Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಲೆಕ್ಷನ್ ನಲ್ಲಿ ದಾಖಲೆ ಬರೆದ 'Rambo' ಶರಣ್

ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ಶರಣ್ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಒಂದೆರೆಡು ಸಿನಿಮಾಗಳಲ್ಲಿ ಆವರೇಜ್ ಹಿಟ್ ನೀಡಿದ್ದ ಶರಣ್ 'Rambo2' ಸಿನಿಮಾ ಮೂಲಕ ತಮ್ಮ ವೃತ್ತಿ ಜೀವನದಲ್ಲೇ ಹೊಸ ಇತಿಹಾಸವನ್ನು ಬರೆದುಕೊಂಡಿದ್ದಾರೆ.
'ಅಧ್ಯಕ್ಷ' ಸಿನಿಮಾ ನೋಡಿದ ಅಭಿಮಾನಿಗಳು ಅದೇ ರೀತಿ ಚಿತ್ರ ಮಾಡಿ ಎಂದು ಮನವಿ ಮಾಡಿದ್ದರು. ಅದೇ ಸಾಲಿಗೆ ಸೇರುವಂತ 'Rambo2' ಸಿನಿಮಾವನ್ನು ಅಭಿಮಾನಿಗಳಿಗೆ ನೀಡುವುದರ ಜೊತೆಯಲ್ಲಿ ಬಾಕ್ಸ್ ಆಫೀಸ್ ನಲ್ಲೂ ಸದ್ದು ಮಾಡುತ್ತಿದ್ದಾರೆ ನಟ ಶರಣ್.
'Rambo2' ಸಿನಿಮಾವನ್ನ ವಿತರಣೆ ಮಾಡಿರುವ ನಿರ್ಮಾಪಕ ಹಾಗೂ ವಿತರಕ ಜಯಣ್ಣ ಚಿತ್ರದ ಕಲೆಕ್ಷನ್ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ಹಾಗಾದರೆ ಐದು ವಾರಕ್ಕೆ ಶರಣ್ ಅಭಿನಯದ 'Rambo2' ಚಿತ್ರ ಗಳಿಸಿದ್ದು ಎಷ್ಟು? ಇನ್ನು ಎಷ್ಟು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಆಗುತ್ತಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ .

ವೃತ್ತಿ ಜೀವನದಲ್ಲಿ ಹೊಸ ದಾಖಲೆ
ನಟ ಶರಣ್ ತಮ್ಮ ವೃತ್ತಿ ಜೀವನದಲ್ಲೇ ಹೊಸ ಇತಿಹಾಸವನ್ನು ತಾವೇ ಬರೆದುಕೊಂಡಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಆಗದಂತ ದಾಖಲೆ ಮೊತ್ತವನ್ನು ಶರಣ್ ಅಭಿನಯದ Rambo2 ಚಿತ್ರ ಗಳಿಸಿದೆ.

25ದಿನಕ್ಕೆ Rambo2 ಗಳಿಸಿದ್ದು 12ಕೋಟಿ
ವಿತರಕ ಹಾಗೂ ನಿರ್ಮಾಪಕ ಜಯಣ್ಣ ಅವರ ಅಧಿಕೃತ ಮಾಹಿತಿಯ ಪ್ರಕಾರ Rambo2 ಸಿನಿಮಾ 25 ದಿನಗಳಲ್ಲಿ 12 ಕೋಟಿಯಷ್ಟು ಗಳಿಕೆ ಮಾಡಿದೆ. ಅದಷ್ಟೇ ಅಲ್ಲದೆ ಚಿತ್ರ ಇನ್ನೂ ಉತ್ತಮ ಪ್ರದರ್ಶನ ಕಾಣುತ್ತಿದೆ.

25 ದಿನದ ನಂತರವೂ ಭರ್ಜರಿ ರೆಸ್ಪಾನ್ಸ್
'Rambo2' ಸಿನಿಮಾ ಬಿಡುಗಡೆ ಆಗಿ 25 ದಿನಗಳು ಕಳೆದಿವೆ. ಆದರೆ ಇಂದಿಗೂ ಪ್ರೇಕ್ಷಕರು ಚಿತ್ರ ನೋಡಲು ಥಿಯೇಟರ್ ನತ್ತ ಬರುತ್ತಿದ್ದಾರೆ. ವಿಶೇಷ ಎಂದರೆ 25 ದಿನಗಳು ಕಳೆದರು 125ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಪ್ರದರ್ಶನ ಆಗುತ್ತಿದೆ.

ಚಿತ್ರತಂಡದ ಪರಿಶ್ರಮ
'Rambo'2 ತಂತ್ರಜ್ಞರೇ ಸೇರಿ ನಿರ್ಮಾಣ ಮಾಡಿದ ಸಿನಿಮಾ. ಕ್ವಾಲಿಟಿ ಹಾಗೂ ಕಂಟೆಂಟ್ ನಲ್ಲಿ ಎಲ್ಲಿಯೂ ರಾಜಿ ಆಗದೇ ಚಿತ್ರವನ್ನ ನಿರ್ಮಾಣ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಸಿನಿಮಾ ಪ್ರೇಕ್ಷಕರನ್ನ ಮನಸ್ಸು ಮುಟ್ಟುವುದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಚಿತ್ರತಂಡ ಕೆಲಸ ಮಾಡಿತ್ತು. ಅದರ ಪ್ರತಿಫಲ ಇಂದು ಚಿತ್ರತಂಡಕ್ಕೆ ಸಿಕ್ಕಿದೆ.