For Quick Alerts
  ALLOW NOTIFICATIONS  
  For Daily Alerts

  ಶಿವಾಜಿ ಸುರತ್ಕಲ್‌ ಪಾರ್ಟ್‌ 2ಗೆ ಸಜ್ಜಾದ ಸ್ಯಾಂಡಲ್‌ವುಡ್ ತ್ಯಾಗರಾಜ

  |

  'ಶಿವಾಜಿ ಸುರತ್ಕಲ್' ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲ ಸೃಷ್ಟಿಸಿದ್ದ ಸಿನಿಮಾ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನೋಡಿ ಪ್ರೇಕ್ಷಕರು ಹಿರಿಹಿರಿ ಹಿಗ್ಗಿದ್ದರು. ರಮೇಶ್ ಅರವಿಂದ್ ಡಿಟೆಕ್ಟಿವ್ ರೋಲ್‌ನಲ್ಲಿ ರಮೇಶ್ ಅರವಿಂದ್ ಮಿಂಚಿದ್ದರು. ಈ ಸಿನಿಮಾ ಭಾರತ ಟೀಂ ಇಂಡಿಯಾದ ಕ್ರಿಕೆಟ್ ಹೆಡ್ ಕೋಚ್ ರಾಹುಲ್ ದ್ರಾವಿಡ್ ಬಂದು ಸಿನಿಮಾ ನೋಡಿದ್ದರು. ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ ನೋಡಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಅದೇ ಯಶಸ್ಸಿನ ಹುಮ್ಮಸ್ಸಿನಲ್ಲೇ ಪಾರ್ಟ್ ಟು ಸೆಟ್ಟೇರಿದೆ.

  ರಮೇಶ್​ ಅರವಿಂದ್ 'ಶಿವಾಜಿ ಸುರತ್ಕಲ್ 2' ಶೀಘ್ರದಲ್ಲೇ ಆರಂಭ ಆಗುತ್ತೆ ಅನ್ನುವ ಸುಳಿವನ್ನು ಕೆಲವು ದಿನಗಳ ಹಿಂದಷ್ಟೇ ಸುಳಿವು ನೀಡಿತ್ತು. ಈಗ ಆ ಸುಳಿವಿನ ಸೀಕ್ರೆಟ್ ಅನ್ನು ಬಿಟ್ಟು ಕೊಟ್ಟಿದ್ದಾರೆ. ಸದ್ದಿಲ್ಲದೆ 'ಶಿವಾಜಿ ಸೂರತ್ಕಲ್ 2' ಚಿತ್ರದ ಮುಹೂರ್ತವನ್ನು ಮಾಡಿ ಮುಗಿಸಿದೆ ಚಿತ್ರತಂಡ. ಕಲಾವಿದರು, ತಂತ್ರಜ್ಞರು ಈ ಸಿನಿಮಾದ ಮುಹೂರ್ತದಲ್ಲಿ ಈ ತಂಡಕ್ಕೆ ಹೊಸಬರು ಸೇರ್ಪಡೆಯಾಗಿದ್ದಾರೆ.

  'ಶಿವಾಜಿ ಸುರತ್ಕಲ್' ಚಾಪ್ಟರ್ 1

  'ಶಿವಾಜಿ ಸುರತ್ಕಲ್' ಚಾಪ್ಟರ್ 1

  'ಶಿವಾಜಿ ಸುರತ್ಕಲ್' ಚಾಪ್ಟರ್ 1 ನೋಡಿದವರಿಗೆ ರಮೇಶ್ ಅರವಿಂದ್ ಡಿಟೆಕ್ಟಿವ್ ಆಗಿ ನಟಿಸಿದ್ದು ಗೊತ್ತೇ ಇರುತ್ತೆ. ತಮ್ಮ ವೃತ್ತಿ ಬದುಕಿನಲ್ಲಿ ಅಪರೂಪದ ಪಾತ್ರದಲ್ಲಿ ರಮೇಶ್‌ಗೆ ಸಿಕ್ಕಿತ್ತು. ಪ್ರೇಕ್ಷಕರು ಕೂಡ ತ್ಯಾಗರಾಜನ ವಿಶಿಷ್ಟ ಅವತಾರವನ್ನು ನೋಡಿ ಮೆಚ್ಚಿಕೊಂಡಿದ್ದರು. ಈಗ ಚಾಪ್ಟರ್ 2ನಲ್ಲೂ ರಮೇಶ್ ಅರವಿಂದ್ ಡಿಟೆಕ್ಟಿವ್ ಆಗಿಯೇ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ರಮೇಶ್‌ ಅರವಿಂದ್‌ ಜೊತೆ ರಾಧಿಕಾ ನಾರಾಯಣ್‌ , ರಾಘು ರಾಮನಕೊಪ್ಪ, ವಿದ್ಯಾಮೂರ್ತಿ ಸೇರಿದಂತೆ ಕೆಲವು ನಟರು ಚಾಪ್ಟರ್ 2ನಲ್ಲೂ ಮುಂದುವರೆದಿದ್ದಾರೆ.

  ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರ

  ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರ

  'ಶಿವಾಜಿ ಸುರತ್ಕಲ್ 2' ತಂಡವನ್ನು ನಟಿ ಮೇಘನಾ ಗಾಂವ್ಕರ್ ಸೇರಿಕೊಂಡಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ರೈಂ ಬ್ರಾಂಚ್ ಡಿಸಿಪಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ 'ಮಗಳು ಜಾನಕಿ' ಧಾರಾವಾಹಿ ನಟ ರಾಕೇಶ್ ಮಯ್ಯ ಈಗಷ್ಟೇ ಟ್ರೈನಿಂಗ್ ಮುಗಿಸಿ ಕೆಲಸಕ್ಕೆ ಸೇರಿದ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಲಿದ್ದಾರೆ. ಇವರ ಪಾತ್ರಕ್ಕೆ ಹಲವು ಶೇಡ್‌ಗಳಿದ್ದು, ಚಿತ್ರದುದ್ದಕ್ಕೂ ಪ್ರಾಮುಖ್ಯತೆ ವಹಿಸಲಿದೆ ಎಂದು ಚಿತ್ರತಂಡ ಕೇಳಿಕೊಂಡಿದೆ. ಶಿವಾಜಿಯ ಚಾಪ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದಂತೆ ಚಾಪ್ಟರ್ 2ಗೆ ಕಲಾವಿದರ ಸಂಖ್ಯೆಯನ್ನು ಹೆಚ್ಚಿಸಿದೆ.

  ರಫ್ ಅ್ಯಂಡ್ ಟಫ್ ಪೋಲೀಸ್ ಅಧಿಕಾರಿ

  ರಫ್ ಅ್ಯಂಡ್ ಟಫ್ ಪೋಲೀಸ್ ಅಧಿಕಾರಿ

  'ಶಿವಾಜಿ ಸುರತ್ಕಲ್ 2' ತಂಡವನ್ನು ಹೊಸದಾಗಿ ಸೇರಿಕೊಂಡಿರುವ ಮತ್ತೊಬ್ಬ ನಟ ವಿನಾಯಕ್ ಜೋಷಿ. ರಫ್ ಅ್ಯಂಡ್ ಟಫ್ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ವಿನಾಯಕ ಜೋಷಿ ಪ್ರೇಕ್ಷಕರಿಗೆ ಕಿಕ್ ಕೊಡಲಿದ್ದಾರೆ. ಇವರ ಪಾತ್ರವೇ ಶಿವಾಜಿ ಚಿತ್ರದ ಟರ್ನಿಂಗ್ ಪಾಯಿಂಟ್ ಅಂತಿದೆ ಚಿತ್ರತಂಡ. ಇನ್ನೂ ಸಿನಿಮಾ ಸ್ಟೋರಿ, ಸ್ಕ್ರೀನ್ ಪ್ಲೇ ಆಕಾಶ್ ಶ್ರೀವತ್ಸವ್ ಅವರದ್ದು. ಲವ್ ಮಾಕ್ಟೇಲ್ 2 ಚಿತ್ರಕ್ಕೆ ಸಂಗೀತ ನೀಡಿರುವ ನಕುಲ್ ಭಯಂಕರ್ ಈ ಚಿತ್ರಕ್ಕೆ ಟ್ಯೂನ್ ಹಾಕಿದ್ದಾರೆ.

  'ಶಿವಾಜಿ ಸುರತ್ಕಲ್ 2' ಚಿತ್ರದ ಚಿತ್ರೀಕರಣ

  'ಶಿವಾಜಿ ಸುರತ್ಕಲ್ 2' ಚಿತ್ರದ ಚಿತ್ರೀಕರಣ

  'ಶಿವಾಜಿ ಸುರತ್ಕಲ್ 2' ಚಿತ್ರದ ಚಿತ್ರೀಕರಣ ಡಿಸೆಂಬರ್ ತಿಂಗಳಲ್ಲಿ ಆರಂಭ ಆಗುತ್ತಿದೆ. ಸದ್ಯ ಚಿತ್ರದ ಮುಹೂರ್ತ ನಡೆದಿದ್ದು, ಚಿತ್ರೀಕರಣಕ್ಕೆ ಪೂರ್ವ ತಯಾರಿ ನಡೆಸುತ್ತಿದೆ. ಅಂದ ಹಾಗೆ​ 'ಶಿವಾಜಿ ಸುರತ್ಕಲ್​ 2' ರಮೇಶ್ ಅರವಿಂದ್ ನಟನೆಯ 103ನೇ ಚಿತ್ರ. ಶಿವಾಜಿ ಮೊದಲ ಚಾಪ್ಟರ್ ಹಿಟ್ ಆಗುತ್ತಿದ್ದಂತೆ, ಪರಭಾಷೆಗಳಿಂದಲೂ ಬೇಡಿಕೆ ಬಂದಿತ್ತು. ಈಗಾಗಲೇ ಉತ್ತಮ ಮೊತ್ತಕ್ಕೆ ಬೇರೆ ಬೇರೆ ಭಾಷೆಗಳಿಗೆ ಡಬ್ಬಿಂಗ್ ಹಾಗೂ ರಿಮೇಕ್ ಹಕ್ಕುಗಳು ಮಾರಾಟ ಆಗಿವೆ.

  English summary
  Shivaji Surathkal 2 starring Ramesh Aravind new movie muhurtha happened. Radhika Chetan, Meghna Gaonkar director Akash Srivathsa present at the event.
  Friday, November 26, 2021, 10:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X