Shivaji Surathkal -2 Trailer: ಕ್ರೈಂ.. ಸಸ್ಪೆನ್ಸ್.. ಥ್ರಿಲ್.. ಮಿಸ್ಟರಿ: ಸೀಟಿನ ತುದಿಗೆ ತಂದು ಕೂರಿಸುವ ಪತ್ತೇಧಾರಿ

'ಶಿವಾಜಿ ಸುರತ್ಕಲ್ - 2 ದ ಮಿಸ್ಟೀರಿಯಸ್ ಕೇಸ್ ಆಫ಼್ ಮಾಯಾವಿ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇಂತಹ ಹೊತ್ತಲ್ಲೇ ಟ್ರೈಲರ್ ರಿಲೀಸ್ ಮಾಡಿ ಸಿನಿಮಾ ಬಗ್ಗೆ ಮತ್ತಷ್ಟು ನಿರೀಕ್ಷೆ ಹುಟ್ಟಾಕ್ಕಿದೆ ಚಿತ್ರತಂಡ. ಮತ್ತೊಮ್ಮೆ ರಮೇಶ್ ಅರವಿಂದ್ ಡಿಟೆಕ್ಟಿವ್ ಶಿವಾಜಿ ಸುರತ್ಕಲ್ ಪಾತ್ರದಲ್ಲಿ ಥ್ರಿಲ್ ಕೊಡೊಕೆ ಬರ್ತಿದ್ದಾರೆ. ಪಾರ್ಟ್‌- 2ಗೆ ತಕ್ಕಂತೆ ಈ ಚಿತ್ರದಲ್ಲಿ ಎಲ್ಲವೂ ಡಬಲ್ ಆಗಿದೆ. ಸ್ಟೋರಿ, ಸ್ಕ್ರೀನ್‌ಪ್ಲೇ ಕೂಡ ಅಷ್ಟೇ ಕಿಕ್ ಕೊಡಲಿದೆ.

3 ವರ್ಷಗಳ ಹಿಂದೆ ತೆರೆಗಪ್ಪಳಿಸಿದ 'ಶಿವಾಜಿ ಸುರತ್ಕಲ್' ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು. ಕೊರೋನಾ ಲಾಕ್‌ಡೌನ್‌ನಿಂದ ಥಿಯೇಟರ್‌ಗಳಲ್ಲಿ ಚಿತ್ರಕ್ಕೆ ಕೊಂಚ ಹಿನ್ನಡೆಯಾದರೂ ಓಟಿಟಿಯಲ್ಲಿ ಸಕ್ಸಸ್ ಕಂಡಿತ್ತು. ಅಂದಿನಿಂದಲೇ ಸಿನಿಮಾ ಸೀಕ್ವೆಲ್‌ ಬಗ್ಗೆ ನಿರೀಕ್ಷೆ ಹುಟ್ಟಿಕೊಂಡಿತ್ತು. ಈ ಬಾರಿ ಶಿವಾಜಿ ಸುರತ್ಕಲ್ ಕೇಸ್‌ ನಂ. 131 ಹಿಂದೆ ಬಿದ್ದಿದ್ದಾನೆ. ಮತ್ತಷ್ಟು ಸವಾಲುಗಳು ಆತನಿಗೆ ಈ ಕೇಸ್‌ನಲ್ಲಿ ಎದುರಾಗುತ್ತಿದೆ. ಕಣ್ಣ ಮುಂದೆ ಇರುವ ಕೊಲೆಗಾರನನ್ನು ಹಿಡಿಯಲು ಶಿವಾಜಿ ಏನೆಲ್ಲಾ ಸರ್ಕಸ್ ಮಾಡ್ತಾನೆ ಅನ್ನೋದನ್ನು ತೆರೆಮೇಲೆ ನೋಡಬೇಕು.

Ramesh Arvind Starrer Shivaji Surathkal 2 The Mysterious Case Of Maayavi Trailer Released

ಒಂದರ ಹಿಂದೊಂದರಂತೆ ನಡೆಯುವ ಯುವತಿಯರ ಕೊಲೆಗಳು. ಯಾರು ಆ ಕೊಲೆಗಳನ್ನು ಮಾಡ್ತಿದ್ದಾರೆ? ಆತನಿಗೂ ಶಿವಾಜಿಗೂ ಹಾಗೂ ವಿಕ್ಟಿಮ್‌ಗಳಿಗೂ ಇರುವ ಲಿಂಕ್ ಏನು? ಆ ಮಾಯಾವಿಯ ಜಾಲವನ್ನು ಶಿವಾಜಿ ಹೇಗೆ ಭೇದಿಸುತ್ತಾನೆ ಅನ್ನೋದು ನೋಡುಗರಿಗೆ ಮಜಾ ಕೊಡಲಿದೆ. ರಮೇಶ್ ಅರವಿಂದ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಾಜಿ -1 ಹಾಗೂ ಶಿವಾಜಿ- 2 ಆಗಿ ಕಾಣಿಸಿಕೊಂಡಿದ್ದು, ನೆಗೆಟಿವ್ ರೋಲ್ ಶಿವಾಜಿ- 2 ಬಗ್ಗೆ ಕುತೂಹಲ ಮೂಡಿದೆ.

