For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್ ರೋಣ' ಟ್ರೈಲರ್ ರಿಲೀಸ್ ಮಾಡೋರು ಯಾರು? ಇಂಗ್ಲಿಷ್ ಟ್ರೈಲರ್‌ ಬಗ್ಗೆನೇ ಡೌಟು!

  |

  ನಾಳೆ ( ಜೂನ್ 23)ಯಿಂದ 'ವಿಕ್ರಾಂತ್ ರೋಣ' ಸಿನಿಮಾದ್ದೇ ಹವಾ. ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಅಧಿಕೃತ ಪ್ರಚಾರ ನಾಳೆಯಿಂದ ಆರಂಭ ಆದಂತೆ. ಈಗಾಗಲೇ ಟ್ರೈಲರ್‌ಗೂ ಮುನ್ನವೇ ಸ್ಯಾಂಡಲ್‌ವುಡ್‌ನ ದಿಗ್ಗಜರೆಲ್ಲ ಒಟ್ಟಿಗೆ ಸೇರಿ 'ವಿಕ್ರಾಂತ್ ರೋಣ' ಸಿನಿಮಾಗೆ ಬೆಂಬಲ ಸೂಚಿಸಿದ್ದಾರೆ.

  ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಕ್ರೇಜಿಸ್ಟಾರ್‌ ರವಿಚಂದ್ರನ್, ಧನಂಜಯ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಸೃಜನ್ ಲೋಕೇಶ್ ಸೇರಿದಂತೆ ಗಣ್ಯರೆಲ್ಲರೂ 'ವಿಕ್ರಾಂತ್ ರೋಣ' ಸಿನಿಮಾಗಾಗಿ ಒಟ್ಟಿಗೆ ಸೇರಿದ್ದರು. ಆದರೆ, ಇದು ಪ್ಯಾನ್ ಇಂಡಿಯಾ ಸಿನಿಮಾ. ಆರು ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ ಬೇರೆ. ಈ ಕಾರಣಕ್ಕೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಮಾಲಿವುಡ್‌ನ ಸ್ಟಾರ್ ನಟರು 'ವಿಕ್ರಾಂತ್ ರೋಣ' ಟ್ರೈಲರ್ ಅನ್ನು ಡಿಜಿಟಲ್ ಮಾಧ್ಯಮದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

  ಧನುಷ್‌ರಿಂದ 'ವಿಕ್ರಾಂತ್ ರೋಣ' ಟ್ರೈಲರ್: ಅದಕ್ಕೂ ಮುನ್ನ ಕಿಚ್ಚ ಬಿಟ್ಟ ಝಲಕ್‌ ನೋಡಿದ್ದೀರಾ?ಧನುಷ್‌ರಿಂದ 'ವಿಕ್ರಾಂತ್ ರೋಣ' ಟ್ರೈಲರ್: ಅದಕ್ಕೂ ಮುನ್ನ ಕಿಚ್ಚ ಬಿಟ್ಟ ಝಲಕ್‌ ನೋಡಿದ್ದೀರಾ?

  ಟಾಲಿವುಡ್‌ನಲ್ಲಿ ರಾಮ್‌ಚರಣ್

  ಕಿಚ್ಚ ಸುದೀಪ್ ತೆಲುಗು ಮಂದಿಗೂ ಪರಿಚಯವಿದ್ದಾರೆ. 'ಈಗ', 'ಬಾಹುಬಲಿ' ಹಾಗೂ 'ರಕ್ತ ಚರಿತ'ದಂತಹ ಸಿನಿಮಾಗಳಿಂದ ಕಿಚ್ಚ ಪರಿಚಯ ಚೆನ್ನಾಗಿದೆ. ಹೀಗಾಗಿ 'ವಿಕ್ರಾಂತ್ ರೋಣ' ಸಿನಿಮಾ ತೆಲುಗಿನಲ್ಲೂ ಬಿಡುಗಡೆಯಾಗುತ್ತಿದೆ. ತೆಲುಗು ಟ್ರೈಲರ್ ಅನ್ನು ರಾಮ್‌ಚರಣ್ ರಿಲೀಸ್ ಮಾಡಲಿದ್ದಾರೆ.

