For Quick Alerts
  ALLOW NOTIFICATIONS  
  For Daily Alerts

  100: ಥ್ರಿಲ್ಲರ್‌ ಕಥೆಯೊಂದಿಗೆ ಬರುತ್ತಿದ್ದಾರೆ ರಮೇಶ್‌ ಅರವಿಂದ್‌- ರಚಿತಾ ರಾಮ್

  |

  ನಟ ರಮೇಶ್‌ ಅರವಿಂದ್ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. "100' ಹೆಸರಿನಲ್ಲಿ ಕೇಸು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಟೈಟಲ್‌ "100'. ಇದು ಪೊಲೀಸರಿಗೆ ಕರೆ ಮಾಡಲು ಇರುವ ಸಹಾಯವಾಣಿ ಸಂಖ್ಯೆ. ಇದನ್ನೇ ಚಿತ್ರದ ಟೈಟಲ್‌ ಆಗಿಸಿ ಥ್ರಿಲ್ಲರ್‌ ಕಥೆ ಮಾಡಿದ್ದಾರೆ ನಟ ರಮೇಶ್‌ ಅರವಿಂದ್. ಸೈಬರ್‌ ಕ್ರೈಮ್‌ ಆಧಾರಿತ ಸಿನಿಮಾ ಇದಾಗಿದೆ. ರಮೇಶ್‌ ಅರವಿಂದ್‌ ಜೊತೆಗೆ ರಚಿತಾ ರಾಮ್‌, ಪೂರ್ಣಾ ನಟಿಸಿದ್ದಾರೆ. ಇದು ಫ್ಯಾಮಿಲಿ ಥ್ರಿಲ್ಲರ್‌ ಜಾನರ್‌ಗೆ ಸೇರುವ ಸಿನಿಮಾ. ವಿಶೇಷ ಎಂದರೆ ರಮೇಶ್‌ ಅರವಿಂದ್‌ ಪೊಲೀಸ್‌ ಅಧಿಕಾರಿಯಾಗಿ ಈ ಸಿನಿಮಾದಲ್ಲಿ ಮಿಂಚಿದ್ದಾರೆ.

  ಸದ್ಯ ಚಿತ್ರದ ಟ್ರೇಲರ್ ರಿಲೀಸ್‌ ಆಗಿದೆ. ರೋಚಕ ಟ್ರೇಲರ್‌ ಕಟ್ಟಿ ಕೊಡುವುದರಲ್ಲಿ ಚಿತ್ರತಂಡ ಯಶಸ್ವಿಯಾಗಿದೆ ಅಂತ ಹೇಳಬಹುದು. ಟ್ರೇಲರ್‌ ನೋಡಿದ ಮೇಲೆ ಸಿನಿಮಾ ನೋಡ ಬೇಕು ಎನ್ನುವ ಕುತೂಹಲ ಹುಟ್ಟುತ್ತದೆ. ರಮೇಶ್‌ ಅರವಿಂದ್ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಕರಣವನ್ನು ಹೇಗೆ ಭೇಟೆಯಾಡುತ್ತಾರೆ ಎನ್ನುವ ಬಗ್ಗೆ ಸಣ್ಣ ಸುಳಿವು ಬಿಟ್ಟು ಕೊಟ್ಟಿದೆ. ಸ್ವಲ್ಪ ನಗಿ ಬಾಸ್ ಎನ್ನುವ ಡೈಲಾಗ್‌ನಿಂದ ಟ್ರೇಲರ್‌ ಆರಂಭ ಆಗುತ್ತದೆ. ನಂತರ ಪ್ರತಿ ಕಥೆಯಲ್ಲಿ ಹೀರೋ ಹಾಗೂ ವಿಲನ್ ಇರುತ್ತಾರೆ. ಆದರೆ ಈ ಕಥೆಗೆ ಹೀರೋ ಇಲ್ಲ ಇಬ್ಬರೂ ವಿಲನ್ ಎನ್ನುವ ಸಾಲು ನಾಯಕ ರಮೇಶ್‌ ಅರವಿಂದ್‌ ಪಾತ್ರದ ಬಗ್ಗೆ ಕುತೂಹಲ ಮೂಡಿಸುತ್ತದೆ.

  ಚಿತ್ರದ ಅತಿ ಮುಖ್ಯ ಪಾತ್ರದಲ್ಲಿ ರಚಿತಾ ರಾಮ್ !

