50 ದಿನ ಪೂರೈಸಿದ ಶರಣ್ ಅಭಿನಯದ 'Rambo 2' ಸಿನಿಮಾ
ನಟ ಶರಣ್ ಅಭಿನಯದ 'Rambo 2' ಸಿನಿಮಾ ಇದೀಗ 50 ದಿನಗಳನ್ನು ಪೂರೈಸಿದೆ. ಈ ಮೂಲಕ ಈ ವರ್ಷದ ಮತ್ತೊಂದು ಹಿಟ್ ಸಿನಿಮಾವಾಗಿ 'Rambo 2' ಹೊರಹೊಮ್ಮಿದೆ.
ಮೇ 18 ರಂದು ಬಿಡುಗಡೆಯಾಗಿದ್ದ 'Rambo 2' ಸಿನಿಮಾ ಅರ್ಥ ಶತಕ ಬಾರಿಸಿದೆ. ಈ ವರ್ಷ ರಿಲೀಸ್ ಆದ ಸಿನಿಮಾಗಳ ಪೈಕಿ ಕೆಲವೇ ಕೆಲವು ಸಿನಿಮಾಗಳು ಮಾತ್ರ 50 ದಿನಗಳನ್ನು ಪೂರೈಸಿದೆ. ಆ ಚಿತ್ರಗಳ ಪೈಕಿ 'Rambo 2' ಕೂಡ ಒಂದಾಗಿದೆ. 'ಟಗರು', 'ಗುಳ್ಟು' ನಂತರ 'Rambo 2' ಈ ವರ್ಷದ ಹಿಟ್ ಸಿನಿಮಾ ಅಂತ ಕರೆಸಿಕೊಂಡಿದೆ.
ಇನ್ನು ಶರಣ್ ಅವರ 'Rambo' ಸಿನಿಮಾ ಕೂಡ ಸಕ್ಸಸ್ ಆಗಿತ್ತು. ಈಗ 'Rambo 2' ಸಿನಿಮಾ ಕೂಡ ಯಶಸ್ವಿಯಾಗಿದೆ. ವಿಶೇಷ ಅಂದರೆ, ಈ ಎರಡು ಚಿತ್ರಗಳ ನಂತರ 'Rambo' ಸೀರಿಸ್ ಸಿನಿಮಾಗಳು ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಅಂದಹಾಗೆ, 'Rambo 2' ಸಿನಿಮಾದಲ್ಲಿ ಶರಣ್ ಜೊತೆಗೆ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದರು. ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದರು. ತರುಣ್ ಸುಧೀರ್ ಸಿನಿಮಾದ ಕ್ರಿಯೇಟಿವ್ ಹೆಡ್ ಆಗಿದ್ದರು.
More from Filmibeat
English summary
Kannada actor Sharan's 'Rambo' kannada movie movie completes 50 days


Click it and Unblock the Notifications











