For Quick Alerts
  ALLOW NOTIFICATIONS  
  For Daily Alerts

  ದಿಗ್ಗಜ ಶಂಕರ್ ನಾಗ್ ಅವರನ್ನು ನೆನಪಿಸಿಕೊಂಡ 'ರಾಮಾಯಣ'ದ ಸೀತೆ

  |

  ನಟನೆ ಮತ್ತು ನಿರ್ದೇಶನದ ಸಿನಿಮಾಗಳ ಮೂಲಕ ಜನಮಾನಸದಲ್ಲಿ ಅಜರಾಮರವಾಗಿ ಉಳಿದ ಮೇರು ಪ್ರತಿಭೆ ಶಂಕರ್ ನಾಗ್. ಇಂದಿಗೂ ಅವರ ಸಿನಿಮಾ ಕೃತಿಗಳ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಹೊಸತನ, ಆಧುನಿಕ ತಂತ್ರಜ್ಞಾನಗಳ ಬಗ್ಗೆ ಕನಸು ಕಂಡಿದ್ದ ಪ್ರತಿಭೆ ಅವರು.

  ನಿವಿ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಟ್ಟ ಚಂದನ್ ಶೆಟ್ಟಿ..! | Nivedhita Gowda | Chandan Shetty

  ಕಿರಿ ವಯಸ್ಸಿನಲ್ಲಿಯೇ ಡಾ. ರಾಜ್ ಕುಮಾರ್ ಅವರ ಸಿನಿಮಾ ನಿರ್ದೇಶಿಸಿದ್ದ ಶಂಕರ್ ನಾಗ್, ವಿಭಿನ್ನ ಸಿನಿಮಾಗಳನ್ನು ನೀಡಿದವರು. ಜತೆಗೆ ಅನೇಕ ಹೊಸ ಪ್ರತಿಭೆಗಳನ್ನು ಪರಿಚಯಿಸಿದವರು. ಶಂಕರ್ ನಾಗ್ ಅವರಿಂದಾಗಿ ಸಿನಿಮಾ ಬದುಕಿನಲ್ಲಿ ಹೆಸರು ಗಳಿಸಿದವರು ಅವರನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಅವರಲ್ಲಿ ಜನಪ್ರಿಯ ಧಾರಾವಾಹಿ 'ರಾಮಾಯಣ'ದ ಸೀತೆಯ ಪಾತ್ರದಿಂದ ಜನಮನ್ನಣೆ ಗಳಿಸಿದ ನಟಿ ದೀಪಿಕಾ ಚಿಖ್ಲಿಯಾ ಒಬ್ಬರು. ಮುಂದೆ ಓದಿ...

  ಶಂಕರ್ ನಾಗ್ ಕುರಿತು ಭಾವುಕ ಕತೆ ಹೇಳಿದ ಅರುಂಧತಿ ನಾಗ್ಶಂಕರ್ ನಾಗ್ ಕುರಿತು ಭಾವುಕ ಕತೆ ಹೇಳಿದ ಅರುಂಧತಿ ನಾಗ್

  ಕನ್ನಡದಲ್ಲಿ ಹಿಟ್

  ಕನ್ನಡದಲ್ಲಿ ಹಿಟ್

  ನಟಿ ದೀಪಿಕಾ ಚಿಖ್ಲಿಯಾ 'ರಾಮಾಯಣ' ಧಾರಾವಾಹಿಯ 'ಸೀತೆ' ಪಾತ್ರದಿಂದ ಖ್ಯಾತಿ ಗಳಿಸಿದವರು. ದೂರದರ್ಶನದಲ್ಲಿ 1987ರಲ್ಲಿ ಪ್ರಸಾರವಾದ ಧಾರಾವಾಹಿಯ ಮೂಲಕ ಅವರು ಸೀತೆಯಾಗಿಯೇ ಗುರುತಿಸಿಕೊಂಡವರು. ಅದರಾಚೆ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರೂ ಅವರಿಗೆ ಹಿಟ್ ನೀಡಿದ್ದು ಕನ್ನಡದ ಚಿತ್ರಗಳು.

