For Quick Alerts
  ALLOW NOTIFICATIONS  
  For Daily Alerts

  ಗಡ್ಡ ತೆಗೆದು ಹಳೆ ಲುಕ್ ಗೆ ಮರಳಿದ ರಮೇಶ್

  |

  Recommended Video

  ಪದೇ ಪದೇ ಕೇಳಿಬರುತ್ತಿದ್ದ ಪ್ರಶ್ನೆಗೆ ರಮೇಶ್ ನೀಡಿದ ಉತ್ತರ ಇದು | FILMIBEAT KANNADA

  ''ನೀವು ಯಾವಾಗ ನಿಮ್ಮ ಗಡ್ಡ ತೆಗೆಯುತ್ತೀರಿ ?'' ಎಂಬ ಪ್ರಶ್ನೆ ಪದೇ ಪದೇ ನಟ ರಮೇಶ್ ರಿಗೆ ಬರುತ್ತಿತ್ತು. 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಾಕಷ್ಟು ವೀಕ್ಷಕರಿಗೆ ರಮೇಶ್ ಗಡ್ಡ ಇಷ್ಟ ಆಗಿರಲಿಲ್ಲ. ಇದೀಗ ರಮೇಶ್ ತಮ್ಮ ಹಳೆ ಲುಕ್ ಗೆ ಮರಳಿದ್ದಾರೆ.

  ರಮೇಶ್ ಅರವಿಂದ್ ಗಡ್ಡ ಬಿಟ್ಟ ಹಿಂದಿದೆ ಒಂದು ರಹಸ್ಯರಮೇಶ್ ಅರವಿಂದ್ ಗಡ್ಡ ಬಿಟ್ಟ ಹಿಂದಿದೆ ಒಂದು ರಹಸ್ಯ

  ರಮೇಶ್ ಯಾವಾಗಲೂ ಗಡ್ಡ ಬಿಡುತ್ತಿರಲಿಲ್ಲ. ಆದರೆ, ''ಶಿವಾಜಿ ಸೂರತ್ಕಲ್ ಕೇಸ್ ಆಫ್ ರಣಗಿರಿ ರಹಸ್ಯ' ಎಂಬ ಸಿನಿಮಾಗಾಗಿ ಅವರು ಗಡ್ಡ ಬಿಟ್ಟಿದ್ದರು. ಸಿನಿಮಾದಲ್ಲಿ ಡಿಟೆಕ್ವಿವ್ ಪಾತ್ರ ಮಾಡಿದ್ದ ರಮೇಶ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

  ಇದೀಗ ಆ ಪಾತ್ರದ ಶೂಟಿಂಗ್ ಮುಗಿದ ಕಾರಣ ರಮೇಶ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. ತಮ್ಮ ಹಳೆ ಲುಕ್ ನಲ್ಲಿ ಫುಲ್ ಫ್ರೆಶ್ ಆಗಿ ರಮೇಶ್ ಮರಳಿದ್ದಾರೆ. ಇನ್ನು ರಮೇಶ್ ರನ್ನು ವಿಶೇಷವಾಗಿ ಗುಲಾಬಿ ಹೂಗಳ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತ ಮಾಡಲಾಗಿದೆ.

  ರಮೇಶ್ ಅವರ ಗಡ್ಡದ ವಿಷಯವನ್ನು ಸಣ್ಣ ವಿಡಿಯೋ ಮೂಲಕ ಜೀ ಕನ್ನಡ ವಾಹಿನಿ ಫನ್ನಿಯಾಗಿ ಹಂಚಿಕೊಂಡಿದೆ. ಈ ವಾರ ನಟ ಶ್ರೀಮುರಳಿ ಸಂಚಿಕೆ ಪ್ರಸಾರ ಆಗಲಿದ್ದು, ಆ ಸಂಚಿಕೆಯಿಂದ ರಮೇಶ್ ಲುಕ್ ಬದಲಾಗಿ ಇರಲಿದೆ.

  English summary
  Actor Ramesh Aravind came back to his old look.
  Wednesday, May 15, 2019, 11:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X