ಟೈಟಲ್‌ನಿಂದಲೇ ಸದ್ದು ಮಾಡುತ್ತಿದೆ ಹೊಸ ಸಿನಿಮಾ 'ದೈಜಿ'; ಇದು ರಮೇಶ್ ಅರವಿಂದ್ ಎಷ್ಟನೇ ಚಿತ್ರ?
'ಕಲಾವಿದನು ತನ್ನನ್ನು ತಾನು ಎಂದಿಗೂ ಸತತವಾಗಿ ಪುನರ್ ನಿರ್ಮಾಣ ಮಾಡಿಕೊಳ್ಳಬೇಕು. ಇದು ಪ್ರೇಕ್ಷಕರಿಗೆ ಮಾತ್ರವಲ್ಲ, ಇದರಲ್ಲಿ ಕಲಾವಿದನ ಸರ್ವಾಂಗೀಣ ಬೆಳವಣಿಗೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಲಾವಿದನು ತನ್ನ ಕಲಿಕೆಯನ್ನು ಸ್ಥಗಿತಗೊಳಿಸಬಾರದು ಅದು ಕಲಾವಿದನ ಲಕ್ಷಣವಲ್ಲ ಎಂದಿದ್ದಾರೆ ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್.
ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ, ಯುವಕರಲ್ಲಿ ಸ್ಫೂರ್ತಿ ತುಂಬುವ ಅದ್ಭುತ ಭಾಷಣಕಾರ ರಮೇಶ್ ಅರವಿಂದ್ ಅವರು ಕನ್ನಡ, ತಮಿಳು, ತೆಲುಗು, ತುಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ, ಹಲವಾರು ಫಿಲ್ಮ್ ಫೇರ್ ಪ್ರಶಸ್ತಿಗಳು , ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕೃತರು ರಮೇಶ್ ಅರವಿಂದ್.

ತಮ್ಮ 60ರ ಹುಟ್ಟು ಹಬ್ಬವನ್ನು ಅಭಿಮಾನಿಗಳೊಂದಿಗೆ ಸಂಭ್ರಮದಿಂದ ರಮೇಶ್ ಅರವಿಂದ್ ಆಚರಿಸಿದ್ದರು. ನಟ ರಮೇಶ್ ಅರವಿಂದ್ ಈಗಾಗಲೇ 100ಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ರಮೇಶ್ ಅರವಿಂದ್ ನಿರ್ದೇಶಿಸಿದ್ದಾರೆ.
ಇದೀಗ ಇವರ ಹೊಸ ಕನ್ನಡದ ಚಿತ್ರ ಒಂದು ಅನೌನ್ಸ್ ಆಗಿದೆ. ಹೌದು 'ದೈಜಿ' ಸಿನಿಮಾದಲ್ಲಿ ರಮೇಶ್ ಅವರು ಅಭಿನಯಸಲಿದ್ದು ಇದೊಂದು ಹಾರರ್ ಫ್ಯಾಂಟಸಿ ಚಿತ್ರವಾಗಿದೆ. ಆದರೆ ರಮೇಶ್ ಅರವಿಂದ್ ರವರು ಚಿತ್ರರಂಗದಲ್ಲಿ ಯಾವಾಗಲೂ ಹೊಸತನ್ನು ಕಾಣಲು ಬಯಸುತ್ತಾರೆ. ಹೊಸ ಕಥನಾ ಲಹರಿಯಿಂದ ಪ್ರೇಕ್ಷಕರ ಮನ ಸೆಳೆಯುವುದು ರಮೇಶ್ ರವರ ಉದ್ದೇಶ.
"ಶಿವಾಜಿ ಸುರತ್ಕಲ್ ಭಾಗ 1 ಮತ್ತು 2 ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ಭಾರತದ ಹಲವಡೆ ಈ ಚಿತ್ರವು ಸದ್ದು ಮಾಡಿತ್ತು. ಈಗ ಇದೇ ಸಿನಿಮಾದ ನಿರ್ದೇಶಕರಾದ ಆಕಾಶ್ ಶ್ರೀವತ್ಸ ರವರೊಂದಿಗೆ ರಮೇಶ್ ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ರಮೇಶ್ ಅರವಿಂದ ಅವರ 106ನೇ ಕನ್ನಡ ಸಿನಿಮಾ. ಮೊನ್ನೆಯಷ್ಟೇ ನಡೆದ ಇವರ ಹುಟ್ಟಿದ ಹಬ್ಬದಂದು ಫ್ಯಾನ್ ಎಲ್ಲರೂ ಸೇರಿ 'ದೈಜಿ' ಹೆಸರಿನ ದೊಡ್ಡ ಕೇಕ್ ತರಿಸಿ ನಟ ರಮೇಶ್‌ಗೆ ಸರ್ಪ್ರೈಸ್ ಪಾರ್ಟಿ ಕೊಟ್ಟು ಸಂಭ್ರಮವನ್ನು ಆಚರಿಸಿದ್ದಾರೆ.
ನಿರ್ದೇಶಕ ಆಕಾಶ್ ಶ್ರೀವತ್ಸರವರು ಚಿತ್ರವನ್ನು ರವಿ ಕಶ್ಯಪ್‌ರವರ ನಿಜ ಜೀವನದ ಕಥೆಯನ್ನು ಆಧರಿಸಿ ನಿರ್ದೇಶಸಲಿದ್ದಾರೆ. ಇದಕ್ಕೆ ರವಿ ಕಶ್ಯಪ್‌ರವರ ಬೆಂಬಲವೂ ಸಾಕಷ್ಟಿದೆ. 'ರವಿ ಕಶ್ಯಪ್ ಮತ್ತು ಅವರ ಹೆಂಡತಿ ವಿದೇಶದಲ್ಲಿ ವಾಸಿಸುತ್ತಿದ್ದರು. ದಂಪತಿಗಳಿಬ್ಬರು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾಗ ಅವರು ವಿಚಿತ್ರ ಘಟನೆಗಳನ್ನು ಅನುಭವಿಸಲು ಪ್ರಾರಂಭಿಸಿದರು. ಈ ಘಟನೆಗಳನ್ನು ಬೇರೆಯವರು ನಂಬಲು ಅಸಾಧ್ಯವಾಗಿತ್ತು. ಆದರೆ ಇಂದಿಗೂ ಅವರು ಆ ಸಮಯದಲ್ಲಿ ಕಂಡಂತಹ ಘಟನೆಗಳು ಅವರಿಗಷ್ಟೇ ತಿಳಿದಿದೆ. ನಮ್ಮ ನಿಜ ಜೀವನದಲ್ಲಿ ನಾವು ಎಲ್ಲವನ್ನೂ ವಿಜ್ಞಾನದ ದೃಷ್ಟಿಯಲ್ಲಿ ನೋಡುತ್ತೇವೆ, ಆದರೆ ಅದು ಬರೀ ನಮ್ಮ ಅನುಭವಕ್ಕೆ ಬಂದಾಗ ಮಾತ್ರ ನಮಗೆ ಅದರ ಅರಿವಾಗುವುದು. ಈ ಚಿತ್ರದಲ್ಲಿ ಮೂಲತ: ಅದೇ ಸಂದರ್ಭಗಳನ್ನು ಆಧರಿಸಿಲಾಗಿದೆ ಎಂದು ನಟ ರಮೇಶ ಅರವಿಂದ್ ರವರು ಚಿತ್ರದ ಕುರಿತು ಪ್ರೇಕ್ಷಕರಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications











