ಕಾಜಲ್ ಅಗರ್ವಾಲ್ ಗೆ ನಟ ರಮೇಶ್ ಶುಭಾಶಯ
ಸೌತ್ ಸಿನಿಮಾ ರಂಗದ ಕ್ವೀನ್ ನಟಿ ಕಾಜಲ್ ಅಗರ್ವಾಲ್ ಇಂದು ತಮ್ಮ ಹುಟ್ಟುಹಬ್ಬ ಸಂಭ್ರಮದಲ್ಲಿ ಇದ್ದಾರೆ. ಚಿತ್ರರಂಗದ ಸ್ನೇಹಿತರು ಹಾಗೂ ಅಭಿಮಾನಿಗಳು ಅವರಿಗೆ ಶುಭಾಶಯವನ್ನು ತಿಳಿಸುತ್ತಿದ್ದಾರೆ.
ನಟ ರಮೇಶ್ ಅರವಿಂದ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಾಜಲ್ ಗೆ ಪ್ರೀತಿಯ ವಿಶ್ ಮಾಡಿದ್ದಾರೆ. ನಿಮ್ಮ ಜೀವನ ಇದೇ ರೀತಿ ಸುಂದರವಾಗಿ ಹಾಗೂ ಹೊಳೆಯುತ್ತಿರಲಿ ಎಂದು ಶುಭ ಹಾರೈಸಿದ್ದಾರೆ. ನಿಮಗೆ ನಿರ್ದೇಶನ ಮಾಡುವುದು ಸಂತೋಷದ ವಿಷಯ ಎಂದಿದ್ದಾರೆ.
'ಪ್ಯಾರಿಸ್ ಪ್ಯಾರಿಸ್' ಸಿನಿಮಾವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದ ನಾಯಕಿ ಕಾಜಲ್ ಅಗರ್ವಾಲ್. ಈ ಚಿತ್ರ ಬಾಲಿವುಡ್ ನ 'ಕ್ವೀನ್' ಸಿನಿಮಾದ ರಿಮೇಕ್ ಆಗಿದೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.

ಅಂದಹಾಗೆ, ಕಾಜಲ್ ಅಗರ್ವಾಲ್ ಗೆ ತಮಿಳು, ತೆಲುಗು ಚಿತ್ರರಂಗದ ಸಾಕಷ್ಟು ಗಣ್ಯರು ವಿಶ್ ಮಾಡಿದ್ದಾರೆ. ಹುಟ್ಟುಹಬ್ಬದ ವಿಶೇಷವಾಗಿ ಅವರ ಹೊಸ ಸಿನಿಮಾಗಳ ಪೋಸ್ಟರ್ ಗಳು ಬಿಡುಗಡೆಯಾಗಿದೆ.
ಇನ್ನು ಕಾಜಲ್ ಕನ್ನಡ ಚಿತ್ರರಂಗದಲ್ಲಿ ಇದುವರೆಗೆ ಯಾವುದೇ ಸಿನಿಮಾ ಮಾಡಿಲ್ಲ. ಆದರೆ, ಪುನೀತ್ ರಾಜ್ ಕುಮಾರ್ ನಟನೆಯ 'ಚಕ್ರವ್ಯೂಹ' ಸಿನಿಮಾಗೆ ಒಂದು ಹಾಡನ್ನು ಹಾಡಿದ್ದಾರೆ.


Click it and Unblock the Notifications











