For Quick Alerts
  ALLOW NOTIFICATIONS  
  For Daily Alerts

  ವಿಂಗ್ ಕಮಾಂಡರ್ ಅಭಿನಂದನ್ ಗೆಟಪ್ ನಲ್ಲಿ ನಟ ರಮೇಶ್ ಅರವಿಂದ್

  |

  ಪಾಕಿಸ್ತಾನ ಸೇನಾ ವಿಮಾನವನ್ನು ಹೊಡೆದುರಳಿಸಿ ಆಕಸ್ಮಿಕವಾಗಿ ಪಾಕ್ ಸೇನೆಯ ಸೆರೆಸಿಕ್ಕಿ ತಾಯ್ನಾಡಿಗೆ ವಾಪಸ್ ಆದ ಧೀರ ಯೋಧ, ಭಾರತೀಯ ಹೆಮ್ಮೆಯ ಪುತ್ರ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್. ಅಭಿನಂದನ್ ಜೊತೆಗೆ ಅವರ ಮೀಸೆ ಕೂಡ ಎಲ್ಲರಿಗೂ ಇಷ್ಟವಾಗಿತ್ತು. ಅಭಿನಂದನ್ ಮೀಸೆಗೆ ಫಿದಾ ಆಗದವರಿಲ್ಲ.

  ಸಿನಿಮಾ ನಟರ ಲುಕ್, ಗೆಟಪ್ ವೈರಲ್ ಆಗುವುದು, ಟ್ರೆಂಡ್ ಸೆಟ್ ಮಾಡುವುದು ಸಾಮಾನ್ಯ. ಆದರೆ ಧೀರತನದ ಸಂಕೇತವಾಗಿರುವ ಭಾರತೀಯ ಯೋಧನೊಬ್ಬನ ಮೀಸೆ ಟ್ರೆಂಡ್ ಆಗಿದ್ದು ವಿಶೇಷ. ಅಚ್ಚರಿ ಅಂದರೆ ಅಭಿನಂದನ್ ಗೆಟಪ್ ನಲ್ಲಿಯೆ ಸ್ಯಾಂಡಲ್ ವುಡ್ ನಟ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದಾರೆ.

  ಇಂಜಿನಿಯರಿಂಗ್ ಪದವಿ ಪಡೆದ ಕನ್ನಡದ ಸ್ಟಾರ್ ನಟರಿವರುಇಂಜಿನಿಯರಿಂಗ್ ಪದವಿ ಪಡೆದ ಕನ್ನಡದ ಸ್ಟಾರ್ ನಟರಿವರು

  ಉದ್ದ ಮತ್ತು ದಪ್ಪಗೆ ಮೀಸೆ ಬಿಟ್ಟಿರುವ ರಮೇಶ್ ಅರವಿಂದ್ ಹೊಸ ಸ್ಟೈಲ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಂದ್ಹಾಗೆ ರಮೇಶ್ ಅರವಿಂದ್ ಹೀಗೆ ಕಾಣಿಸಿಕೊಂಡಿದ್ದು 'ಶಿವಾಜಿ ಸುರತ್ಕಲ್' ಚಿತ್ರಕ್ಕಾಗಿ. ಮರ್ಡರ್ ಮಿಸ್ಟರಿ 'ಶಿವಾಜಿ ಸುರತ್ಕಲ್' ಚಿತ್ರದಲ್ಲಿ ರಮೇಶ್ ಅರವಿಂದ್ ಮೂರು ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

  ಈಗಾಗಲೆ ರಮೇಶ್ ಅರವಿಂದ್ ಅವರ ಎರಡು ಲುಕ್ ರಿವೀಲ್ ಆಗಿತ್ತು. ಈಗ ಮೂರನೆ ಲುಕ್ ಬಹಿರಂಗವಾಗಿದೆ. ಸಂಪೂರ್ಣ ಗಡ್ಡಧಾರಿಯ ಗೆಟಪ್, ಗಡ್ಡ ಇಲ್ಲದ ಲುಕ್ ಮತ್ತು ಈಗ ಸೈಕಲ್ ಹ್ಯಾಂಡಲ್ ಮೀಸೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಚಿತ್ರದ ಮೇಲಿನ ನಿರೀಕ್ಷೆಯ ಮಟ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

  ಚಿತ್ರದಲ್ಲಿ ರಮೇಶ್ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕಥೆ ಬೇರೆ ಬೇರೆ ಕಾಲಘಟ್ಟದಲ್ಲಿ ಸಾಗುತ್ತಿರುತ್ತದೆ. ಪ್ರತೀ ಕಾಲಘಟ್ಟಕ್ಕು ಒಂದೊಂದು ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರಂತೆ. ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿಯಾಗಿದೆ. ಇನ್ನು ವಿಶೇಷ ಅಂದರೆ 'ಶಿವಾಜಿ ಸುರತ್ಕಲ್' ಕನ್ನಡ ಜೊತೆಗೆ ತಮಿಳು ಮತ್ತು ತೆಲುಗಿನಲ್ಲೂ ರಿಲೀಸ್ ಆಗುವ ಸಾಧ್ಯತೆ ಇದೆ.

  English summary
  Kannada actor Ramesh Aravind long Mustache look in Shivaji Surathkal film revealed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X