For Quick Alerts
  ALLOW NOTIFICATIONS  
  For Daily Alerts

  ಜೋರಾಗಿದೆ ಬಾಕ್ಸ್ ಆಫೀಸ್ ನಲ್ಲಿ Rambo 2 ರೇಸ್

  By Pavithra
  |

  Rambo 2 ಕಳೆದ ಶುಕ್ರವಾರವಷ್ಟೇ ಬಿಡುಗಡೆ ಆಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ಸಿನಿಮಾ. ತಂತ್ರಜ್ಞರೇ ಸೇರಿ ನಿರ್ಮಾಣ ಮಾಡಿ ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಂಡ Rambo 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯುವ ಸೂಚನೆ ನೀಡುತ್ತಿದೆ.

  ಹೌದು ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ಶರಣ್ ಚಿತ್ರಕ್ಕೆ ಪ್ರೇಕ್ಷಕ ಮನಸೋತಿದ್ದಾರೆ. ಕಾಮಿಡಿ, ಎಂಟರ್ಟೈನ್ ಮೆಂಟ್, ಸೆಂಟಿಮೆಂಟ್ ಹೀಗೆ ಎಲ್ಲಾ ವಿಚಾರವೂ ಒಂದೇ ಚಿತ್ರದಲ್ಲಿ ಕೂಡಿಸಿಕೊಟ್ಟಿರುವ ನಿರ್ದೇಶಕ ಅನಿಲ್ ಕುಮಾರ್ ಹಾಗೂ ತರುಣ್ ಸುಧೀರ್ ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ.

  'Rambo 2' ಸಿನಿಮಾ ಕಾಶೀನಾಥ್ ಅವರಿಗೆ ಸಮರ್ಪಣೆ'Rambo 2' ಸಿನಿಮಾ ಕಾಶೀನಾಥ್ ಅವರಿಗೆ ಸಮರ್ಪಣೆ

  ಬಿಡುಗಡೆ ಆದ ಒಂದೇ ವಾರದಲ್ಲಿ Rambo 2 ಸಿನಿಮಾ ಸುಮಾರು 7.25 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಟ್ರೇಲರ್ ಬಿಡುಗಡೆ ಮಾಡದೇ ಅಬ್ಬರದ ಪ್ರಚಾರವಿಲ್ಲದೆ ಉತ್ತಮ ಸಿನಿಮಾವನ್ನು ಮಾತ್ರ ಪ್ರೇಕ್ಷಕರಿಗೆ ನೀಡುವ ಮೂಲಕ ತರುಣ್ ಮತ್ತು ತಂಡ ಮತ್ತೊಂದು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ.

  ಶರಣ್, ಚಿಕ್ಕಣ್ಣ, ಆಶಿಕಾ ರಂಗನಾಥ್ ಸೇರಿದಂತೆ ರವಿಶಂಕರ್ ಹಾಗೂ ಸಾಧುಕೋಕಿಲ ಅಭಿನಯಕ್ಕೆ ಪ್ರೇಕ್ಷಕರು ಮಾರು ಹೋಗಿದ್ದಾರೆ. ಚಿತ್ರದಲ್ಲಿ ನಿರೀಕ್ಷೆ ಮಾಡದಂತದ ಸಾಕಷ್ಟು ಕುತೂಹಲಕಾರಿ ಅಂಶಗಳನ್ನಿಟ್ಟಿರುವುದು ಸಿನಿಮಾಗೆ ಫ್ಲಸ್ ಪಾಯಿಂಟ್ ಆಗಿದೆ. ಪ್ರತಿ ನಿತ್ಯ ಚಿತ್ರ ನೋಡಲು ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಒಮ್ಮೆ ನೋಡಿದವರು ಮತ್ತೊಮ್ಮೆ ಸಿನಿಮಾ ನೋಡಲು ಬರುತ್ತಿದ್ದಾರೆ ಎನಮ್ನುವುದು ಖುಷಿ ವಿಚಾರ.

  English summary
  Rambo2 kannada film has grossed over Rs 7.25 crore in a week. Sharan has acted in Rambo 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X