»   » ಬಾವ ಬಾಮೈದ ಚಿತ್ರವ ತೊಡೆಗಳ ಮೇಲೆ ನಿಲ್ಲಿಸಿಕೊಂಡಿರುವ ರಂಭಾ, ನ್ಯಾಷನಲ್‌ ಅಟೆನ್ಷನ್‌ಗೋಸ್ಕರ ಬಾಲಿವುಡ್‌ ಹಾದಿ ಹಿಡಿದಿದ್ದಾರಂತೆ. ರಿಟೈರ್‌ ಆಗೋ ಕಾಲ ಬಂತಲ್ವಾ ಅಂದ್ರೆ ಏನಂತಾರೆ ಗೊತ್ತಾ...?

ಬಾವ ಬಾಮೈದ ಚಿತ್ರವ ತೊಡೆಗಳ ಮೇಲೆ ನಿಲ್ಲಿಸಿಕೊಂಡಿರುವ ರಂಭಾ, ನ್ಯಾಷನಲ್‌ ಅಟೆನ್ಷನ್‌ಗೋಸ್ಕರ ಬಾಲಿವುಡ್‌ ಹಾದಿ ಹಿಡಿದಿದ್ದಾರಂತೆ. ರಿಟೈರ್‌ ಆಗೋ ಕಾಲ ಬಂತಲ್ವಾ ಅಂದ್ರೆ ಏನಂತಾರೆ ಗೊತ್ತಾ...?

Subscribe to Filmibeat Kannada

*ಎ.ಸ್ವಾಮಿ

ಸರಿ ಸುಮಾರು ದಶಕದ ಹಿಂದೆ. ಕೆಮೆರಾ ಕಣ್ಣು ಬಿಡಿಸಿಡುತ್ತಿತ್ತು- ಬಾಳೆದಿಂಡಿನಂಥಾ ಕಾಲು. ಸದಾ ತೆರೆದ ಹೊಕ್ಕಳು. ಇವತ್ತಿಗೂ ಇದು ಪುನರಾವರ್ತನೆಯಾಗುತ್ತಿದೆ. ಆದರೆ ಬಾಳೆದಿಂಡಿನಂಥಾ ಕಾಲುಗಳ ಗಾತ್ರ ತೀರಾ ಜಾಸ್ತಿಯಾಯಿತೇನೋ ಅನ್ನುವ ಭಾವ. ಆದರೂ ಕಾಲುಗಳು ಕಿಲಕಿಲ ಕುಣಿಯುತ್ತವೆ; ಶಿವರಾಜ್‌ ಸಮಕ್ಕೂ. ‘...ಬೋರೋ ಬೋರು... ಪ್ರಿಯನ ಸನ್ನಿಧಿ ಕ್ಷೇಮವೂ...’ ದಢೂತಿ ದೇಹವೂ ಸಪೂರವೇನೋ ಎಂಬಂತೆ ನುಲಿಯುತ್ತದೆ. ಆದರೆ ಈ ವೈಯಾರದ ರಂಭೆ ತವರು ಆಗುಂಬೆಯಲ್ಲ. ಅಲ್ಲಿ ಇಲ್ಲಿ ಸುತ್ತಿಬಂದು, ಎಲ್ಲಿಗೂ ಸಲ್ಲುವೆನೆಂಬ ಛಲವ ಈಗಲೂ ಮೆರೆಯುವ ರಂಭಾ ರಿಟೈರ್‌ ಆಗುವ ದಿನಗಳು ಹತ್ತಿರಾಗುತ್ತಿವೆ. ಆದರೆ ಅದನ್ನು ಈಕೆ ಸುತಾರಾಂ ಒಪ್ಪುವುದಿಲ್ಲ.

