ಅಮೆರಿಕಾದಲ್ಲಿ ನಟ ರಮೇಶ್: ಅನಿವಾಸಿ ಕನ್ನಡಿಗರಿಗೆ ಸಿನಿಮಾ ಮೇಕಿಂಗ್ ತರಬೇತಿ

ನಟ ರಮೇಶ್ ಅರವಿಂದ್ ನಿಜ ಜೀವನದಲ್ಲಿ ಹಾಫ್ ಸೆಂಚುರಿ ಬಾರಿಸಿದ್ದಾರೆ ಅಂದ್ರೆ ಯಾರಾದ್ರೂ ನಂಬ್ತಾರಾ.? ವಯಸ್ಸು 55 ಆದರೂ ಇನ್ನೂ ಯಂಗ್ ಅಂಡ್ ಎನರ್ಜಿಟಿಕ್, ಹ್ಯಾಂಡ್ಸಮ್ ಆಗಿರುವ ರಮೇಶ್ ಅರವಿಂದ್ ಈಗಲೂ ಬಹುಬೇಡಿಕೆಯ ನಟ, ನಿರ್ದೇಶಕ.

'ಬಟರ್ ಫ್ಲೈ', '100', 'ಶಿವಾಜಿ ಸೂರತ್ಕಲ್', 'ಭೈರಾದೇವಿ'.. ಹೀಗೆ ಸಾಲು ಸಾಲು ಚಿತ್ರಗಳು ರಮೇಶ್ ಅರವಿಂದ್ ಕೈಯಲ್ಲಿದೆ. ತಮ್ಮ ಬಿಜಿ ಶೆಡ್ಯೂಲ್ ನಡುವೆಯೂ ನಟ ರಮೇಶ್ ಅರವಿಂದ್ ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೆ, ಅದರಲ್ಲೂ ಚಲನಚಿತ್ರರಂಗದಲ್ಲಿ ತೊಡಗಿಕೊಳ್ಳಬೇಕೆಂಬ ಆಸಕ್ತಿಯುಳ್ಳವರಿಗಾಗಿ ಎರಡು ದಿನಗಳ ಕಾಲ ವಿಶೇಷ ತರಬೇತಿ ಕಾರ್ಯಕ್ರಮವನ್ನು ನಡೆಸಿಕೊಡಲು ಮುಂದಾಗಿದ್ದಾರೆ.

ನಾರ್ಥ್ ಕ್ಯಾಲಿಫೋರ್ನಿಯಾದ ಕನ್ನಡ ಕೂಟದಲ್ಲಿ ಎರಡು ದಿನಗಳ ಕಾಲ ಈ ವಿಶೇಷ ತರಬೇತಿ ನಡೆಯಲಿದೆ. ಇದೇ ತಿಂಗಳ 18 ರಂದು 'ಕಾಫಿ, ಇಡ್ಲಿ ಅಂಡ್ ಮೂವೀಸ್' ಎಂಬ ಹೆಸರಿನಲ್ಲಿ 'ಮಾಸ್ಟರ್ ಕ್ಲಾಸಸ್ ಇನ್ ಫಿಲಂ ಮೇಕಿಂಗ್ ಬೈ ರಮೇಶ್ ಅರವಿಂದ್' ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Ramesh Aravind To Take Classes In Film Making For Kannadigas In America

ಇದರಲ್ಲಿ ಒಂದು ಕಥೆಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು, ಚಿತ್ರಕಥೆಯನ್ನು ಹೇಗೆ ಬರೆಯೋದು, ಆರ್ಟಿಸ್ಟ್ ಗಳನ್ನು ಹೇಗೆ ಸೆಲೆಕ್ಟ್ ಮಾಡೋದು ಮತ್ತು ಅವರಿಂದ ಹೇಗೆ ಆಕ್ಟಿಂಗ್ ತೆಗೆಸೋದು, ಮ್ಯೂಸಿಕ್ ಡೈರೆಕ್ಟರ್ ಹಾಗೂ ಕ್ಯಾಮರಾಮ್ಯಾನ್ ಜೊತೆ ಹೇಗೆ ಕೆಲಸ ಮಾಡೋದು ಎಂಬುದರ ಬಗ್ಗೆ ಇಲ್ಲಿ ವಿವರಣೆ ನೀಡಲಿದ್ದಾರೆ. ಜೊತೆಗೆ ಒಂದು ಸಿನಿಮಾವನ್ನು ಹೇಗೆಲ್ಲ ಮಾರ್ಕೆಟಿಂಗ್ ಮಾಡಬಹುದು ಎನ್ನುವುದರ ಬಗ್ಗೆಯೂ ರಮೇಶ್ ಅರವಿಂದ್ ತಿಳಿಸಿಕೊಡಲಿದ್ದಾರೆ.

ಬಳಿಕ 'ಪ್ರೀತಿಯಿಂದ ರಮೇಶ್' ಎಂಬ ಸ್ಪೆಷಲ್ ಶೋ ಅರೇಂಜ್ ಮಾಡಲಾಗಿದ್ದು, ಇದರಲ್ಲಿ ನಟ ರಮೇಶ್ ಅರವಿಂದ್ ಅವರ ಸಿನಿಮಾ ರಂಗದ ಲೈಫ್ ಸ್ಟೋರಿಯನ್ನು ತೋರಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಟ ರಮೇಶ್ ಅರವಿಂದ್ ಈಗಾಗಲೇ ಅಮೇರಿಕಾಗೆ ಪ್ರಯಾಣ ಬೆಳೆಸಿದ್ದಾರೆ.

More from Filmibeat

English summary
Kannada Actor Ramesh Aravind to take classes in Film Making for Kannadigas in America on Jan 18th and 19th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X