twitter
    For Quick Alerts
    ALLOW NOTIFICATIONS  
    For Daily Alerts

    '100' ಸಿನಿಮಾ ನೋಡುವಂತೆ ಗೃಹ ಸಚಿವರಿಗೆ ರಮೇಶ್ ಅರವಿಂದ ಮನವಿ

    |

    ಕನ್ನಡದ ಸಿನಿಮಾಗಳು ಈಗ ಸಾಲು ಸಾಲಾಗಿ ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಳ್ಳುತ್ತಿವೆ. ಒಂದಷ್ಟು ಸಿನಿಮಾಗಳು ಒಟಿಟಿ ಕದ ತಟ್ಟುತ್ತಿದ್ದರೆ, ಮತ್ತೊಂದಷ್ಟು ಸಿನಿಮಾಗಳು ಥಿಯೇಟರ್ ಅಂಗಳಕ್ಕೆ ಬರುತ್ತಿವೆ. ಈ ತಿಂಗಳು ಕೂಡ ಬರೋಬ್ಬರಿ 12 ಸಿನಿಮಾಗಳು ರಿಲೀಸ್ ಆಗುತ್ತಿದ್ದು ಅದರಲ್ಲಿ ಒಂದು ರಮೇಶ್ ಅರವಿಂದ ನಟನೆಯ '100' ಸಿನಿಮಾ.

    ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿದ್ದು ನವೆಂಬರ್ 19ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ. ಇದೇ ಖುಷಿಯಲ್ಲಿರೋ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದ್ದು, ಗಣ್ಯರನ್ನು ಭೇಟಿ ಮಾಡಿ ಚಿತ್ರಕ್ಕೆ ಆಹ್ವಾನಿಸುತ್ತಿದ್ದಾರೆ. ಸದ್ಯ ಚಿತ್ರತಂಡ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿದೆ. ಈ ಸಂದರ್ಭದಲ್ಲಿ ಚಿತ್ರತಂಡ ಸಚಿವ ಅರಗ ಜ್ಞಾನೇಂದ್ರ ಅವರ ಬಳಿ ಕೆಲ ಹೊತ್ತು ಮಾತುಕಥೆ ನಡೆಸಿದ್ದು, ಹೂಗುಚ್ಚ ನೀಡಿ ಸಿನಿಮಾ ನೋಡಲು ಆಹ್ವಾನ ನೀಡಿದ್ದಾರೆ. ಸ್ವತಃ ರಮೇಶ್ ಅರವಿಂದ್ ನಿರ್ದೇಶಿಸಿ ನಟಿಸಿರೋ ಈ ಸಿನಿಮಾ ಫ್ಯಾಮಿಲಿ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ಚಿತ್ರದ ಬಗ್ಗೆ ಸಚಿವ ಅರಗ ಜ್ಞಾನೇಂದ್ರ ಅವರ ಬಳಿ ತಿಳಿಸಿದಾಗ ತುಂಬ ಖುಷಿ ಪಟ್ಟಿದ್ದಾರೆ. ಹಾಗೇ ಸಮಯ ಸಿಕ್ಕಾಗ ಸಿನಿಮಾವನ್ನು ಖಂಡಿತಾ ನೋಡುವುದುಗಿ ತಿಳಿಸಿದ್ದಾರೆ ಎಂದು ಚಿತ್ರತಂಡ ಹೇಳಿದೆ.

    ಸಾಮಾಜಿಕ ಜಾಲತಾಣಗಳ ಮೂಲಕ ಕುಟುಂಬಕ್ಕೆ ಆಗುತ್ತಿರುವ ಸಮಸ್ಯೆಯನ್ನು ತೋರಿಸುವ ಪ್ರಯತ್ನ ಈ ಚಿತ್ರದ್ದಾಗಿದ್ದು, ಸೋಶಿಯಲ್ ಮೀಡಿಯಾಗಳು ಒಬ್ಬ ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತೆ, ಅದು ಆತನನ್ನು ಹೇಗೆ ಬದಲಾಯಿಸುತ್ತೆ, ಇದರಿಂದ ಕುಟುಂಬದಲ್ಲಿ ಬಿರುಕು ಬೀಳೋದು ಹೇಗೆ ಇದೆಲ್ಲ ಅಂಶವನ್ನು ಚಿತ್ರ ಒಳಗೊಂಡಿದೆ. ಇದರಿಂದ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ತಂಡ ಮಾಡಿದೆ. ನವೆಂಬರ್ 19ಕ್ಕೆ ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದ್ದು, ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