  ತಮಿಳು-ಧನುಷ್, ಮಲಯಾಲಂ-ದುಲ್ಖರ್

  ತಮಿಳು-ಧನುಷ್, ಮಲಯಾಲಂ-ದುಲ್ಖರ್

  ಜೂನ್ 23ರಂದು ಸಂಜೆ 5.02 ಗಂಟೆಗೆ 'ವಿಕ್ರಾಂತ್ ರೋಣ' ತಮಿಳು ಅವರಣಿಕೆಯನ್ನು ಧನುಷ್ ಬಿಡುಗಡೆ ಮಾಡಲಿದ್ದಾರೆ. ಹಾಗೇ ಮಲಯಾಳಂ ಅವತರಣಿಕೆಯನ್ನು ದುಲ್ಖರ್ ಸಲ್ಮಾನ್ ರಿಲೀಸ್ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳು 'ವಿಕ್ರಾಂತ್ ರೋಣ' ಸಿನಿಮಾದ ಟ್ರೈಲರ್ ಅನ್ನು ಗ್ರ್ಯಾಂಡ್‌ ಆಗಿ ಬಿಡುಗಡೆ ಮಾಡುತ್ತಿದ್ದಾರೆ.

  ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್

  'ಕೆಜಿಎಫ್ 2', '777 ಚಾರ್ಲಿ' ಬಳಿಕ ಮತ್ತೊಂದು ಕನ್ನಡ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. 6 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಸಲ್ಮಾನ್ ಖಾನ್ ಟ್ರೈಲರ್ ರಿಲೀಸ್ ಮಾಡಲಿದ್ದಾರೆ. ನಾಳೆ ( ಜೂನ್ 23) ಸಂಜೆ 5.02 ಗಂಟೆಗೆ ಟ್ರೈಲರ್‌ 'ವಿಕ್ರಾಂತ್ ರೋಣ'ದ ಹಿಂದಿ ಟ್ರೈಲರ್ ರಿಲೀಸ್ ಆಗಲಿದೆ. ಸಲ್ಮಾನ್ ಖಾನ್ ಸೋಶಿಯಲ್ ಮೀಡಿಯಾಗಳಲ್ಲಿ ಈ ಟ್ರೈಲರ್ ರಿಲೀಸ್ ಆಗಲಿದೆ.

  ಇಂಗ್ಲಿಷ್ ಟ್ರೈಲರ್ ಯಾರಿಂದ?

  ಇಂಗ್ಲಿಷ್ ಟ್ರೈಲರ್ ಯಾರಿಂದ?

  'ವಿಕ್ರಾಂತ್ ರೋಣ' ಇಂಗ್ಲಿಷ್ ಭಾಷೆಯಲ್ಲೂ ಬಿಡುಗಡೆಯಾಗುತ್ತಿರೋದು ಮತ್ತೊಂದು ವಿಶೇಷ. ಕನ್ನಡದಲ್ಲಿ ಟ್ರೈಲರ್‌ ರಿಲೀಸ್ ದಿಗ್ಗಜರೆಲ್ಲಾ ಸೇರಿದ್ದರು. ಇನ್ನೊಂದು ಕಡೆ ಧನುಷ್, ದುಲ್ಖರ್ ಸಲ್ಮಾನ್, ರಾಮ್ ಚರಣ್ ಹಾಗೂ ಸಲ್ಮಾನ್ ಖಾನ್ ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ. ಆದರೆ, ಇಂಗ್ಲಿಷ್‌ ಟ್ರೈಲರ್ ಅನ್ನು ಯಾರು ರಿಲೀಸ್ ಮಾಡುತ್ತಾರೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

  English summary
  Ramcharan, Dhanush, Dulquer Salmaan, Salman Khan Releasing Vikrant Rona Trailer, Know More.
  Thursday, June 23, 2022, 10:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X