'ಭೈರಾ ದೇವಿ' ಚಿತ್ರಕ್ಕಾಗಿ ಖಾಕಿ ತೊಟ್ಟ ನಟ ರಮೇಶ್ ಅರವಿಂದ್
Recommended Video

'ತ್ಯಾಗರಾಜ' ಅಂತಲೇ ಒಂದ್ಕಾಲದಲ್ಲಿ ಕನ್ನಡ ಸಿನಿಪ್ರಿಯರಿಂದ ಕರೆಯಿಸಿಕೊಳ್ಳುತ್ತಿದ್ದ ನಟ ರಮೇಶ್ ಅರವಿಂದ್ ತಮ್ಮ ಮೂರು ದಶಕಗಳ ಸಿನಿಮಾ ಕೆರಿಯರ್ ನಲ್ಲಿ ಭಿನ್ನ ವಿಭಿನ್ನ ಪಾತ್ರಗಳಿಗೆ ಜೀವ ನೀಡಿದ್ದಾರೆ.
ಈಗ ನಟ ರಮೇಶ್ ಅರವಿಂದ್ 'ಭೈರಾ ದೇವಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ 'ಭೈರಾ ದೇವಿ' ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಚಾಮರಾಜಪೇಟೆಯ ದೇವಸ್ಥಾನವೊಂದರಲ್ಲಿ ನಡೆದಿತ್ತು. ಇದೀಗ ಅದೇ ಚಿತ್ರದ ಶೂಟಿಂಗ್ ಪ್ರಾರಂಭವಾಗಿದೆ.
'ಭೈರಾ ದೇವಿ' ಚಿತ್ರಕ್ಕಾಗಿ ನಟ ರಮೇಶ್ ಅರವಿಂದ್ ಖಾಕಿ ತೊಟ್ಟಿದ್ದಾರೆ. ಖಡಕ್ ಐ.ಪಿ.ಎಸ್ ಆಫೀಸರ್ ಪಾತ್ರದಲ್ಲಿ 'ಭೈರಾ ದೇವಿ' ಸಿನಿಮಾದಲ್ಲಿ ಮಿಂಚಲಿದ್ದಾರೆ ನಟ ರಮೇಶ್ ಅರವಿಂದ್.

ಅಂದ್ಹಾಗೆ, 'ಭೈರಾ ದೇವಿ' ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆಗೆ ತೆರೆಹಂಚಿಕೊಳ್ಳುತ್ತಿರುವವರು ನಟಿ ರಾಧಿಕಾ ಕುಮಾರಸ್ವಾಮಿ. ಸಿನಿಮಾದಲ್ಲಿ ರಾಧಿಕಾ ಕುಮಾರಸ್ವಾಮಿ ಪಾತ್ರ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ.
ದುನಿಯಾ ವಿಜಯ್ ನಟಿಸಿದ 'ಆರ್.ಎಕ್ಸ್.ಸೂರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಶ್ರೀಜೈ 'ಭೈರಾ ದೇವಿ' ಚಿತ್ರದ ನಿರ್ದೇಶಕ. ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಈ ಸಿನಿಮಾ ತಯಾರಾಗಲಿದ್ದು, ಕಾಶಿ ಹಾಗೂ ಹರಿದ್ವಾರ ಸೇರಿದಂತೆ ಹಲವು ಕಡೆ ಚಿತ್ರೀಕರಣ ನಡೆಯಲಿದೆ.


Click it and Unblock the Notifications