     Ramesh Aravind starrer 100 movie team meet home minister Araga Jnanendra

    ಸಿನಿಮಾ ರಿಲೀಸ್ ಬಗ್ಗೆ ಇತ್ತೀಚೆಗೆ ಸುದ್ದಿಗೋಷ್ಠಿ ಮಾಡಿದ್ದ ನಟ ರಮೇಶ್ ಅರವಿಂದ, "ಚಿತ್ರರಂಗದಲ್ಲಿ ಬೇರೆ ಬೇರೆ ಚಟುವಟಿಕೆಗಳು ನಡೆಯುತ್ತವೆ. ವಾಚ್ ನೋಡಿದಾಗ ಒಂದು ಮುಳ್ಳಿನಿಂದ ಮತ್ತೊಂದು ಮುಳ್ಳಿಗೆ ಹೇಗೆ ಹೋಗುತ್ತದೆಯೋ ಅದೇ ರೀತಿಯಲ್ಲಿ ಚಿತ್ರರಂಗ ಇದೆ. ಕೊರೊನಾ ಬಂದಾಗ ಇಡೀ ಚಿತ್ರರಂಗವೇ ನಿಂತು ಹೋಯ್ತು. ಆಗ ಥಿಯೇಟರ್ ಬಾಗಿಲು ತೆರೆಯಲಿಲ್ಲ. ನಟರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಸಮಸ್ಯೆ ಅನುಭವಿಸಿದರು. ಅಭಿಮಾನಿಗಳು ಥಿಯೇಟರ್ ಗೆ ಬಂದು ಚಿತ್ರ ನೋಡಿದಾಗ ಮಾತ್ರ ನಿರ್ಮಾಪಕರಿಗೆ ಲಾಭ ಆಗುತ್ತದೆ. ಎಲ್ಲವೂ ಸರಾಗವಾಗಿ ನಡೆಯುತ್ತದೆ. ಟಿಕೆಟ್ ಸೇಲ್ ಆಗದಿದ್ದರೆ ಹಾಕಿದ ಬಂಡವಾಳವೂ ಬರುವುದಿಲ್ಲ" ಎಂದು ಹೇಳಿದ್ದಾರೆ.

     Ramesh Aravind starrer 100 movie team meet home minister Araga Jnanendra

    ಇದೇ ಸಂದರ್ಭದಲ್ಲಿ '100' ಚಿತ್ರದ ಬಗ್ಗೆ ಮಾತನಾಡಿದ ರಮೇಶ್ ಅರವಿಂದ್ "ಶಿವಾಜಿ ಸುರತ್ಕಲ್ ಸಿನಿಮಾ ಹಿಟ್ ಆಗಿದ್ದು ಖುಷಿ ತಂದಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ಬಂತು. ಅದೇ ರೀತಿಯ ಸಸ್ಪೆನ್ಸ್, ಥ್ರಿಲ್ಲರ್ '100' ಚಿತ್ರದಲ್ಲಿಯೂ ಇದೆ. ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ಹೆಂಡತಿಯನ್ನು ಕಳೆದುಕೊಂಡು ನಾಯಕ ಡಿಪ್ರೆಷನ್‌ಗೆ ಹೋಗಿರುತ್ತಾನೆ. ಈ ಸಿನಿಮಾದಲ್ಲಿ ಹಾಗಿಲ್ಲ. ತುಂಬು ಕುಟುಂಬ ಇರುತ್ತೆ. ಹೆಂಡತಿ ಹಾಗೂ ಮಗು ಸಹ ಇದ್ದು, ಇದು ಪಕ್ಕಾ ಫ್ಯಾಮಿಲಿ ಎಂಟ್ರಟೈನ್ಮೆಂಟ್ ಕೂಡ ಇದೆ ಎಂದು ಹೇಳಿದ ಅವರು, ಈ ಸಿನಿಮಾದಲ್ಲಿ ಅರ್ಧ ಭಾಗ ನೈಜ ಕಥೆ ಆಧಾರಿತವಾದದ್ದು. ನನ್ನ ಸ್ನೇಹಿತನಿಗೆ ಆದ ಅನಾಹುತವನ್ನು ಸಿನಿಮಾದಲ್ಲಿ ಚಾಚೂ ತಪ್ಪದೇ ತರಲಾಗಿದೆ ಎಂದು ವಿವರಿಸಿದರು.

     Ramesh Aravind starrer 100 movie team meet home minister Araga Jnanendra

    ಹೀಗೆ ಸಾಕಷ್ಟು ಕುತೂಹಲ ಮೂಡಿಸಿರೋ '100' ಚಿತ್ರ ರಿಲೀಸ್‌ಗೆ ಸಜ್ಜಾಗುತ್ತಿದ್ದು ಪ್ರೇಕ್ಷಕರಿಂದ ಹೇಗೆ ರೆಸ್ಪಾನ್ಸ್ ಪಡೆದುಕೊಳ್ಳುತ್ತೆ ಎಂಬುದನ್ನು ಕಾದುನೋಡಬೇಕಿದೆ.

    English summary
    Ramesh Aravind and his 100 movie team meets home minister Araga Jnanendra and invited him to watch 100 movie.
    Thursday, November 11, 2021, 21:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X