For Quick Alerts
  ALLOW NOTIFICATIONS  
  For Daily Alerts

  ಶಂಕರ್ ನಾಗ್ ಅವರ ವಿಶೇಷ ಗುಣವನ್ನು ನೆನಪಿಸಿಕೊಂಡ ನಟ ರಮೇಶ್ ಅರವಿಂದ್

  |

  ಪ್ರತಿಭಾವಂತ ನಟ, ನಿರ್ದೇಶಕ, ತಂತ್ರಜ್ಞ ಮತ್ತು ಹೊಸ ಚಿಂತನೆಗಳ ಹರಿಕಾರ ಆಟೋರಾಜ ಶಂಕರ್ ನಾಗ್ ಅವರಿಗೆ 66ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಕನ್ನಡ ಸಿನಿಮಾರಂಗದ ಮರೆಯಲಾಗದ ಮಾಣಿಕ್ಯ, ಜೀವನೋತ್ಸಾಹಿ, ಕರಾಟೆ ಕಿಂಗ್ ಶಂಕರ್ ನಾಗ್ ನನ್ನು ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸ್ಮರಿಸುತ್ತಿದ್ದಾರೆ.

  ಶಂಕರ್ ನಾಗ್ ಕಣ್ಮರೆಯಾಗಿ 3 ದಶಕಗಳೇ ಕಳೆದಿವೆ. ಆದರೆ ಕನ್ನಡಿಗರಲ್ಲಿ ಹೆಮ್ಮೆಯ ಶಂಕ್ರಣ್ಣನ ನೆನಪು ಇನ್ನೂ ಹಸಿರಾಗೆ ಇದೆ. ಅಲ್ಪಾವಧಿಯಲ್ಲೇ ಅದ್ಭುತ ಸಿನಿಮಾಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿರುವ ಶಂಕರ್ ನನ್ನು ಅನೇಕ ಗಣ್ಯರು ನೆನಪಿಸಿಕೊಂಡಿದ್ದಾರೆ.

  ಶಂಕರ್ ನಾಗ್ ಹುಟ್ಟುಹಬ್ಬ: 'ಆಟೋರಾಜ'ನನ್ನು ಸ್ಮರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ಶಂಕರ್ ನಾಗ್ ಹುಟ್ಟುಹಬ್ಬ: 'ಆಟೋರಾಜ'ನನ್ನು ಸ್ಮರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

  ಸಿನಿ ಗಣ್ಯರಾದ ದರ್ಶನ್, ಸುದೀಪ್, ಧನಂಜಯ್, ಜಗ್ಗೇಶ್, ರಚಿತಾ ರಾಮ್ ಮತ್ತು ರಮೇಶ್ ಅರವಿಂದ್ ಸೇರಿದಂತೆ ಅನೇಕರು 66ನೇ ಜನ್ಮದಿನದ ಸಮಯದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ. ಕರಾಟೆ ಕಿಂಗ್ ನನ್ನು ನಟ ರಮೇಶ್ ಅರವಿಂದ್ ವಿಶೇಷವಾಗಿ ಸ್ಮರಿಸಿದ್ದಾರೆ.

  ಪುಂಡ ಪ್ರಪಂಚ ಸಿನಿಮಾದ ಫೋಟೋವನ್ನು ಶೇರ್ ಮಾಡಿ, ಶಂಕರ್ ನಾಗ್ ಕಾರ್ಯ ವೈಖರಿಯನ್ನು ಗುಣಗಾನ ಮಾಡಿದ್ದಾರೆ. 'ಗಾಸಿಪ್ ಗಳನ್ನು ಮಾಡುತ್ತ ಸಮಯವನ್ನು ಯಾಕೆ ವ್ಯರ್ಥ ಮಾಡಬೇಕು? ಶಂಕರ್ ಯಾವಾಗಲು ಚಿತ್ರೀಕರಣದ ನಡುವೆ ಪದಬಂಧ ಬಿಡಿಸುತ್ತಿದ್ದರು. ಶಂಕರ್ ನಾಗ್ ಪ್ರೀತಿಯ ನೆನಪು.' ಎಂದು ಬರೆದುಕೊಂಡಿದ್ದಾರೆ.

  ಮತ್ತೆ ಬರಲಿದೆ ಧ್ರುವ ಸರ್ಜಾ, ಚಂದನ್ ಶೆಟ್ಟಿ ಕಾಂಬಿನೇಶನ್ ಹಾಡು | Chandan Shetty | Dubari | Dhruvasarja

  ಸಿನಿಮಾ ಗಣ್ಯರು ಮಾತ್ರವಲ್ಲದೆ ರಾಜಕೀಯ ವ್ಯಕ್ತಿಗಳು ಸಹ ಶಂಕರ್ ನಾಗ್ ನನ್ನು ಸ್ಮರಿಸಿದ್ದಾರೆ. ನಟ ಸುದೀಪ್ ಟ್ವೀಟ್ ಮಾಡಿ ಎಲ್ಲರಿಗೂ ಹೀರೋ ಶಂಕರ್ ಎಂದು ಬರೆದು ಕೊಂಡಿದ್ದಾರೆ. ಇನ್ನೂ ದರ್ಶನ್ ಟ್ವೀಟ್ ಮಾಡಿ ' ನಿಜವಾದ ಲೆಜೆಂಡ್ ಗೆ ಎಂದಿಗೂ ಸಾವಿಲ್ಲ. ಅವರು ನೆನಪು ಯಾವಾಗಲು ಕನ್ನಡಿಗರ ಹೃದಯದಲ್ಲಿ ಹಸಿರಾಗೆ ಉಳಿದಿರುತ್ತೆ. ನಿಮ್ಮನ್ನು ಯಾವಾಗಲು ಮಿಸ್ ಮಾಡಿಕೊಳ್ಳುತ್ತೇವೆ. ಹುಟ್ಟುಹಬ್ಬದ ಶುಭಾಶಯಗಳು ಶಂಕ್ರಣ್ಣ' ಎಂದು ಟ್ವೀಟ್ ಮಾಡಿದ್ದಾರೆ.

  English summary
  Shankar Nag Birth Anniversary: Kannada Actor Ramesh Aravind remember the legendary actor Shankar nag.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X