ರಮೇಶ್ ಅರವಿಂದ್ ಗಡ್ಡ ಬಿಟ್ಟ ಹಿಂದಿದೆ ಒಂದು ರಹಸ್ಯ

Recommended Video

ಉದ್ದ ಮೀಸೆ ಮತ್ತು ದಾಡಿ ಬಿಟ್ಟ ಲುಕ್ ನಲ್ಲಿ ಮಿಂಚುತ್ತಿದ್ದಾರೆ ರಮೇಶ್ ಅರವಿಂದ್.

ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟ ರಮೇಶ್ ಅರವಿಂದ್ ಇತ್ತೀಚಿನ ದಿನಗಳಲ್ಲಿ ಹೊಸ ಗೆಟಪ್ ನಲ್ಲಿ ಮಿಂಚುತ್ತಿದ್ದಾರೆ. ಉದ್ದ ಮೀಸೆ ಮತ್ತು ದಾಡಿ ಬಿಟ್ಟ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ಪ್ರಸಾರವಾಗುತ್ತಿರುವ ವೀಕೆಂಡ್ ವಿತ್ ರಮೇಶ್4 ಕಾರ್ಯಕ್ರಮದಲ್ಲೂ ರಮೇಶ್ ದಾಡಿ ಬಿಟ್ಟು ಹೊಸ ಅವತಾರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ.

ಅಂದ್ಹಾಗೆ ರಮೇಶ್ ಅರವಿಂದ್ ಅವರ ಈ ಹೊಸ ಗೆಟಪ್ ನ ಹಿಂದಿದೆ ಒಂದು ದೊಡ್ಡ ರಹಸ್ಯ. ಹೌದು, ಅದೂ ಅಂತಿಂತಹ ರಹಸ್ಯವಲ್ಲ 'ರಣಗಿರಿಯ ರಹಸ್ಯ'. ಅಚ್ಚರಿ ಪಡಬೇಡಿ ರಮೇಶ್ ಅರವಿಂದ್ ಹೊಸ ಸಿನಿಮಾದ ಹೆಸರಿದು. 'ಶಿವಾಜಿ ಸೂರತ್ಕಲ್' ಎನ್ನುವ ಚಿತ್ರದಲ್ಲಿ ರಮೇಶ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಕೇಸ್ ಆಫ್ 'ರಣಗಿರಿಯ ರಹಸ್ಯ' ಎನ್ನುವ ಟ್ಯಾಗ್ ಲೈನ್ ಇದೆ.

ಈ ಚಿತ್ರದಲ್ಲಿ ರಮೇಶ್ ಅರವಿಂದ್ ಡಿಟೆಕ್ಟಿವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ವಿಭಿನ್ನವಾದ ಕತಾಹಂದರ ಹೊಂದಿರುವ ಶಿವಾಜಿ ಸೂರತ್ಕಲ್ ರಮೇಶ್ ಸಿನಿ ಜೀವನದ ತುಂಬಾ ಮಹತ್ತರವಾದ ಸಿನಿಮಾವಾಗಿದೆಯಂತೆ. ರಮೇಶ್ ಅರವಿಂದ್ ಕ್ರೈಮ್ ಬ್ರಾಂಚ್ ನ ತುಂಬಾ ಚಾಣಾಕ್ಯ ಗೂಢಾಚಾರಿ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರಂತೆ.

ramesh aravind detective in Shivaji Suratkal movie

ವಿಶೇಷ ಅಂದ್ರೆ ರಮೇಶ್ ಅರವಿಂದ್ ಅವರಿಗೆ ನಾಯಕಿಯಾಗಿ ರಾಧಿಕಾ ಚೇತನ್ ಕಾಣಿಸಿಕೊಂಡಿದ್ದಾರೆ. ರಾಧಿಕಾ ಇಲ್ಲಿ ವಕೀಲೆ ಪಾತ್ರದಲ್ಲಿ ಮಿಂಚಿದ್ದಾರೆ. ರಮೇಶ್ ಪತ್ನಿಯಾಗಿ ಕಾಣಿಸಿಕೊಂಡಿರುವ ರಾಧಿಕಾ ಪಾತ್ರ ಚಿತ್ರದ ಹೈಲೈಟ್ ಅಂತೆ. ಇನ್ನು ಮತ್ತೋರ್ವ ನಾಯಕಿಯಾಗಿ ಆರೋಹಿ ನಾರಾಯಣ್ ಮಿಂಚಿದ್ದಾರೆ.

ಅಂದ್ಹಾಗೆ ಚಿತ್ರಕ್ಕೆ ಆಕಾಶ್ ಶ್ರೀವಾತ್ಸವ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂಜನಾದ್ರಿ ಸಿನಿ ಕ್ರಿಯೇಷನ್ ನಲ್ಲಿ ಚಿತ್ರ ತಯಾರಾಗಿದೆ. ಸದ್ಯ 80ರಷ್ಟು ಚಿತ್ರೀಕರಣ ಮಾಡಿ ಮುಗಿಸಿದೆ ಚಿತ್ರತಂಡ. ಸದ್ಯ ಚಿತ್ರದ ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಚಿತ್ರತಂಡ ಸಧ್ಯದಲ್ಲೇ ಅಭಿಮಾನಿಗಳ ಮುಂದೆ ಬರಲಿದೆ.

More from Filmibeat

English summary
Kannada actor ramesh aravind detective in 'Shivaji Suratkal-case of Ranagiri Rahasya' movie. This movie is directed by Akash Srivatsav.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X