For Quick Alerts
  ALLOW NOTIFICATIONS  
  For Daily Alerts

  ಅಂದು ಬೆಸ್ಟ್ ಫ್ರೆಂಡ್ ಹೆಂಡತಿಯಾದರು, ಇಂದು ಹೆಂಡತಿಯೇ ಬೆಸ್ಟ್ ಫ್ರೆಂಡ್: ರಮೇಶ್ ಅರವಿಂದ್

  |

  ಚಂದನವನದ ಪ್ರಸಿದ್ಧ ನಟ ರಮೇಶ್ ಅರವಿಂದ್ ಅವರಿಗೆ ಇಂದು ವಿಶೇಷವಾದ ದಿನ. ಸ್ಯಾಂಡಲ್ ವುಡ್ ನ ತ್ಯಾಜರಾಜ್ ಎಂದೇ ಕರೆಸಿಕೊಳ್ಳುವ ರಮೇಶ್ ಅರವಿಂದ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ದಿನವಿದು. 1991, ಜುಲೈ 7ರಂದು ತಾವು ಪ್ರೀತಿಸಿದ ಅರ್ಚನಾ ಜೊತೆ ರಮೇಶ್ ಅರವಿಂದ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  ಇಂದು ರಮೇಶ್ ಅರವಿಂದ್ ಮತ್ತು ಅರ್ಚನಾ ದಂಪತಿ 30ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ವೃತ್ತಿ ಜೀವನದಲ್ಲೂ ಪರ್ಫೆಕ್ಟ್ ಎನಿಸಿಕೊಂಡಿರುವ ರಮೇಶ್ ಅರವಿಂದ್ ವೈಯಕ್ತಿಕ ಜೀವನದಲ್ಲೂ ಪರ್ಫೆಕ್ಟ್.

  25 ವರ್ಷದ ಸಂಭ್ರಮ: '90ರ ದಶಕದ ದುಬಾರಿ ಕನಸು ಅಮೆರಿಕಾ ಅಮೆರಿಕಾ'25 ವರ್ಷದ ಸಂಭ್ರಮ: '90ರ ದಶಕದ ದುಬಾರಿ ಕನಸು ಅಮೆರಿಕಾ ಅಮೆರಿಕಾ'

  ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ರಮೇಶ್ ಅರವಿಂದ್ ಸಾಮಾಜಿಕ ಜಾಲತಾಣದಲ್ಲಿ ಎರಡು ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮದುವೆ ಫೋಟೋ ಮತ್ತು ಮಗಳ ಮದುವೆ ದಿನದ ಫೋಟೋ. ಈ ಸುಂದರ ಫೋಟೋ ಹಂಟಿಕೊಂಡು, "ಜುಲೈ 7, ಅಂದು Best friend ಹೆಂಡತಿಯಾದರು. ಇಂದು, ಹೆಂಡತಿಯೇ Bestfriend ಕೂಡ" ಎಂದು ಬರೆದುಕೊಂಡಿದ್ದಾರೆ.

  ರಮೇಶ್ ಪೋಸ್ಟ್‌ಗೆ ಅಭಿಮಾನಿಗಳು, ಸ್ನೇಹಿತರು ಶುಭಾಶಯ ತಿಳಿಸುತ್ತಿದ್ದಾರೆ. ರಮೇಶ್ ಅರವಿಂದ್ ಮತ್ತು ಅರ್ಚನಾ ದಂಪತಿಗೆ ನಿಹಾರಿಕಾ ಮತ್ತು ಅರ್ಜುನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಕಳೆದ ವರ್ಷ 2020, ಡಿಸೆಂಬರ್‌ನಲ್ಲಿ ರಮೇಶ್ ಅರವಿಂದ್ ಮಗಳು ನಿಹಾರಿಕಾ ಮದುವೆ ನೆರವೇರಿತ್ತು. ಸಹೋದ್ಯೋಗಿ ಅಕ್ಷಯ್ ಜೊತೆ ನಿಹಾರಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

  Ramesh Aravind celebrating his 30th wedding anniversary

  Recommended Video

  Rachita Ram Biography | ಬಿಂದಿಯಾ ರಾಮ್ ರಚಿತಾ ರಾಮ್ ಆದ ಕಥೆ | Rachita Ram real Life story | Filmibeat

  ರಮೇಶ್ ಅರವಿಂದ್ ನಟನಾಗಿ ಮಾತ್ರವಲ್ಲ, ನಿರ್ದೇಶಕನಾಗಿ, ನಿರೂಪಕನಾಗಿ ಮೋಟಿವೇಷನಲ್ ಸ್ಪೀಕರ್ ಆಗಿ ಪ್ರಖ್ಯಾತಿ ಗಳಿಸಿದ್ದಾರೆ.

  English summary
  Kannada Actor Ramesh Aravind celebrating his 30th wedding anniversary today.
  Wednesday, July 7, 2021, 13:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X