  ಹೊಸ ಜೀವನ ಸಿನಿಮಾ

  ಹೊಸ ಜೀವನ ಸಿನಿಮಾ

  ಅಂಬರೀಷ್ ನಾಯಕರಾಗಿದ್ದ 'ಇಂದ್ರಜಿತ್' ಚಿತ್ರದ ಮೂಲಕ ದೀಪಿಕಾ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ ಅವರು ಶಂಕರ್ ನಾಗ್ ಜತೆ 1990ರಲ್ಲಿ 'ಹೊಸ ಜೀವನ' ಚಿತ್ರದಲ್ಲಿ ನಟಿಸಿದರು. ಆ ಚಿತ್ರದ ಹಾಡೊಂದನ್ನು ಹಂಚಿಕೊಂಡಿರುವ ಅವರು, ಶಂಕರ್ ನಾಗ್ ಅವರನ್ನು ನೆನಪಿಸಿಕೊಂಡಿದ್ದಾರೆ.

  'ಭಾರತದ ಕೋಗಿಲೆ'ಯ ಬಯೋಪಿಕ್‌ನಲ್ಲಿ 'ರಾಮಾಯಣ'ದ 'ಸೀತೆ''ಭಾರತದ ಕೋಗಿಲೆ'ಯ ಬಯೋಪಿಕ್‌ನಲ್ಲಿ 'ರಾಮಾಯಣ'ದ 'ಸೀತೆ'

  ನಾವು ಅನುಭವಿಸಿದ ನಷ್ಟ ದೊಡ್ಡದು

  ನಾವು ಅನುಭವಿಸಿದ ನಷ್ಟ ದೊಡ್ಡದು

  'ಬಹು ದೊಡ್ಡ ಯಶಸ್ಸು. 'ಹೊಸ ಜೀವನ' ಚಿತ್ರದ ಹಾಡು ಇದು. ಚಿತ್ರೀಕರಣದ ಕೊನೆಯ ಹಂತ ಮುಗಿದ ಬಳಿಕ ನನ್ನ ಸಹ ಕಲಾವಿದ ಅಪಘಾತದಲ್ಲಿ ಮೃತಪಟ್ಟರು. ಆ ಘಟನೆ ಬಳಿಕ ಉಂಟಾದ ಆಘಾತದಿಂದ ಹೊರಬರಲು ಬಹಳ ಸಮಯ ಬೇಕಾಯಿತು. ಆ ಚಿತ್ರ ಬಹು ದೊಡ್ಡ ಹಿಟ್ ಆಗಿದ್ದು ಇತಿಹಾಸ. ಆದರೆ ನಾವು ಅನುಭವಿಸಿದ ನಷ್ಟ ಎಷ್ಟು ದೊಡ್ಡದು. ಸಹ ನಟ ಶಂಕರ್ ನಾಗ್... ಎಂದು ದೀಪಿಕಾ ಬರೆದುಕೊಂಡಿದ್ದಾರೆ.

  ಎರಡೇ ತಿಂಗಳಲ್ಲಿ ನಡೆದ ಘಟನೆ

  ಎರಡೇ ತಿಂಗಳಲ್ಲಿ ನಡೆದ ಘಟನೆ

  'ಲಾಲಿ ಲಾಲಿ ಜೋ ಜೋ ನನ್ನ ತಾಳಿಯ ಬಂಗಾರ ಜೋ' ಹಾಡನ್ನು ಹಂಚಿಕೊಂಡು ಶಂಕರ್ ನಾಗ್ ಅವರನ್ನು ದೀಪಿಕಾ ಸ್ಮರಿಸಿಕೊಂಡಿದ್ದಾರೆ. ಜುಲೈ 26ರಂದು ಈ ಚಿತ್ರ ಬಿಡುಗಡೆಯಾಗಿತ್ತು. ಆದರೆ ಸೆ. 30ರಂದು ನಡೆದ ಅಪಘಾತದಲ್ಲಿ ಶಂಕರ್ ನಾಗ್ ಮೃತಪಟ್ಟಿದ್ದರು.

  'ರಾಮಾಯಣ' ತಂಡ ಹೇಗಿತ್ತು?: ಅಪರೂಪದ ಫೋಟೊದ ನೆನಪು ಹಂಚಿಕೊಂಡ 'ಸೀತಾ''ರಾಮಾಯಣ' ತಂಡ ಹೇಗಿತ್ತು?: ಅಪರೂಪದ ಫೋಟೊದ ನೆನಪು ಹಂಚಿಕೊಂಡ 'ಸೀತಾ'

  English summary
  Ramayan serial Sita fame actress Dipika Chikhlia remembered Kannada legend Shankar Nag on Instagram post.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X