ಪ್ರಭುದೇವ ಜೊತೆ ಹೆಜ್ಜೆ ಹಾಕಿ ತಮಿಳು ತೆರೆಗೆ ಕಾಲಿಟ್ಟ ರಂಭಾ, ತನ್ನ ಬೊಡ್ಡೆ ಮೂಗೆಂಬ ಡ್ರಾಬ್ಯಾಕನ್ನು ಮುಚ್ಚಿಹಾಕಿದ್ದೇ ಬಿಚ್ಚುವುದರ ಮೂಲಕ. ‘ಸರ್ವರ್‌ ಸೋಮಣ್ಣ’ದಲ್ಲಿ ಆಕೆ ಇನ್ನೂ ಫ್ರೆಷ್‌. ಈಗಲೂ ‘ಯವ್ವಿ ಯವ್ವಿ ಯವ್ವಿ... ಎದೆಯಾಗೆ ಕಂಸಾಳೆ ಕೇಳತೈತಾ...’ ಅಂತ ಬಳುಕುವುದರಲ್ಲೂ ಹೊಸತನ ತುಂಬುವ ಈಕೆಯ ತುಡಿತ ಬಿಚ್ಚಿಕೊಳ್ಳುತ್ತದೆ. ಟಾಲಿವುಡ್‌, ಬಾಲಿವುಡ್‌, ಸ್ಯಾಂಡಲ್‌ವುಡ್‌ ಎಲ್ಲದಕ್ಕೂ ಸೈ ಅನ್ನುವ ವೈಯಾರದ ರಂಭೆ ನಮ್ಮ ಜೊತೆ ಮಾತಾಡಿದ್ದು ಹೀಗೆ...

ಹೊಸಬರು ಬಂದರು ದಾರಿಬಿಡಿ ಅಂದರೆ ನೀವೇನಂತೀರಿ?
ಕನ್ನಡದಲ್ಲೂ ಹೊಸ ನಟಿಯರು ಬರ್ತಿದಾರೆ. ತಮಿಳಿನಲ್ಲಿ ಸಿಮ್ರಾನ್‌, ಜ್ಯೋತಿಕಾ, ರೀಮಾ ಬಂದರು. ಹಾಗಂತ ನನ್ನ ಜೊತೆಜೊತೆಗೇ ನಟಿಸುತ್ತಿದ್ದ ರೋಜಾ, ಮೀನಾ, ಸೌಂದರ್ಯ, ನಗ್ಮಾ, ಖುಷ್ಬೂ ರಿಟೈಡ್ಟ್‌ ಆಗಿದ್ದಾರಾ? ನಾನೂ ಹಾಗೇನೇ. ಹೊಸಬರು ಬಂದರೂ ಅಂತ ನಾನು ಮನೆ ಸೇರೋ ಪರಿಸ್ಥಿತಿ ಏನೂ ಇಲ್ಲ.

ಫೆವರೇಟ್‌ ಹೀರೋ ಯಾರು?
ರಾಜೀವ್‌ ಗಾಂಧಿ. ನಾನು ಅವರನ್ನ ನೋಡೇ ಇಲ್ಲ !

ನಿಮ್ಮ ಮದುವೆ ಯಾವಾಗ?
ಇನ್ನೂ ಗೊತ್ತಿಲ್ಲ. ಮದುವೆ ಆಗೋದಂತೂ ಗ್ಯಾರಂಟಿ. ಇಟ್ಸ್‌ ಎ ಸೀರಿಯಸ್‌ ಮ್ಯಾಟರ್‌.


ನಿಮ್ಮ ಗಂಡ ಹೇಗಿರಬೇಕು?
ನನ್ನನ್ನ ಅರ್ಥ ಮಾಡಿಕೋಬೇಕು. ಸಿನಿಮಾ ಫೀಲ್ಡ್‌ನಲ್ಲಿ ಇರಬಾರದು.

ಯಾಕೆ?
ಗಂಡ-ಹೆಂಡತಿ ಇಬ್ಬರೂ ಒಂದೇ ಫೀಲ್ಡ್‌ನಲ್ಲಿ ಇದ್ದರೆ ಕಿರಿಕಿರಿ ಇದ್ದೇ ಇರುತ್ತೆ. ನನ್ನ ಅಪ್ಪ- ಅಮ್ಮ ಕಿತ್ತಾಡಲ್ಲ. ಬೆಳಗ್ಗೆ ಮದುವೆ ಆಗಿ ಸಂಜೆ ಡೈವೋರ್ಸ್‌ ಮಾಡೋ ಜಾಯಮಾನ ನನ್ನದಲ್ಲ. ನನ್ನದೇ ಆದ ಸಂಸಾರ. ಮಕ್ಕಳು. ಎಷ್ಟು ಚೆನ್ನ. (ರಂಭಾ ಕಣ್ಣು ಆಕಾಶದತ್ತ..)

