For Quick Alerts
  ALLOW NOTIFICATIONS  
  For Daily Alerts

  ಭಿನ್ನ ಕ್ರೈಂ ಥ್ರಿಲ್ಲರ್ ಕಟ್ಟಿಕೊಡಲಿದ್ದಾರೆ ರಮೇಶ್ ಅರವಿಂದ್: ತೆಲುಗಿನಲ್ಲೂ ಬಿಡುಗಡೆ

  |

  ಭಾವಪೂರ್ಣ ನಟ, ಸೃಜನಶೀಲ ನಿರ್ದೇಶಕ ರಮೇಶ್ ಅರವಿಂದ್ ಅವರು ಮತ್ತೊಮ್ಮೆ ನಿರ್ದೇಶಕರ ಟೋಪಿ ತೊಟ್ಟಿದ್ದಾರೆ.

  'ರಾಮ, ಶ್ಯಾಮ, ಭಾಮ' ಹಾಸ್ಯ ಸಿನಿಮಾದ ಮೂಲಕ ನಿರ್ದೇಶನ ಪ್ರಾರಂಭಿಸಿದ ರಮೇಶ್, ಹಾಸ್ಯ, ಪ್ರೇಮಕತೆ, ಥ್ರಿಲ್ಲರ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಮತ್ತೊಮ್ಮೆ ಭಿನ್ನ ಮಾದರಿಯ ಕ್ರೈಂ ಥ್ರಿಲ್ಲರ್ ಕತೆ ಕಟ್ಟಿಕೊಡಲು ಸಜ್ಜಾಗಿದ್ದಾರೆ ರಮೇಶ್ ಅರವಿಂದ್.

  ನಟ ರಮೇಶ್ ಅವರು ನಟಿಸಿ ನಿರ್ದೇಶಿಸಲಿರುವ ಕ್ರೈಂ ಥ್ರಿಲ್ಲರ್ ಹೆಸರು '100' ಈ ಸಿನಿಮಾವು ಇತ್ತೀಚಿನ ಸಮಸ್ಯೆಗಳಲ್ಲಿ ಒಂದಾಗಿರುವ ಸೈಬರ್ ಕ್ರೈಂ ಕುರಿತಾಗಿ ಆಗಿದೆ.

  ಸಿನಿಮಾ ಚಿತ್ರೀಕರಣವೆಲ್ಲಾ ಮುಗಿದಿದ್ದು, ಬಿಡುಗಡೆಗೆ ರೆಡಿಯಾಗಿದೆ. ಕೆಲವೇ ದಿನಗಳಲ್ಲಿ ಸಿನಿಮಾದ ಬಿಡುಗಡೆ ದಿನಾಂಕ ಸಹ ಘೋಷಣೆ ಆಗಲಿದೆ.

  ಸಾಮಾಜಿಕ ಜಾಲತಾಣದ ದುರ್ಬಳಕೆಯಿಂದ ಕುಟುಂಬವೊಂದಕ್ಕೆ ಹೇಗೆ ಹಾನಿ ಆಗುತ್ತದೆ. ಅಪರಾಧವೊಂದು ಹೇಗೆ ಘಟಿಸುತ್ತದೆ. ಅಪರಾಧದ ತನಿಖೆ ಹಾಗೂ ಶಿಕ್ಷೆ ಹೇಗೆ ಎಂಬುದು ಸಿನಿಮಾದಲ್ಲಿರಲಿದೆ. ಫೇಸ್‌ಬುಕ್ ಈ ಸಿನಿಮಾದ ಕತೆಯ ಪ್ರಮುಖ ಅಂಶ ಎಂದಿದ್ದಾರೆ ನಟ ರಮೇಶ್ ಅರವಿಂದ್.

  ಸಿನಿಮಾವನ್ನು ಸೂರಜ್ ಪ್ರೊಡಕ್ಷನ್ ಅಡಿ ರಮೇಶ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. 'ಸಿನಿಮಾವು ಸಮಾಜದ ಪ್ರಸ್ತುತ ಸನ್ನಿವೇಶಕ್ಕೆ ಕೈಗನ್ನಡಿಯಂತಿದೆ ಹಾಗಾಗಿ ಎಲ್ಲ ಭಾಷೆಗಳಲ್ಲೂ ಸಿನಿಮಾ ಪ್ರಸ್ತುತ ಎನಿಸಿಕೊಳ್ಳುವ ಗುಣ ಇರುವ ಕಾರಣ ತೆಲುಗಿಗೆ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡುವ ನಿರ್ಧಾರ ಮಾಡಿದ್ದೇವೆ' ಎಂದರು.

  ಇದೇ ಕತೆ ಹಿಂದಿಯಲ್ಲಿಯೂ ಸಿನಿಮಾ ಆಗಲಿದೆ. ಹಿಂದಿ ಸಿನಿಮಾವನ್ನು ಸಹ ರಮೇಶ್ ರೆಡ್ಡಿ ಅವರೇ ನಿರ್ಮಾಣ ಮಾಡಲಿದ್ದಾರೆ. ಅಲ್ಲಿ ಸುಸಿ ಗಣೇಶ್ ಎಂಬುವರು ನಿರ್ದೇಶನ ಮಾಡಲಿದ್ದಾರೆ.

  Bigg Boss Kannada Season 8 : ಬಿಗ್ ಬಾಸ್ ಮನೆಗೆ ಹೋಗ್ತಿರೋ ರಾಜಕಾರಿಣಿಯ ಬಗ್ಗೆ ಹೇಳಿದ ಪರಮೇಶ್ವರ್ ಗುಂಡ್ಕಲ್

  ಸಿನಿಮಾದಲ್ಲಿ ರಮೇಶ್ ಅರವಿಂದ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ ಗೆ ಜೋಡಿಯಾಗಿ ಪೂರ್ಣಾ ನಟಿಸಿದ್ದಾರೆ. ರಚಿತಾ ರಾಮ್ ರಮೇಶ್ ಸಹೋದರಿಯಾಗಿ ನಟಿಸಿದ್ದಾರೆ.

  English summary
  Ramesh Arvind directed movie 100 to be release in Telugu also. this movie is based on cyber crime.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X