For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಇಚ್ಛಿಸುವವರಿಗೆ ಮೊಬೈಲ್ ನಂಬರ್ ಕೊಟ್ಟ ನಟ ರಮೇಶ್!

  |

  ಸಿನಿಮಾ ನಟರ ಹುಟ್ಟುಹಬ್ಬ ಬಂತೆಂದರೆ ಸಾಕು ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಕೆಲ ಅಭಿಮಾನಿಗಳು ಆಫ್‌ ಲೈನ್ ಹುಟ್ಟಹಬ್ಬವನ್ನು ಆಚರಿಸಿದ್ರೆ, ಇನ್ನೂ ಕೆಲ ಅಭಿಮಾನಿಗಳು ಆನ್‌ಲೈನ್‌ನಲ್ಲಿ ಟ್ರೆಂಡಿಂಗ್ ಮಾಡುತ್ತಾ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಾರೆ.

  ಇನ್ನು ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮನೆ ಮುಂದೆ ಮಧ್ಯರಾತ್ರಿಯಿಂದಲೇ ಜಮಾಯಿಸಿ ಬಿಡ್ತಾರೆ. ಹೀಗೆ ವಿಭಿನ್ನ ರೀತಿಯಲ್ಲಿ ಹುಟ್ಟಹಬ್ಬವನ್ನು ಆಚರಿಸುವ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಕಲಾವಿದರನ್ನು ನೇರವಾಗಿ ಭೇಟಿ ಮಾಡಿ ಹುಟ್ಟುಹಬ್ಬದ ದಿನದಂದು ಶುಭಕೋರಬೇಕು ಅಥವಾ ಆ ವಿಶೇಷ ದಿನದಂದು ತಮ್ಮ ನೆಚ್ಚಿನ ನಟನೊಡನೆ ಮೊಬೈಲ್ ಮೂಲಕವಾದರೂ ಮಾತನಾಡಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ. ಇಂಥಹ ಇಚ್ಛೆ ಇರುವ ತಮ್ಮ ಅಭಿಮಾನಿಗಳಿಗೆ ನಟ ರಮೇಶ್ ಅರವಿಂದ್ ಒಂದೊಳ್ಳೆ ಅವಕಾಶವನ್ನು ಕಲ್ಪಿಸಿದ್ದು, ರಮೇಶ್ ಅರವಿಂದ್ ಅಭಿಮಾನಿಗಳಿಗೆ ನಂಬರ್ ನೀಡಿದ್ದಾರೆ.

  ಸದ್ಯ ಶಿವಾಜಿ ಸೂರತ್ಕಲ್ ಎರಡನೇ ಭಾಗದ ಚಿತ್ರೀಕರಣದಲ್ಲಿ ನಿರತರಾಗಿರುವ ನಟ ರಮೇಶ್ ಅರವಿಂದ್ ನಾಳೆ ( ಸೆಪ್ಟೆಂಬರ್ 10 ) 59ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಸಲುವಾಗಿ ರಮೇಶ್ ಅರವಿಂದ್ ತಮ್ಮ ಅಭಿಮಾನಿಗಳಿಗೆ ನಂಬರ್ ನೀಡಿದ್ದು, ಹೊಸ ಟ್ರೆಂಡ್ ಒಂದಕ್ಕೆ ನಾಂದಿ ಹಾಡಲು ಮುಂದಾಗಿದ್ದಾರೆ.

