Daiji: 'ಶಿವಾಜಿ ಸುರತ್ಕಲ್' ಕಾಂಬಿನೇಷನ್‌ನಲ್ಲಿ ರಮೇಶ್ ಹೊಸ ಸಿನಿಮಾ 'ದೈಜಿ': ಈ ಟೈಟಲ್ ಅರ್ಥ ಏನು?

ರಮೇಶ್ ಅರವಿಂದ್ ನಟನೆಯ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಶಿವಾಜಿ 'ಸೂರತ್ಕಲ್' ಸೂಪರ್ ಹಿಟ್ ಆಗಿದ್ದು ಗೊತ್ತೇಯಿದೆ. ಇತ್ತೀಚೆಗೆ ಕಥೆಯ ಮುಂದುವರೆದ ಭಾಗ ಕೂಡ ಪ್ರೇಕ್ಷಕರ ಮುಂದೆ ಬಂದು ಸದ್ದು ಮಾಡಿತ್ತು. ಆಕಾಶ್ ಶ್ರೀವತ್ಸ ನಿರ್ದೇಶನದ ಈ ಸಿನಿಮಾ ರಮೇಶ್ ಅರವಿಂದ್‌ಗೆ ಹೊಸ ಇಮೇಜ್ ಕೊಟ್ಟಿದೆ. ಇದೀಗ ಇದೇ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ನಿರ್ಮಾಣವಾಗುತ್ತಿದೆ.

ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಕೈಜೋಡಿಸಿರುವ ಹೊಸ ಸಿನಿಮಾ ಹೆಸರು 'ದೈಜಿ'. ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದಕ್ಕೂ ಮುಂಚೆ ಕಾನ್ಸ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೆರೆ ಕಂಡ ಕಿರು ಚಿತ್ರ 'ಸುಳ್ಳೇ ಸತ್ಯ', ಪವನ್ ಕುಮಾರ್‌ ನಿರ್ದೇಶನದ 'ಲೂಸಿಯಾ', ಡಾಲಿ ಧನಂಜಯ್ ಅವರು ನಟಿಸಿದ 'ಬದ್ಮಾಶ್' ಚಿತ್ರಗಳು ಇದೇ ಬ್ಯಾನರ್‌ನಲ್ಲಿ ನಿರ್ಮಾಣ ಆಗಿತ್ತು.

Ramesh-aravind-daiji-first-look

ಸದ್ಯ 'ದೈಜಿ' ಚಿತ್ರದ ನಾಯಕಿಗಾಗಿ ಹುಡುಕಾಟ ಶುರುವಾಗಿದೆ. ಚಿತ್ರೀಕರಣ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. ಅಂದಹಾಗೆ ಚಿತ್ರವು ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣವಾಗಲಿದೆ. ಇತ್ತೀಚೆಗಷ್ಟೇ 25೫ ವರ್ಷಗಳ ಸಂಭ್ರಮ ಆಚರಿಸಿದ 'ಅಮೆರಿಕ ಅಮೆರಿಕ' ಚಿತ್ರದಂತೆಯೇ ಇದೂ ಕೂಡ ಬಹುತೇಕ ಅಮೆರಿಕದಲ್ಲಿಯೇ ನಡೆಯುವ ಕಥೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ರಮೇಶ್ ಅರವಿಂದ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಫಸ್ಟ್ ಲುಕ್ ಪೋಸ್ಟರ್ ಸಮೇತ 'ದೈಜಿ' ಸಿನಿಮಾ ಘೋಷಿಸಲಾಗಿದೆ. ಜೋಕರ್ ರೀತಿ ಮುಖಕ್ಕೆ ಬಣ್ಣ ಬಳಿದುಕೊಂಡು ಕಿವಿಯಲ್ಲಿ ಓಲೆ, ಜುಮುಕಿ ತೊಟ್ಟು ಕಿವಿಯಲ್ಲಿ ದೊಡ್ಡ ಸೂರ್ಯಕಾಂತಿ ಹೂ ಮುಡಿದು ಕುಹಕ ನಗು ಬೀರುತ್ತಿರುವ ರಮೇಶ್ ಅರವಿಂದ್ 'ದೈಜಿ' ಲುಕ್ ಗಮನ ಸೆಳೆಯುತ್ತಿದೆ.

