For Quick Alerts
  ALLOW NOTIFICATIONS  
  For Daily Alerts

  ನಟ ರಮೇಶ್ ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ ಜೋರು

  |

  ಕನ್ನಡದ ಖ್ಯಾತ ನಟ-ನಿರ್ದೇಶಕ ರಮೇಶ್ ಅರವಿಂದ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದೆ.

  ರಮೇಶ್ ಅರವಿಂದ್ ಮತ್ತು ಅರ್ಚನಾ ದಂಪತಿಯ ಪುತ್ರಿ ನಿಹಾರಿಕಾ ದಾಂಪತ್ಯ ಜೀವನ ಪ್ರವೇಶಿಸುತ್ತಿದ್ದಾರೆ. ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಅಕ್ಷಯ್ ಜೊತೆ ಸಪ್ತಪದಿ ತುಳಿಯಲು ನಿರ್ಧರಿಸಿದ್ದಾರೆ.

  ಪತ್ನಿಗೆ ಅತಿ ದೊಡ್ಡ ಧನ್ಯವಾದ ಹೇಳಿದ ರಮೇಶ್ ಅರವಿಂದ್ಪತ್ನಿಗೆ ಅತಿ ದೊಡ್ಡ ಧನ್ಯವಾದ ಹೇಳಿದ ರಮೇಶ್ ಅರವಿಂದ್

  ಡಿಸೆಂಬರ್ 28 ರಂದು ಇವರಿಬ್ಬರ ವಿವಾಹ ಮಹೋತ್ಸವ ನಡೆಯಲು ಗುರು ಹಿರಿಯರು ನಿಶ್ಚಯಿಸಿದ್ದು, ಎರಡು ಕುಟುಂಬಗಳ ಸಮ್ಮುಖದಲ್ಲಿ ಕೊವಿಡ್ ನಿಯಮಗಳ ಅನುಸಾರವಾಗಿ ವಿವಾಹ ಜರುಗಲಿದೆ.

  ಜನವರಿ ಎರಡನೇ ವಾರದಲ್ಲಿ ನಿಹಾರಿಕ ಮತ್ತು ಅಕ್ಷಯ್ ಅವರ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ರಿಸಪ್ಷನ್‌ನಲ್ಲಿ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಭಾಗವಹಿಸುವ ನಿರೀಕ್ಷೆ ಇದೆ.

  ಈ ಕುರಿತು ಮಾಧ್ಯಮಗಳ ಜೊತೆ ಸಂತಸ ಹಂಚಿಕೊಂಡಿರುವ ರಮೇಶ್ ಅರವಿಂದ್ ''ನಾನು ಚಿತ್ರರಂಗಕ್ಕೆ ಬಂದ ದಿನದಿಂದಲೂ ನನಗೆ ಕರ್ನಾಟಕದ ಜನತೆ, ಚಿತ್ರರಿಸಕರು ಹಾಗೂ ಮಾಧ್ಯಮದವರು ಪ್ರೋತ್ಸಾಹ, ಬೆಂಬಲ ನೀಡಿದ್ದೀರಾ. ನಿಮ್ಮ ಎಲ್ಲರ ಪ್ರೀತಿ ಮತ್ತು ಆರ್ಶೀವಾದ ಈ ಜೋಡಿಯ ಮೇಲೆ ಇರಲಿ'' ಎಂದು ವಿನಂತಿಸಿದ್ದಾರೆ.

  Sunil Shetty ಮಗಳಿಗೆ ರೆಡ್ ರೋಜ್ ಕಳುಹಿಸಿದ KL Rahul | Filmibeat Kannada

  ರಮೇಶ್ ಅರವಿಂದ್ ಹಾಗೂ ಅರ್ಚನಾ 1991 ಜುಲೈ 7 ರಂದು ವಿವಾಹ ಆಗಿದ್ದರು. ಈ ದಂಪತಿಗೆ ಅರ್ಜುನ್ ಎಂಬ ಒಬ್ಬ ಮಗ ಹಾಗೂ ನಿಹಾರಿಕಾ ಎಂಬ ಒಬ್ಬ ಮಗಳು ಇದ್ದಾರೆ.

  English summary
  Kannada actor Ramesh Aravind daughter Niharika to Marry with Akshay on December 28th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X