  ರಮೇಶ್ ಅವರಿಗೆ ವಿಶ್ ಮಾಡಲು ಹೀಗೆ ಮಾಡಿ

  ರಮೇಶ್ ಅವರಿಗೆ ವಿಶ್ ಮಾಡಲು ಹೀಗೆ ಮಾಡಿ

  ತಮ್ಮ ಹುಟ್ಟುಹಬ್ಬದಂದು ತಮಗೆ ವಿಶ್ ಮಾಡಲು ಇಚ್ಛಿಸುವ ಅಭಿಮಾನಿಗಳಿಗಾಗಿ ರಮೇಶ್ ಅರವಿಂದ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಪೋಸ್ಟ್ ಮಾಡಿ ನಂಬರ್ ನೀಡಿದ್ದಾರೆ. 'ಈ ಸ್ಟೋರಿಯಲ್ಲಿ ರಮೇಶ್ ಅವರಿಗೆ ಹುಟ್ಟುಹಬ್ಬದಂದು ಅವರಿಗೆ ಶುಭಾಶಯ ಕೋರಲು ಇಚ್ಛಿಸುತ್ತೀರಾ? ಹಾಗಾದರೆ ಈ ನಂಬರ್‌ಗಳಿಗೆ ನಿಮ್ಮ ಸಂದೇಶವನ್ನು ಕಳುಹಿಸಿ' ಎಂದು ಬರೆದಿದೆ. ಇನ್ನು ರಮೇಶ್ ಹುಟ್ಟುಹಬ್ಬಕ್ಕೆ ಶುಭಕೋರಲು ಇಷ್ಟ ಇರುವವರು 8951599009 ಮತ್ತು 8951699009 ಈ ಎರಡು ನಂಬರ್‌ಗಳಲ್ಲಿ ಯಾವುದಾದರೂ ಒಂದು ನಂಬರ್‌ಗೆ ಸಂದೇಶವನ್ನು ಕಳುಹಿಸಬಹುದಾಗಿದೆ ಹಾಗೂ ಸಂದೇಶ ಕಳುಹಿಸುವ ಅಭಿಮಾನಿಗಳು ತಮ್ಮ ಹೆಸರು ಹಾಗೂ ಜಿಲ್ಲೆಯ ಹೆಸರನ್ನೂ ಸೇರಿಸಿ ಕಳುಹಿಸಿ ಎಂದು ಕೋರಲಾಗಿದೆ.

  ಹುಟ್ಟುಹಬ್ಬದ ಅಂಗವಾಗಿ ಶಿವಾಜಿ ಸೂರತ್ಕಲ್ 2 ಟೀಸರ್

  ಹುಟ್ಟುಹಬ್ಬದ ಅಂಗವಾಗಿ ಶಿವಾಜಿ ಸೂರತ್ಕಲ್ 2 ಟೀಸರ್

  ಇನ್ನು ರಮೇಶ್ ಅರವಿಂದ್ ಹುಟ್ಟುಹಬ್ಬದ ಅಂಗವಾಗಿ ನಾಳೆ ( ಸೆಪ್ಟೆಂಬರ್ 10 ) ಬೆಳಗ್ಗೆ 10 ಗಂಟೆಗೆ ಶಿವಾಜಿ ಸೂರತ್ಕಲ್ 2 ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ. 2020ರಲ್ಲಿ ಬಿಡುಗಡೆಯಾಗಿದ್ದ ಶಿವಾಜಿ ಸೂರತ್ಕಲ್ ದಿ ಕೇಸ್ ಆಫ್ ರಣಗಿರಿ ರಹಸ್ಯ ಹಿಟ್ ಆದ ಕಾರಣ ಇದೀಗ ಎರಡನೇ ಭಾಗವನ್ನು ನಿರ್ಮಿಸಲಾಗುತ್ತಿದ್ದು, ಇದೂ ಸಹ ಸಸ್ಪೆನ್ಸ್ ಥ್ರಿಲ್ಲರ್ ಆಗಿರಲಿದೆ.

  140ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

  140ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

  ನಟ ರಮೇಶ್ 1986ರಲ್ಲಿ ತೆರೆಕಂಡ ಸುಂದರ ಸ್ವಪ್ನಗಳು ಎಂಬ ಕನ್ನಡ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ನಂತರ ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ತುಳು ಸಿನಿಮಾಗಳಲ್ಲಿ ರಮೇಶ್ ಅರವಿಂದ್ ಬಣ್ಣ ಹಚ್ಚಿದ್ದಾರೆ. ಈ ಎಲ್ಲಾ ಭಾಷೆಗಳೂ ಸೇರಿದಂತೆ 140ಕ್ಕೂ ಹೆಚ್ಚು ಚಿತ್ರಗಳಲ್ಲಿ ರಮೇಶ್ ಅರವಿಂದ್ ನಟಿಸಿದ್ದಾರೆ.

  English summary
  Ramesh Aravind shares mobile number with fans who like to wish him on his birthday. Take a look
  Friday, September 9, 2022, 19:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X