For Quick Alerts
  ALLOW NOTIFICATIONS  
  For Daily Alerts

  ಕಾಲೇಜು ಸ್ನೇಹಿತರ ಜೊತೆ ಫಸ್ಟ್ ಡೇ ಫಸ್ಟ್ ಶೋ ನೋಡಿದ ನೆನಪು ಹಂಚಿಕೊಂಡ ರಮೇಶ್ ಅರವಿಂದ್

  |

  ಚಿತ್ರರಂಗದಲ್ಲಿ 30 ವರ್ಷಗಳನ್ನು ಪೂರೈಸಿದರೂ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸುವ ನಟ ರಮೇಶ್ ಅರವಿಂದ್. ಕನ್ನಡದಲ್ಲಿ 100ಕ್ಕು ಸಿನಿಮಾಗಳಲ್ಲಿ ನಟಿಸಿರುವ ರಮೇಶ್ ಅರವಿಂದ್, ಸುಂದರ ಸ್ವಪ್ನಗಳು ಸಿನಿಮಾದ ಮೂಲಕ ಕನ್ನಡ ಸಿನಿಮಾ ಪ್ರಿಯರ ಮುಂದೆ ಬಂದಿದ್ದಾರೆ.

  ಸದ್ಯ 100 ಸಿನಿಮಾದಲ್ಲಿ ರಮೇಶ್ ಅರವಿಂದ್ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್ ವುಡ್ ನ ತ್ಯಾಗರಾಜ ಎಂದೇ ಖ್ಯಾತಿಗಳಿಸಿರುವ ರಮೇಶ್ ಅರವಿಂದ್ ಅದ್ಭುತ ಕಲಾವಿದ ಜೊತೆಗೆ ಉತ್ತಮ ತಂತ್ರಜ್ಞ ಕೂಡ ಹೌದು. ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶಕನಾಗಿಯೂ ಸೈ ಎನಿಸಿಕೊಂಡಿದ್ದಾರೆ. ಮುಂದೆ ಓದಿ..

  ಶಂಕರ್ ನಾಗ್ ಅವರ ವಿಶೇಷ ಗುಣವನ್ನು ನೆನಪಿಸಿಕೊಂಡ ನಟ ರಮೇಶ್ ಅರವಿಂದ್ಶಂಕರ್ ನಾಗ್ ಅವರ ವಿಶೇಷ ಗುಣವನ್ನು ನೆನಪಿಸಿಕೊಂಡ ನಟ ರಮೇಶ್ ಅರವಿಂದ್

  ರಮೇಶ್ ಅರವಿಂದ್ 'ಸುಂದರ ಸ್ವಪ್ನಗಳು' ಸಿನಿಮಾದ ನೆನಪು

  ರಮೇಶ್ ಅರವಿಂದ್ 'ಸುಂದರ ಸ್ವಪ್ನಗಳು' ಸಿನಿಮಾದ ನೆನಪು

  ನಟ ರಮೇಶ್ ಅರವಿಂದ್ ಕಾಲೇಜಿನಲ್ಲಿ ಓದುತ್ತಿರುವಾಗಲೆ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆಯುತ್ತಾರೆ. ಮೆಕಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದ ರಮೇಶ್ ಅರವಿಂದ್ 'ಸುಂದರ ಸ್ವಪ್ನಗಳು' ಸಿನಿಮಾದಲ್ಲಿ ನಾಯಕನಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಹ್ಯಾಂಡ್ ಸಮ್ ಆಗಿದ್ದ ರಮೇಶ್ ಅರವಿಂದ್ ನನ್ನು ನೋಡಿದ ನಿರ್ದೇಶಕ ಕೆ.ಬಾಲಚಂದರ್ ತಮ್ಮ ಸಿನಿಮಾಗೆ ಇವರೇ ನಾಯಕನಾಗಬೇಕೆಂದು ಸುಂದರ ಸ್ವಪ್ನಗಳು ಸಿನಿಮಾಗೆ ಆಯ್ಕೆ ಮಾಡುತ್ತಾರೆ.

  ಫಸ್ಟ್ ಡೇ ಫಸ್ಟ್ ಶೋ ನೋಡಿದ ನೆನಪು ಹಂಚಿಕೊಂಡ ನಟ

  ಫಸ್ಟ್ ಡೇ ಫಸ್ಟ್ ಶೋ ನೋಡಿದ ನೆನಪು ಹಂಚಿಕೊಂಡ ನಟ

  ಅಲ್ಲಿಂದ ಪ್ರಾರಂಭವಾದ ರಮೇಶ್ ಅರವಿಂದ್ ಸಿನಿ ಪಯಣ ಇದೀಗ ಸೆಂಚುರಿ ದಾಟಿ ಮುನ್ನುಗ್ಗುತ್ತಿದೆ. ಈ ಸಮಯದಲ್ಲಿ ರಮೇಶ್ ಅರವಿಂದ್ ತನ್ನ ಮೊದಲ ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ನೋಡಿದ ನೆನಪನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಕಾಲೇಜು ಸ್ನೇಹಿತರೆನ್ನೆಲ್ಲ ಚಿತ್ರಮಂದಿರಕ್ಕೆ ಕರೆದುಕೊಂಡು ಹೋಗಿ, ಸ್ನೇಹಿತರ ಜೊತೆ ತಾನು ಅಭಿನಯದ ಮೊದಲ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.