ಹಿಂದಿ ನಟ-ನಟಿಯರ ಬಗ್ಗೆ ಏನಂತೀರಿ?
ಏನು ಹೇಳೋದು...? ಅವರು ಹಿಂದಿನಲ್ಲಿ ಮಾತಾಡ್ತಾರೆ, ಕನ್ನಡದೋರು ಕನ್ನಡದಲ್ಲಿ ಮಾತಾಡ್ತಾರೆ... ಹ್ಹಿಹ್ಹಿಹ್ಹಿ...

ಸಿನಿಮಾ ಸೆಟ್‌ನಲ್ಲಿ ನೀವು ತುಂಬಾ ಸೀರಿಯಸ್ಸಂತೆ?
ನನಗೆ ಗೊತ್ತಿಲ್ಲ. ಸಂದರ್ಭಕ್ಕೆ ತಕ್ಕಂತೆ ಇರ್ತೀನಿ. ಹಿಂದಿ ಸಿನಿಮಾ ಹೀರೋಗಳು ಸಿಕ್ಕಾಪಟ್ಟೆ ರ್ಯಾಗ್‌ ಮಾಡ್ತಾರೆ. ಅಲ್ಲಿ ಏನೋ ಪರಕೀಯ ಪ್ರಜ್ಞೆ ಕಾಡುತ್ತೆ. ನಮ್ಮ ಸಿನಿಮಾಗಳಲ್ಲಿ ಹಾಗಲ್ಲಪ್ಪಾ...ನನಗೆ ಸ್ಕೂಲಿನ ದಿನಗಳು ನೆನಪಿಗೆ ಬರ್ತವೆ. ಇಷ್ಟು ದೊಡ್ಡವಳಾದರೂ ನನ್ನ ಹೃದಯ ಮಕ್ಕಳ ಥರಾ. ಪೆಯಿಂಟಿಂಗ್‌ನಲ್ಲಿ ಪ್ರೆೃಸ್‌ ತಗೊಂಡು ನಕ್ಕಿದ್ದು ಮನದಲ್ಲಿ ಈಗಲೂ ಹಸುರಾಗಿದೆ.

ಹಾಗಾದರೆ, ಹಿಂದಿ ಸಿನಿಮಾ ಹಿಂದೆ ಯಾಕೆ ಓಡ್ತಿದೀರಿ?
ನನಗೆ ನ್ಯಾಷನಲ್‌ ಅಟೆನ್ಷನ್‌ ಕೊಡಬೇಕು ಅನ್ನಿಸ್ತು !!

ನಿಮಗೆ ಯಾವ ರೀತಿ ಬಟ್ಟೆ ಇಷ್ಟ?
ತುಂಡು ಬಟ್ಟೆ. ಮಿನೀಸ್‌ ಆರ್‌ ಓಕೆ. ಜನ ಕೂಡ ನನ್ನ ‘ಹಿಪ್‌’ ಆಗಿ ನೋಡೋಕೆ ಇಷ್ಟ ಪಡ್ತಾರೆ; ಟೈಟ್‌ ಬಟ್ಟೆಯಲ್ಲಿ (ನಗು...) !

ಇದೀಗ ಬಂದ ಸುದ್ದಿಯ ಪ್ರಕಾರ ರಂಭಾ ತಮ್ಮ ಸೋದರ ವಾಸು ಜೊತೆ ಸೇರಿ ತಮಿಳು ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ಅದರಲ್ಲಿ ಪೂರ್ತಿ ತೊಡಗಿಸಿಕೊಳ್ಳುವ ಕಾರಣ ಸದ್ಯಕ್ಕೆ ಅವರ ಕಾಲ್‌ಷೀಟ್‌ ಯಾರಿಗೂ ಲಭ್ಯವಿಲ್ಲ. ನಾಯಕಿಯಾಗಿ ರಿಟೈರ್ಡ್‌ ಆದರೆ ಮುಂದೇನು ಅಂತ ಯಾರೂ ಅನ್ನುವ ಹಾಗಿಲ್ಲ. ಈಗಾಗಲೇ ರಂಭಾ ಹೊಸ ಇನ್ನಿಂಗ್ಸ್‌, ಅದೂ ನಿರ್ಮಾಪಕಿಯಾಗಿ ಶುರುವಾಗಿದೆ. ಆಲ್‌ ದಿ ಬೆಸ್ಟ್‌ ರಂಭಾ.

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada