twitter
    For Quick Alerts
    ALLOW NOTIFICATIONS  
    For Daily Alerts

    ಮೊದಲ ಬಾರಿಗೆ ಮತ ಚಲಾಯಿಸಿದ ರಮೇಶ್ ಅರವಿಂದ್ ಮಗಳು

    By Bharath Kumar
    |

    ಕನ್ನಡ ಚಲನಚಿತ್ರ ನಟ ರಮೇಶ್ ಅರವಿಂದ್ ಅವರ ಮಗಳು ಮೊದಲ ಬಾರಿಗೆ ಮತದಾನ ಮಾಡಿದ್ದಾರೆ. ಮತದಾನ ಪ್ರತಿಯೊಬ್ಬರ ಹಕ್ಕು. 18 ವರ್ಷದ ನಂತರ ಎಲ್ಲರೂ ಮತದಾನ ಮಾಡಲು ಅರ್ಹರು ಮತ್ತು ಕರ್ತವ್ಯ ಕೂಡ ಹೌದು. ಇದೀಗ ಈ ಕರ್ತವ್ಯವನ್ನ ರಮೇಶ್ ಕುಟುಂಬ ನಿಭಾಯಿಸಿದೆ.

    ಮಗಳ ಫೋಟೋವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ರಮೇಶ್ ನಿಹಾರಿಕ ಚೊಚ್ಚಲ ಬಾರಿಗೆ ಮತದಾನ ಮಾಡಿರುವುದರ ಬಗ್ಗೆ ನಟ ಸಂತಸ ವ್ಯಕ್ತಪಡಿಸಿದ್ದಾರೆ.

    LIVE: ಇದುವರೆಗೆ ಶೇ. 10.51 ರಷ್ಟು ಮತದಾನ ದಾಖಲು

    ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ನಿವಾಸಿಗಳಾಗಿರುವ ರಮೇಶ್ ರಮೇಶ್ ಅರವಿಂದ್, ಪತ್ನಿ ಅರ್ಚನಾ ಮತ್ತು ಮಗಳು ಮತದಾನ ಮಾಡಿ ತಮ್ಮ ಕರ್ತವ್ಯವನ್ನ ನಿರ್ವಹಿಸಿದ್ದಾರೆ.

    Ramesh aravind daughter first vote

    ಮೊದಲ ಸಲ ಮತದಾನ ಮಾಡುದ ನಿಹಾರಿಕ ಮಾಧ್ಯಮಗಳ ಜೊತೆ ಮಾತನಾಡಿದ್ದು, ''ತುಂಬಾ ಖುಷಿ ಆಗ್ತಿದೆ, ಇದು ನನ್ನ ಮೊದಲ ವೋಟ್, ಎಲ್ಲರೂ ಮತದಾನ ಮಾಡಿ'' ಎಂದರು.

    In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

    ಇನ್ನ ನಟ ರಮೇಶ್ ಅರವಿಂದ್ ಮಾತನಾಡಿ '' ವೋಟ್ ಮಾಡುವುದು ಕೇವಲ ನಮಗಾಗಿ ಮಾತ್ರವಲ್ಲ, ನಮ್ಮ ಮಕ್ಕಳ ಹಾಗೂ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ. ಇವತ್ತೇ ಏನೆ ಕೆಲಸವಿದ್ರು, ಮೊದಲ ವೋಟ್ ಮಾಡುವುದಕ್ಕೆ ಆಧ್ಯತೆ ಕೊಡಿ. ಸರಿಯಾದ ವ್ಯಕ್ತಿಯನ್ನ ಆಯ್ಕೆ ಮಾಡಿ'' ಎಂದು ಮನವಿ ಮಾಡಿಕೊಂಡರು.

    ಇಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ರಾಜ್ಯದ 222 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಮೇ 15 ರಂದು ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ.

    English summary
    Kannada actor Ramesh aravind daughter niharika voted first time. she voted in padmanabhanagar constituency.
    Saturday, May 12, 2018, 12:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X