'ಅಮೃತ ವರ್ಷಿಣಿ'ಗೆ ತುಂಬಿತು 25 ವರ್ಷ!
'ತುಂತುರು', 'ಭಲೇ ಭಲೇ ಚಂದದ ಚೆಂದುಳ್ಳಿ ಹೆಣ್ಣು ನೀನು', 'ಈ ಸುಂದರ ಬೆಳದಿಂದಳ' ಈ ಹಾಡುಗಳ ಈಗಲೂ ನಿಮ್ಮನ್ನು ಬಿಡದೇ ಕಾಡುವಂತಹ ಹಾಡುಗಳಿವು. ಈ ಹಾಡುಗಳು ಯಾವ ಸಿನಿಮಾದ ಹಾಡುಗಳು ಎನ್ನುವುದು ಗೊತ್ತೇ ಇರುತ್ತೆ. ಈಗ ಈ ಬಗ್ಗೆ ಮಾತನಾಡೋಕೆ ಕಾರಣ ಚಿತ್ರ 'ಅಮೃತ ವರ್ಷಿಣಿ'.
1997 ರಲ್ಲಿ ಬಿಡುಗಡೆ ಆದ ಸೂಪರ್ ಹಿಟ್ ಸಿನಿಮಾ 'ಅಮೃತ ವರ್ಷಿಣಿ'. ದಿನೇಶ್ ಬಾಬು ನಿರ್ದೇಶನದ 'ಅಮೃತ ವರ್ಷಿಣಿ' ಹೆಸರು ಕೇಳಿದ ಕೂಡಲೆ ಥಟ್ ಅಂತ ನೆನಪಾಗುವುದೇ ಈ ಹಾಡುಗಳು, ಹಾಡುಗಳು ನೆನಪಾಗುತ್ತಲೇ ನೀವೂ ಕೂಡ ಗುನುಗಲೂ ಆರಂಭಿಸುತ್ತೀರಿ. ಅಷ್ಟರ ಮಟ್ಟಿಗೆ 'ಅಮೃತ ವರ್ಷಿಣಿ' ಚಿತ್ರದ ಹಾಡುಗಳು ಸಿನಿಪ್ರಿಯರ ಮನಸ್ಸಿ ಛಾಪು ಹೊತ್ತಿವೆ. ಇತಿಹಾಸದ ಪುಟದಲ್ಲಿ ದಾಖಲೆ ಬರೆದ ಈ ಚಿತ್ರಕ್ಕೆ ಈಗ 25 ವರ್ಷ.
ದೇವ ಸಂಗೀತ ಸಂಯೋಜಿಸಿದ 'ಅಮೃತ ವರ್ಷಿಣಿ' ಹಾಡುಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಹಾಗೇ, ರಮೇಶ್ ಅರವಿಂದ್ ವೃತ್ತಿ ಬದುಕಿಗೂ ದೊಡ್ಡ ತಿರುವು ಕೊಟ್ಟ 'ಅಮೃತ ವರ್ಷಿಣಿ' ರಾಜ್ಯ ಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಚಿತ್ರ ತೆರೆಕಂಡು 25 ವರ್ಷ ತುಂಬಿದೆ. ಈ ಸಂತಸವನ್ನು 'ಅಮೃತ ವರ್ಷಿಣಿ' ಚಿತ್ರದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ಬಗ್ಗೆ ಪೋಸ್ಟರ್‌ಗಳನ್ನು ಹಂಚಿಕೊಂಡು 'ಅಮೃತ ವರ್ಷಿಣಿ'ಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ.

'ಅಮೃತ ವರ್ಷಿಣಿ' ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗೆ ಡಬ್ ಆಯ್ತು. ಈ ಭಾಷೆಗಳಲ್ಲೂ ಕೂಡ ಬ್ಲಾಕ್ ಬಸ್ಟರ್ ಆಗಿದ್ದ 'ಅಮೃತ ವರ್ಷಿಣಿ' ಸಿನಿಮಾ ಇದೀಗ ಸ್ಯಾಂಡಲ್ ವುಡ್ ನಲ್ಲಿ 25 ವರ್ಷಗಳು ತುಂಬಿದೆ.


Click it and Unblock the Notifications