  ಕನ್ನಡದ ಸ್ಟಾರ್‌ ನಟಿ ರಚಿತಾ ರಾಮ್‌ ಈ ಚಿತ್ರದಲ್ಲಿ ನಾಯಕನ ಜೊತೆ ಡ್ಯೂಯೆಟ್ ಆಡುವ ಅಥವಾ ನಾಯಕನ ಲವ್‌ ಇಂಟ್ರಸ್ಟ್‌ ಆಗಿ ನಾಯಕಿಯ ಪಾತ್ರ ಮಾಡಿಲ್ಲ. ಅದನ್ನೆಲ್ಲಾ ಬ್ರೇಕ್ ಮಾಡಿ ರಚಿತಾ ರಾಮ್ ಹೊಸ ಪ್ರಯೋಗಕ್ಕೆ ಇಳಿದಿದ್ದಾರೆ. ರಚಿತಾ ರಾಮ್ ಈ ಚಿತ್ರದಲ್ಲಿ ಅತಿ ಮುಖ್ಯವಾದ ಪಾತ್ರ ಮಾಡಿದ್ದಾರೆ. ರಮೇಶ್‌ ಅರವಿಂದ್‌ ತಂಗಿಯಾಗಿ ಕಾಣಿಸಿಕೊಂಡಿದ್ದು, ರಚಿತಾ ಪಾತ್ರದಿಂದಲೇ ಸಿನಿಮಾ ಕಥೆ ಶುರು ಆಗುವುದು, ಕೊನೆ ಆಗುವುದು.

  100 ಚಿತ್ರದ ಟ್ರೇಲರ್‌ ಲಾಂಚ್‌ ಕಾರ್ಯಕ್ರಮ ನೆರವೇರಿದೆ. ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ನಮನ ಸಲ್ಲಿಸಿ ಬಳಿಕ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದೆ. ಚಿತ್ರದಲ್ಲಿ ಏನಿದೆ ಎನ್ನುವ ಬಗ್ಗೆ ನಟ ರಮೇಶ್‌ ಅರವಿಂದ್‌ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ್ದಾರೆ. "ಇದು ಪೊಲೀಸ್‌ ಆಫೀಸರ್ ಕಥೆ, ಇದು ಫ್ಯಾಮಿಲಿ ಕಥೆ, ಅಪರಿಚಿತರು ಚಾಕೊಲೇಟ್ ಕೊಟ್ಟರೆ ತಗೆದು ಕೊಳ್ಳಬಾರದು ಎಂದು ಅಪ್ಪ ಅಮ್ಮ ಮಕ್ಕಳಿಗೆ ಹೇಳುತ್ತಾರೆ. ಆದರೆ ಈಗ ನಮಗೆ ಗೊತ್ತಿಲ್ಲದೆ ಅಪರಿಚಿತರು ನಮ್ಮ ಮೊಬೈಲ್ ಮೂಲಕ ಮನೆ ಒಳಗೆ ಬರುತ್ತಿದ್ದಾರೆ. ನಮ್ಮ ಮಕ್ಕಳಿಗೆ ಏನೇನೋ ಚಾಕೊಲೇಟ್ ಕೊಡುತ್ತಾರೆ. ನಮಗೆ ಅದರ ಅರಿವು ಇರುವುದಿಲ್ಲ. ಮನೆಯಲ್ಲಿ ನಾಲ್ಕು ಜನ ಇದ್ದರೆ, ಎಲ್ಲರಿಗೂ ಒಂದು ಮೊಬೈಲ್ ಇರುತ್ತದೆ. . ಎಲ್ಲರೂ ಏನೇನೋ ಮಾಡುತ್ತಿರುತ್ತಾರೆ. ಮನೆಗೆ ಬೀಗ ಹಾಕಿದ್ದರು, ಮೊಬೈಲ್ ಮೂಲಕ ಮನೆಯ ಒಳಗೆ ಕಳ್ಳರು ಬಂದು ಬ್ರೇನ್ ವಾಶ್ ಮಾಡುತ್ತಾರೆ. ನಾವು ಮಕ್ಕಳಿಗೆ ಹೇಳಿ ಕೊಟ್ಟ ಮೌಲ್ಯವನ್ನು ಬ್ರೇಕ್ ಮಾಡುತ್ತಿದ್ದಾರೆ. ಅದನ್ನ ಮನೆ ಮಾಲೀಕ ಹೇಗೆ ಬ್ರೇಕ್ ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ' ಎಂದು ಚಿತ್ರದ ಬಗ್ಗೆ ನಟ ರಮೇಶ್‌ ಅರವಿಂದ್‌ ಮಾತನಾಡಿದ್ದಾರೆ.

  Ramesh aravind And Rachita Ram Starerr 100 Movie Trailer Release

  ಇಂದಿನ ಆಧುನಿಕ ಪ್ರಪಂಚಕ್ಕೆ, ಮೊಬೈಲ್‌ ಯುಗಕ್ಕೆ ಹೇಳಲೇಬೇಕಾದ ಒಂದು ಕಥೆಯನನು ತೆರೆ ಮೇಲೆ ತರಲು ರಮೇಶ್ ಅರವಿಂದ್‌ ಹೊರಟಿದ್ದಾರೆ. 100 ಇದೇ ನವೆಂಬರ್‌ 19ಕ್ಕೆ ರಿಲೀಸ್‌ ಆಗುತ್ತಿದೆ.

  English summary
  Kannada Movie 100 Is Releasing On November 19 Now The Trailer Got All The Attention,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X