕ್ಷಣೆ

    ಒಂದೇ ದಿನ ಹತ್ತು ಕೋಟಿ ಮಂದಿ ವೀಕ್ಷಣೆ

    ಕಳೆದ ಭಾನುವಾರ ಪ್ರಸಾರವಾದ ಎರಡು ಕಂತನ್ನು ಒಟ್ಟು ಸುಮಾರು 10 ಕೋಟಿ ಮಂದಿ ವೀಕ್ಷಿಸಿದ್ದಾರೆ. ಸುಮಾರು 5% ಟಿವಿ ವೀಕ್ಷಕರು ರಾಮಾಯಣ ಒಂದೇ ಧಾರವಾಹಿಯನ್ನು ಅಂದು ನೋಡಿದ್ದಾರಂತೆ.

    65 ಕೋಟಿ ವೀಕ್ಷಕರನ್ನು ಹೊಂದಿತ್ತು ಧಾರವಾಹಿ

    65 ಕೋಟಿ ವೀಕ್ಷಕರನ್ನು ಹೊಂದಿತ್ತು ಧಾರವಾಹಿ

    ರಮಾನಂದ ಸಾಗರ್ ಅವರ ನಿರ್ದೇಶನದ ರಾಮಾಯಣ ಧಾರಾವಾಹಿ ಮೂವತ್ತೆರಡು ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರತಿ ಭಾನುವಾರ ಒಂದು ಗಂಟೆ ಅವಧಿಯ ಕಂತಾಗಿ ಪ್ರಸಾರವಾಗುತ್ತಿತ್ತು. 55 ದೇಶಗಳಲ್ಲಿ65 ಕೋಟಿ ವೀಕ್ಷಕರನ್ನು ಅದು ಹೊಂದಿತ್ತು. ಪ್ರತಿ ಸಂಚಿಕೆಯಲ್ಲೂ ದೂರದರ್ಶನ 40 ಲಕ್ಷ ಆದಾಯವನ್ನು ಆಗ ಗಳಿಸುತ್ತಿತ್ತಂತೆ.

    English summary
    TV Serial Ramayan re telecasting on Doordarshan and break records by attracting crores of viewers.
    Friday, April 3, 2020, 13:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X