  ಇಂಜಿನಿಯರ್ಸ್ ಡೇ: ಕನ್ನಡ ಇಂಡಸ್ಟ್ರಿಯಲ್ಲಿ ಯಾರೆಲ್ಲಾ ಇಂಜಿನಿಯರ್ಸ್ ಇದ್ದಾರೆ?ಇಂಜಿನಿಯರ್ಸ್ ಡೇ: ಕನ್ನಡ ಇಂಡಸ್ಟ್ರಿಯಲ್ಲಿ ಯಾರೆಲ್ಲಾ ಇಂಜಿನಿಯರ್ಸ್ ಇದ್ದಾರೆ?

  ಮೆಕಾನಿಕಲ್ ಇಂಜಿನಿಯರಿಂಗ್ ಸ್ನೇಹಿತರ ಜೊತೆ ರಮೇಶ್

  ಮೆಕಾನಿಕಲ್ ಇಂಜಿನಿಯರಿಂಗ್ ಸ್ನೇಹಿತರ ಜೊತೆ ರಮೇಶ್

  ಸಿನಿಮಾ ನೋಡಿ ಹೊರಬಂದ ಬಳಿಕ ಚಿತ್ರಮಂದಿರದ ಮುಂಭಾಗದಲ್ಲಿ ಸ್ನೇಹಿತರ ಗ್ಯಾಂಗ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಇದೀಗ ಶೇರ್ ಮಾಡಿದ್ದಾರೆ. ಸುಮಾರು 34 ವರ್ಷಗಳ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ. ಸ್ನೇಹಿತರೆಲ್ಲ ರಮೇಶ್ ಅರವಿಂದ್ ಅವರಿಗೆ ಹೂವಿನ ಹಾರಹಾಕಿ ಸಂಭ್ರಮಿಸಿದ್ದಾರೆ.

  ರಮೇಶ್ ಅರವಿಂದ್ ಟ್ವೀಟ್

  ರಮೇಶ್ ಅರವಿಂದ್ ಟ್ವೀಟ್

  ಪೋಟೋ ಜೊತೆಗೆ ರಮೇಶ್ ಅರವಿಂದ್ 'ನನ್ನ ಮೊದಲ ಸಿನಿಮಾ, ಶುಕ್ರವಾರ, ಮೊದಲ ಶೋ ಕಾಲೇಜು ಗ್ಯಾಂಗ್ ಜೊತೆ. ಸಿನಿಮಾ ಬಳಿಕ ಮೆಕಾನಿಕಲ್ ಇಂಜಿನಿಯರಿಂಗ್ ತರಗತಿ ಸ್ನೇಹಿತರ ಜೊತೆಗಿನ ಹಳೆಯ ನೆನಪು' ಎಂದು ಬರೆದುಕೊಂಡಿದ್ದಾರೆ.

  3 ಜನ ಒಳ್ಳೆ ಗ್ಲಾಮರ್ ಎಂದು ಕಾಲೆಳೆದ Upendra | Filmibeat Kannada
  ರಮೇಶ್ ಬಣ್ಣಹಚ್ಚಿದ ಮೊದಲ ಸಿನಿಮಾ ಮೌನ ಗೀತೆ

  ರಮೇಶ್ ಬಣ್ಣಹಚ್ಚಿದ ಮೊದಲ ಸಿನಿಮಾ ಮೌನ ಗೀತೆ

  ರಮೇಶ್ ಅರವಿಂದ್ ಮೊದಲು ಬಣ್ಣ ಹಚ್ಚಿದ್ದು, ಮೌನ ಗೀತೆ ಸಿನಿಮಾವಾದರೂ, ಮೊದಲು ರಿಲೀಸ್ ಆಗಿದ್ದು, ಸುಂದರ ಸ್ವಪ್ನಗಳು ಸಿನಿಮಾ. ಇದೀಗ ಹಳೆ ಫೋಟೋ ಶೇರ್ ಮಾಡಿ ಸುಂದರ ಸ್ವಪ್ನಗಳನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.

  English summary
  Kannada Actor Ramesh Aravind Remembers of watching the first movie of his with friends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X