ಮೊದಲ ಚಿತ್ರದ ಕಥೆ ಮುಗಿದ 6 ವರ್ಷಗಳ ನಂತರ ಹೊಸ ಕಥೆ ಶುರುವಾಗಿದೆ. ಪತ್ನಿಯನ್ನು ಕಳೆದುಕೊಂಡ ಶಿವಾಜಿ ಸೂರತ್ಕಲ್ ಲೈಫ್‌ ಅಲ್ಲಿ ಮಗಳು ಚುಕ್ಕಿ ಸೂರತ್ಕಲ್ ಆಗಮನವಾಗಿದೆ. ತನ್ನ ಎಲ್ಲಾ ನ್ಯೂನ್ಯತೆಗಳನ್ನು ಮೀರಿ ಕೆಲಸ ಮಾಡುತ್ತಿರುವ ಶಿವಾಜಿಗೆ ಕೇಸ್‌ ನಂ 131 ದೊಡ್ಡ ಸವಾಲಾಗುತ್ತದೆ. ಅದನ್ನು ಭೇದಿಸಲು ಸಾಧ್ಯವಾಗುತ್ತಿಲ್ಲ. ಒಂದು ಹಂತದಲ್ಲೇ ಶಿವಾಜಿಯೇ ಈ ಸುಳಿಯಲ್ಲಿ ಸಿಲುಕಿಕೊಂಡು ಬಿಡುತ್ತಾನೆ. ಅಥವಾ ಇದೆಲ್ಲಾ ಮಾನಸಿಕವಾಗಿ ಕುಗ್ಗಿದ ಶಿವಾಜಿಯ ಕಲ್ಪನೆ ಮಾತ್ರನಾ? ಎನ್ನುವ ಅನುಮಾನ ಮೂಡುತ್ತದೆ.

ಕುತೂಹಲಭರಿತವಾಗಿ ನೋಡಿಸಿಕೊಂಡು ಹೋಗುವ ಟ್ರೈಲರ್ ಕೊನೆಗೆ ಕನ್ಫ್ಯೂಸ್ ಮಾಡುತ್ತದೆ. ಆ ಕನ್ಫ್ಯೂಸ್‌ಗೆ ಕ್ಲಾರಿಟಿ ಸಿಗಬೇಕು ಅಂದರೆ ಎಲ್ಲರೂ ಸಿನಿಮಾ ನೋಡಲೇಬೇಕು. ಸಸ್ಪೆನ್ಸ್ ಥ್ರಿಲ್ ಕಥೆಯ ಜೊತೆ ಜೊತೆಗೆ ತಂದೆ ಮಗ, ಗಂಡ ಹೆಂಡತಿ ಹಾಗೂ ತಂದೆ ಮಗಳ ಬಾಂಧವ್ಯದ ಚಿತ್ರಣವೂ 'ಶಿವಾಜಿ ಸುರತ್ಕಲ್ - 2' ಚಿತ್ರದಲ್ಲಿದೆ. ಶೋಭರಾಜ್, ಮೇಘನಾ ಗಾಂವ್ಕರ್, ನಾಜರ್, ರಾಧಿಕಾ ಚೇತನ್ ಚಿತ್ರದ ತಾರಾಗಣದಲ್ಲಿದ್ದಾರೆ. ಸರಣಿಯ 2ನೇ ಚಿತ್ರವನ್ನು ನಿರ್ದೇಶಕ ಆಕಾಶ್ ಶ್ರೀವತ್ಸ ಸೊಗಸಾಗಿ ತೆರೆಗೆ ತರ್ತಿದ್ದಾರೆ.

Ramesh Arvind Starrer Shivaji Surathkal 2 The Mysterious Case Of Maayavi Trailer Released

ಶಿವಾಜಿ ಸುರತ್ಕಲ್ ಮೇಲಾಧಿಕಾರಿ ಆಗಿ ನಟಿ ಮೇಘನಾ ಗಾಂವ್ಕರ್ ನಟಿಸಿದ್ದಾರೆ. ಸಿನಿಮಾ ಕ್ಯಾಮರಾ ವರ್ಕ್, ಬಿಜಿಎಂ ಎಲ್ಲವೂ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ಪೂರಕವಾಗಿದೆ. ಮತ್ತೊಮ್ಮೆ ಶಿವಾಜಿ ಆಗಿ ರಮೇಶ್ ಅರವಿಂದ್ ಎನರ್ಜಿಟಿಕ್ ಪರ್ಫಾರ್ಮೆನ್ಸ್ ನೀಡಿದ್ದಾರೆ. ಚಿತ್ರತಂಡ ಹೇಳುವಂತೆ ಮೊದಲ ಭಾಗಕ್ಕಿಂತ 2 ನೇ ಭಾಗ ಹಲವು ಪಟ್ಟು ದೊಡ್ಡದಾಗಿದೆಯಂತೆ. ಓಟಿಟಿಗೆ ಕಾಯದೇ ಎಲ್ಲರೂ ಥಿಯೇಟರ್‌ನಲ್ಲೇ ಸಿನಿಮಾ ನೋಡಿ ಎಂದು ಚಿತ್ರತಂಡ ಹೇಳಿದೆ.

ಎಲೆಕ್ಷನ್, ಐಪಿಎಲ್ ಭರಾಟೆ ನಡುವೆಯೂ ಏಪ್ರಿಲ್ 14ಕ್ಕೆ ಶಿವಾಜಿ ಸುರತ್ಕಲ್ ಹೊಸ ಪ್ರಕರಣದ ತನಿಖೆ ಆರಂಭವಾಗಲಿದೆ. ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ಬ್ಯಾನರ್‌ನಲ್ಲಿ ಅನೂಪ್ ಗೌಡ ಮತ್ತು ರೇಖಾ ಕೆ. ಎನ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

More from Filmibeat

English summary
Ramesh Arvind Starrer Shivaji Surathkal 2 The Mysterious Case Of Maayavi Trailer Released. The film is scheduled to be theatrically released on 14 April 2023. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X