Ramesh-aravind-daiji-first-look

'ದೈಜಿ' ಪದಕ್ಕೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಕೊಂಕಣಿಯಲ್ಲಿ ದೈಜಿ ಎಂದರೆ ರಕ್ತ ಸಂಬಂಧ. ಜಪಾನೀ ಭಾಷೆಯಲ್ಲಿ ದೈಜಿ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂದು ಅರ್ಥವಿದೆ. ಹೀಗೆ ಹಲವು ಭಾಷೆಗಳಲ್ಲಿ ಹಲವು ಅರ್ಥಗಳಿವೆ. ಇದೊಂದು ಯೂನಿವರ್ಸಲ್ ಸಬ್ಜೆಕ್ಟ್. ಹಾಗಾಗಿ ಯಾವುದೇ ಭಾಷೆಯವರುಗೂ ಕನೆಕ್ಟ್ ಆಗುತ್ತದೆ ಅನ್ನೋದು ಚಿತ್ರತಂಡದ ನಂಬಿಕೆ. ಮಿಸ್ಟರಿ ಅಥವಾ ಹಾರರ್ ಜಾನರ್ ಸಿನಿಮಾ ಇದು. ನಿರ್ಮಾಪಕ ರವಿ ಕಶ್ಯಪ್ ಹೇಳಿದ ನೈಜ ಘಟನೆಗಳನ್ನು ಆಧರಿಸಿ ಅಭಿಜಿತ್ ವೈ ಆರ್ ಮತ್ತು ಆಕಾಶ್ ಶ್ರೀವತ್ಸ ಚಿತ್ರಕಥೆ ಸಿದ್ಧಪಡಿಸಿದ್ದಾರೆ.

ಇದು ಸಕಲ ಕಲಾವಲ್ಲಭ ರಮೇಶ್ ಅರವಿಂದ ನಟನೆಯ 106ನೇ ಸಿನಿಮಾ. 'ಅಮೃತವರ್ಶಿಣಿ', 'ಅಮೆರಿಕ ಅಮೆರಿಕ', 'ರಾಮ ಶಾಮ ಭಾಮ', 'ಶಿವಾಜಿ ಸುರತ್ಕಲ್' ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ರಮೇಶ್ ನಟಿಸಿದ್ದಾರೆ. ತಮಿಳಿನಲ್ಲಿ 'ಡ್ಯೂಯೆಟ್', 'ಸತಿ ಲೀಲಾವತಿ', 'ಪಂಚತಂತಿರಂ', 'ಉತ್ತಮ ವಿಲ್ಲಿನ್', ತೆಲುಗು ಚಿತ್ರರಂಗದಲ್ಲಿ ಲಿಟಲ್ 'ಸೋಲ್ಜರ್ಸ್', ಮಲಯಾಳಂನಲ್ಲಿ 'ಅವನ್ ಅನಂತಪದ್ಮನಾಭನ್' ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಇದೀಗ 'ದೈಜಿ' ಚಿತ್ರದಲ್ಲಿ ತೀರಾ ವಿಭಿನ್ನ ಪಾತ್ರದಲ್ಲಿ ಅಷ್ಟೇ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ 'ದೈಜಿ' ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು ಚಿತ್ರೀಕರಣ ಆರಂಭಿಸಲು ಚಿತ್ರತಂಡ ಬಹಳ ಕಾತರದಿಂದ ಕಾಯುತ್ತಿದೆ.

ತ್ಯಾಗ ರಾಜ ಎನ್ನುವ ವಿಭಿನ್ನ ಬಿರುದು ಪಡೆದಿದ್ದ ರಮೇಶ್ ಅರವಿಂದ್ ಇತ್ತೀಚಿನ ದಿನಗಳಲ್ಲಿ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಜೊತೆ ಜೊತೆಗೆ ಅವಕಾಶ ಸಿಕ್ಕಾಗಲೆಲ್ಲಾ ಸಿನಿಮಾ ನಿರ್ದೇಶನವನ್ನು ಮಾಡಲಿದ್ದಾರೆ. ರಮೇಶ್ ನಿರ್ದೇಶಿಸಿ ನಟಿಸಿದ '100' ಸಿನಿಮಾ 2 ವರ್ಷಗಳ ಹಿಂದೆ ರಿಲೀಸ್ ಆಗಿತ್ತು.

More from Filmibeat

English summary
Shivaji Surathkal series Ramesh Aravind - Akash Srivatsa team up again for Daiji
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X